
ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಮಜಾ ಟಾಕೀಸ್ ಅಭಿಮಾನಿಗಳಿಗೆ ಸೃಜನ್ ಲೋಕೇಶ್ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಕಲರ್ಸ್ ಚಾನಲ್ majaa talkies ಕುರಿತ ಪ್ರೋಮೋ ಹಂಚಿಕೊಂಡಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ಶೋ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಮಜಾ ಟಾಕೀಸ್’ ಶೋ ಮತ್ತೆ ಶುರುವಾಗುತ್ತಿದೆ ಎಂದು ಸ್ವತಃ ಸೃಜನ್ ಲೋಕೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ ಎಂದು ಹೇಳಿರುವ ಸೃಜನ್ ಮತ್ತೆ ಕಿರುತೆರೆಯಲ್ಲಿ ರಂಜಿಸಲು ಸಜ್ಜಾಗಿದ್ದಾರೆ. ಮಜಾ ಟಾಕೀಸ್ 2015 ರಲ್ಲಿ ಆರಂಭವಾಗಿದ್ದ ಶೋ ಆಗಿದ್ದು, 2025ಕ್ಕೆ ಒಂದು ದಶಕ ಪೂರ್ಣಗೊಳಿಸುತ್ತಿದೆ.
ಮಜಾ ಟಾಕೀಸ್ ನಲ್ಲಿ ವರಲಕ್ಷ್ಮಿ ಪಾತ್ರದ ಮೂಲಕ ಜನತೆಯನ್ನು ರಂಜಿಸುತ್ತಿದ್ದ ಅಪರ್ಣಾ ಅವರ ಅನುಪಸ್ಥಿತಿ ಈ ಬಾರಿಯ ಶೋನಲ್ಲಿ ಎಲ್ಲರನ್ನೂ ಕಾಡಲಿದೆ.
ಮಜಾ ಟಾಕೀಸ್ ಮತ್ತೆ ಆರಂಭವಾಗುವ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
Advertisement