
ಮಾರ್ಟಿನ್ ಬಿಡುಗಡೆಯ ನಂತರ ಧ್ರುವ ಸರ್ಜಾ, ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ, ಪ್ರೇಮ್ ಅವರ ಕೆಡಿ ಸಿನಿಮಾ ಕೂಡ ಅಂತಿಮ ಘಟ್ಟಕ್ಕೆ ತಲುಪಿದೆ. ಇದರ ಜೊತೆಗೆ ಧ್ರುವ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಹಿದ್ದಾರೆ. ಗಾಂಧಿನಗರದ ಇತ್ತೀಚಿನ ಸುದ್ದಿಯ ಪ್ರಕಾರ, ಕೆರೆಬೇಟೆ ನಿರ್ದೇಶಕ ರಾಜಗುರು ಅವರು ನಿರ್ದೇಶಿಸಲಿರುವ ಚಿತ್ರಕ್ಕೆ ಧ್ರುವ ಸರ್ಜಾ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೀನುಗಾರರ ಜೀವನಾಧಾರಿತ ಚಿತ್ರವಾದ ಕೆರೆಬೇಟೆ ಚಿತ್ರದ ಮೂಲಕ ರಾಜ್ ಗುರು ಚೊಚ್ಚಲ ನಿರ್ದೇಶನಕ್ಕಿಳಿದರು.'ಕೆರೆಬೇಟೆ' ಎಂದರೆ ಮಲೆನಾಡ ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡ ಭಾಗದಲ್ಲಿ ವರ್ಷಕೊಮ್ಮೆ ಕೆರೆಬೇಟೆ ಆಡುತ್ತಾರೆ. ದೊಡ್ಡ ದೊಡ್ಡ ಕೆರೆಗಳಲ್ಲಿ ಈ ಮೀನು ಬೇಟೆ ನಡೆಯುತ್ತದೆ. ಸೊರಬ ಸುತ್ತಮುತ್ತ ಇದರ ಆಚರಣೆಯನ್ನು ದೊಡ್ಡಮಟ್ಟದಲ್ಲಿ ಮಾಡಲಾಗುತ್ತದೆ. ಈ 'ಕೆರೆಬೇಟೆ' ಸಿನಿಮಾದಲ್ಲಿ ಈ ಅಂಶವನ್ನೇ ಮುಖ್ಯವಾಗಿ ಇಟ್ಟುಕೊಂಡು ಕಥೆ ಮಾಡಲಾಗಿತ್ತು. ಸಾಂಸ್ಕೃತಿಕವಾಗಿ ಶ್ರೀಮಂತ ನಿರೂಪಣೆಗಾಗಿ ಸಿನಿಮಾ ಗಮನ ಸೆಳೆಯಿತು ಮತ್ತು IFFI ನಂತಹ ವೇದಿಕೆಗಳಿಗೂ ತಲುಪಿತ್ತು.
ರಾಜ್ ಗುರು ಅವರ ಮುಂಬರುವ ಚಿತ್ರವು ಅದರ ಪೂರ್ವ-ನಿರ್ಮಾಣ ಹಂತದಲ್ಲಿದೆಯಾದರೂ, ಮತ್ತೊಮ್ಮೆ ಕರ್ನಾಟಕದ ಸಂಪ್ರದಾಯಗಳಲ್ಲಿ ಹಳ್ಳಿಯ ಹಿನ್ನೆಲೆಯೊಂದಿಗೆ ಆಳವಾಗಿ ಬೇರೂರಿದೆ ಎಂದು ವದಂತಿಗಳಿವೆ. ಆದರೆ, ಊಹಾಪೋಹದ ಪ್ರಕಾರ, ಕೆರೆಬೇಟೆಯಲ್ಲಿ ಚಿತ್ರದಂತಿರುವುದಿಲ್ಲ ಎಂದು ಹೇಳಲಾಗಿದೆ. ನಿರ್ದೇಶಕರು ಈ ಸಂಬಂಧ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಅಧಿಕೃತ ಪ್ರಕಟಣೆಯೊಂದಿಗೆ ನಿರ್ಮಾಣ ವಿವರಗಳು ಮತ್ತು ತಾರಾ ಬಳಗವನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಈಗಾಗಗಲೇ ಧ್ರುವ ಕೆಲ ಮಾಡುತ್ತಿದ್ದಾರೆ, ನಟ ರಾಘವೇಂದ್ರ ಹೆಗಡೆಯಂತಹ ನಿರ್ದೇಶಕರು ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯಂತಹ ನಿರ್ಮಾಣ ಸಂಸ್ಥೆಗಳೊಂದಿಗೆ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ.
Advertisement