ರಚಿತಾ ರಾಮ್ - ನೀನಾಸಂ ಸತೀಶ್ ನಟನೆಯ ಅಯೋಗ್ಯ-2 ಮೂರು ಭಾಷೆಯಲ್ಲಿ ತೆರೆಗೆ

ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳುತ್ತಿದ್ದಾರೆ. ಮುನೇಗೌಡ ಅವರು ‘ಎಸ್​ವಿಸಿ ಪ್ರೊಡಕ್ಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ
Ayogya-2 cinema Pooja ceremony
ಅಯೋಗ್ಯ-2 ಸಿನಿಮಾ ಮೂಹೂರ್ತ
Updated on

2019 ರಲ್ಲಿ ಅಯೋಗ್ಯ ಎಂಬ ಬ್ಲಾಕ್‌ಬಸ್ಟರ್ ಚಿತ್ರದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಆರು ವರ್ಷಗಳ ನಂತರ ಅದರ ಬಹು ನಿರೀಕ್ಷಿತ ಅಯೋಗ್ಯ 2 ಗಾಗಿ ಮತ್ತೆ ಒಂದಾಗುತ್ತಿದ್ದಾರೆ.

ಈ ಚಿತ್ರವು ಬುಧವಾರ ಸಾಂಪ್ರದಾಯಿಕ ಪೂಜಾ ಸಮಾರಂಭದೊಂದಿಗೆ ಅದ್ಧೂರಿಯಾಗಿ ಆರಂಭವಾಯಿತು, ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳುತ್ತಿದ್ದಾರೆ. ಮುನೇಗೌಡ ಅವರು ‘ಎಸ್​ವಿಸಿ ಪ್ರೊಡಕ್ಷನ್’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮುಹೂರ್ತ ಕಾರ್ಯಕ್ರಮಕ್ಕೆ ಬಂದು ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ನೆನಪಿರಲಿ ಪ್ರೇಮ್, ಶ್ರೇಯರ್ ಮಂಜು, ಪ್ರಮೋದ್ ಮುಂತಾದವರು ಕೂಡ ಹಾಜರಿದ್ದು ಶುಭ ಕೋರಿದರು.

ಅಯೋಗ್ಯ 2 ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗಲಿದೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಯ ಮೇಲೆ ನೋಡುವುದು ಸಂತೋಷವಾಗಿದೆ. ಇದು ಪ್ಯಾನ್-ಇಂಡಿಯಾ ಚಿತ್ರವಲ್ಲ ಆದರೆ ಕನ್ನಡದ ಜೊತೆ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್​ ಮಾಡಲಿದ್ದೇವೆ’ ಎಂದು ಮಹೇಶ್ ಹೇಳಿದ್ದಾರೆ. ನಟ ಸತೀಶ್ ನೀನಾಸಂ ಮಾತನಾಡಿ "ಈ ಯೋಜನೆಗೆ ನಿರ್ಮಾಪಕರ ದೊಡ್ಡ ಪಟ್ಟಿ ಇತ್ತು, ಆದರೆ ಮುನೇಗೌಡ ಅವರನ್ನು ಅಂತಿಮಗೊಳಿಸಲಾಗಿದೆ. ಅವರು ಅತ್ಯುತ್ತಮ ನಿರ್ಮಾಪಕ, ಮತ್ತು ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಪ್ರಮುಖ ಮೈಲಿಗಲ್ಲು ಆಗಲಿದೆ" ಎಂದು ಹರ್ಷ ವ್ಯಕ್ತಪಡಿಸಿದರು. ಆರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಅಯೋಗ್ಯ ಮುಹೂರ್ತ ಪೂಜೆ ನಡೆದಿತ್ತು. ಅಶ್ವಿನಿ ಮೇಡಂ ಅವರ ಆಶೀರ್ವಾದದೊಂದಿಗೆ ಮರಳಿ ಬಂದಿರುವುದು ಸಂತಸದ ಕ್ಷಣ. ಮೊದಲ ಭಾಗವು ಅದ್ಧೂರಿಯಾಗಿ ಯಶಸ್ವಿಯಾಗಿದೆ ಎಂದರು.

Ayogya-2 cinema Pooja ceremony
ಮತ್ತೆ ಒಂದಾದ ಸಕ್ಸಸ್ ಜೋಡಿ ರಚಿತಾ ರಾಮ್, ಸತೀಶ್ ನಿನಾಸಂ: ಅಯೋಗ್ಯ-2 ಸೀಕ್ವೆಲ್ ಗೆ ಮೂಹೂರ್ತ ಫಿಕ್ಸ್

ಮಹೇಶ್ ಅಯೋಗ್ಯ 2 ಬಗ್ಗೆ ಪ್ರಸ್ತಾಪಿಸಿದಾಗ, ನಾನು ಹಿಂಜರಿಕೆಯಿಲ್ಲದೆ ಒಪ್ಪಿಕೊಂಡೆ. ಮೊದಲ ಭಾಗವು ಬ್ಲಾಕ್ ಬಸ್ಟರ್ ಆಗಿತ್ತು, ಮತ್ತು ಅಂತಹ ಪ್ರತಿಭಾವಂತ ತಂಡದೊಂದಿಗೆ ಈ ಸೀಕ್ವೆಲ್ ಹೊಸ ಮಾಡುವುದು ಖುಷಿಯ ವಿಚಾರ ಎಂದು ನಿರ್ಮಾಪಕ ಮುನೇಗೌಡ ಹೇಳಿದ್ದಾರೆ. ಮೂಲ ಅಯೋಗ್ಯ ಸಿದ್ದೇಗೌಡ ಮತ್ತು ನಂದಿನಿ ಪ್ರೇಮಕಥೆಯನ್ನು ಅನುಸರಿಸಿದ್ದು, ಅದೇ ತಂಡವು ಅಯೋಗ್ಯ 2 ಗಾಗಿ ಮತ್ತೆ ಒಂದಾಗಿರುವುದು ಈಗಾಗಲೇ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಹಿರಿಯ ನಟ ಸುಂದರ್ ರಾಜ್, ತಬಲಾ ನಾಣಿ, ಮತ್ತು ಶಿವರಾಜ್ ಕೆಆರ್ ಪೇಟೆ ಸೇರಿದಂತೆ ಮೂಲ ತಾರಾಗಣ ಮತ್ತು ತಂಡದ ಅನೇಕರು ತಮ್ಮ ಪಾತ್ರಗಳನ್ನು ಪುನರಾವರ್ತಿಸಲು ಸಿದ್ಧರಾಗಿದ್ದಾರೆ. ಹೆಚ್ಚುವರಿಯಾಗಿ ಮಂಜು ಪಾವಗಡ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಮಾಸ್ತಿಯವರ ಸಂಭಾಷಣೆ, ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ, ಅಯೋಗ್ಯ 2 ತುಂಬಲು ದೊಡ್ಡ ತಾರಾಬಳಗ ಹೊಂದಿದೆ. ಮಂಡ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com