
ಹಿಟ್ ಸಿನಿಮಾಗಳ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗಿದೆ. ಯಾವುದೇ ಸಿನಿಮಾ ಹಿಟ್ ಆದರೂ ಅದರ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಗಳನ್ನು ಮಾಡಲಾಗುತ್ತಿದೆ. ಇದೀಗ ಇದೇ ಪಟ್ಟಿಗೆ ಸೇರಲಿದೆ ಸತೀಶ್ ನೀನಾಸಂ, ರಚಿತಾ ರಾಮ್ ನಟನೆಯ ‘ಅಯೋಗ್ಯ’ ಸಿನಿಮಾ. 2018 ರಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದ ‘ಅಯೋಗ್ಯ’ ಸಿನಿಮಾದ ಸೀಕ್ವೆಲ್ ನಿರ್ಮಾಣವಾಗುತ್ತಿದ್ದು, ಅದೇ ಜೋಡಿ ಈಗ ಮತ್ತೆ ಒಂದಾಗಿದೆ.
ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಅಯೋಗ್ಯ ಸಿನಿಮಾದ ಪಾರ್ಟ್ 2 ಸೆಟ್ಟೇರುತ್ತಿದ್ದು, ಈಗಾಲೇ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ.
6 ವರ್ಷದ ಹಿಂದೆ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ ಸಿನಿಮಾ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು. ಈಗ ಮತ್ತದೇ ತಂಡ ‘ಅಯೋಗ್ಯ 2’ ಸಿನಿಮಾ ಮೂಲಕ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನು ‘ಅಯೋಗ್ಯ 2’ ಸಿನಿಮಾ ಡಿಸೆಂಬರ್ 11ರಂದು ಸೆಟ್ಟೇರಲಿದ್ದು, ಮಹೇಶ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಎಂ ಮುನೇಗೌಡ ‘ಅಯೋಗ್ಯ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಇರಲಿದೆ. ‘ಅಯೋಗ್ಯ’ ಸಿನಿಮಾಕ್ಕೆ ಸಂಗೀತ ನೀಡಿದ್ದ ಅರ್ಜುನ್ ಜನ್ಯ ಅವರೇ ಹೊಸ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ವಿಶ್ವಜಿತ್ ರಾವ್ ಅವರು ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. ಸುರೇಶ್ ಆರ್ಮುಗಂ ಎಡಿಟರ್. ಸಂಭಾಷಣೆಯನ್ನು ಮಾಸ್ತಿ ಬರೆಯಲಿದ್ದಾರೆ. ಭರ್ಜರಿ ಚೇತನ್ ಹಾಡುಗಳಿಗೆ ಸಾಹಿತ್ಯ ಒದಗಿಸಲಿದ್ದಾರೆ.
Advertisement