Arjun Janya
ಹಾಲಿವುಡ್ ತಂತ್ರಜ್ಞರೊಂದಿಗೆ ಅರ್ಜುನ್ ಜನ್ಯ

ಅರ್ಜುನ್ ಜನ್ಯರ '45' ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು! ಆಸ್ಕರ್ ನಾಮಿನೇಟೆಡ್ ಮಾರ್ಸ್ ಕಂಪನಿ ಜೊತೆ CG ಕೆಲಸ

'45' ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ.
Published on

ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜನೆಯಿಂದ ಹೆಸರುವಾಸಿಯಾಗಿರುವ ಅರ್ಜುನ್ ಜನ್ಯ, ತಮ್ಮ ಮಹತ್ವಕಾಂಕ್ಷೆ ಚೊಚ್ಚ ನಿರ್ದೇಶನದ ಚಿತ್ರದ ಕೆಲಸದಲ್ಲಿ ಮಗ್ನರಾಗಿದ್ದಾರೆ. ಶಿವರಾಜಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ಒಳಗೊಂಡಿರುವ ಈ ಚಿತ್ರ, ಬಹು ತಾರಾಗಣದ ಜೊತೆಗೆ ಅರ್ಜುನ್ ಜನ್ಯ ನೇತೃತ್ವದಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಗ್ರಾಫಿಕ್ಸ್ ನ(CG) ವಿಶಿಷ್ಟ ವಿಧಾನದದೊಂದಿಗೆ ದೃಶ್ಯದ ಕಥೆ ಹೇಳಲಾಗುತ್ತಿದೆ.

45' ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರು ಕೆನಡಾ ಮೂಲದ ಆಸ್ಕರ್-ನಾಮನಿರ್ದೇಶಿತ ಕಂಪನಿಯಾದ MARZ ಜೊತೆಗೆ ಚಿತ್ರದ CG ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಇದು ಅದರ ಕಥೆ ಹೇಳುವಿಕೆಗೆ ಸಂಪೂರ್ಣ ಹೊಸ ಆಯಾಮ ಸೇರಿಸುವ ಭರವಸೆ ನೀಡಿದೆ. ಬ್ಲ್ಯಾಕ್ ಪ್ಯಾಂಥರ್, ದಿ ಮ್ಯಾಟ್ರಿಕ್ಸ್ ಮತ್ತು ಆಂಟ್-ಮ್ಯಾನ್‌ನಂತಹ ಬ್ಲಾಕ್‌ಬಸ್ಟರ್‌ಗಳಿಗೆ ಚಿತ್ರಗಳಿಂದ ಹೆಸರುವಾಸಿಯಾದ ಜಸ್ಟಿನ್‌ನಂತಹ ತಜ್ಞರ ನೇತೃತ್ವದ MARZ ಸಹಯೋಗ ಚಿತ್ರಕ್ಕೆ ವಿಶ್ವದರ್ಜೆಯ ತಾಂತ್ರಿಕ ಸ್ಪರ್ಶ ನೀಡಿದೆ.

Arjun Janya
ಅರ್ಜುನ್ ಜನ್ಯ ನಿರ್ದೇಶನದ '45' ಮೂಲಕ ನಟ ಜಾಫರ್ ಸಾದಿಕ್, ರಾಜೇಂದ್ರನ್ ಕನ್ನಡಕ್ಕೆ ಪದಾರ್ಪಣೆ

ಚಿತ್ರದ CG ಕೆಲಸಗಳು ಸರಾಗವಾಗಿ ಸಾಗುತ್ತಿದ್ದು, ಈಗಾಗಲೇ ಶೇ. 25ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನ ಒದಗಿಸಲು ಅರ್ಜುನ್ ಖುದ್ದಾಗಿ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಏಕೆಂದರೆ ಇದು ಸಿಜಿ ಕೆಲಸವನ್ನು ಹೆಚ್ಚು ಅವಲಂಬಿಸಿದೆ. ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com