ಈ ವರ್ಷ ನನ್ನ ಒಂದು ಸಿನಿಮಾ ಕೂಡ ಬಿಡುಗಡೆಯಾಗಲಿಲ್ಲ, ನಾನು ಬೇಸರಗೊಂಡಿಲ್ಲ: ನಟ ಪ್ರಜ್ವಲ್ ದೇವರಾಜ್

2024 ರಲ್ಲಿ ನಾನು ಶೂಟಿಂಗ್ ನಲ್ಲಿಸಂಪೂರ್ಣ ನಿರತನಾಗಿದ್ದೇನೆ, ನಾನು ಪ್ರಾಜೆಕ್ಟ್ ಗಳನ್ನು ಹೆಚ್ಚು ಜಾಗರೂಕನಾಗಿ ಆಯ್ಕೆ ಮಾಡಿಕೊಂಡೆ.
Prajwal Devaraj
ಪ್ರಜ್ವಲ್ ದೇವರಾಜ್
Updated on

2024ರಲ್ಲಿ ಪ್ರಜ್ವಲ್ ನಟನೆಯ ಅನೇಕ ಸಿನಿಮಾ ಶೂಟಿಂಗ್ ಗಳು ನಡೆದವು, ಆದರೆ ಈ ವರ್ಷ ಒಂದು ಸಿನಿಮಾ ಕೂಡ ಬಿಡುಗಡೆಯಾಗಲಿಲ್ಲ, ಹಾಗೆಂದ ಮಾತ್ರಕ್ಕೆ ನಾನು ಬೇಸರಗೊಂಡಿಲ್ಲ, ನನಗೆ ತೃಪ್ತಿಯಿದೆ ಎಂದಿದ್ದಾರೆ.

2024 ರಲ್ಲಿ ನಾನು ಶೂಟಿಂಗ್ ನಲ್ಲಿಸಂಪೂರ್ಣ ನಿರತನಾಗಿದ್ದೇನೆ, ನಾನು ಪ್ರಾಜೆಕ್ಟ್ ಗಳನ್ನು ಹೆಚ್ಚು ಜಾಗರೂಕನಾಗಿ ಆಯ್ಕೆ ಮಾಡಿಕೊಂಡೆ,ಮತ್ತಷ್ಟು ಸಿನಿಮಾ ಕಥೆಗಳನ್ನು ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ. ಪ್ರಜ್ವಲ್ ಅವರು ಗಣ, ಮಾಫಿಯಾ ಮತ್ತು ರಾಕ್ಷಸ ಎಂಬ ಮೂರು ಚಿತ್ರಗಳ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರಸ್ತುತ ಹಿರಿಯ ನಿರ್ದೇಶಕ ರಾಜಾ ಕಲೈ ಕುಮಾರ್ ಅವರ ಚೊಚ್ಚಲ ಚಿತ್ರವಾದ ಚೀತಾ ಮತ್ತು ಗುರುದತ್ತ ಗಾಣಿಗ ಅವರ ನಿರ್ದೇಶನದ ಕರಾವಳಿ ಸಿನಿಮಾಗಾಗಿ ಮೂಡುಬಿದಿರೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.

2025 ನನಗೆ ರೋಚಕವಾಗಿರುತ್ತದೆ. ಜನವರಿಯಲ್ಲಿ ಮಾಫಿಯಾದೊಂದಿಗೆ ಪ್ರಾರಂಭವಾಗಬಹುದು, ನಂತರ ರಾಕ್ಷಸ, ಗಣ, ಚೀತಾ ಮತ್ತು ಕರಾವಳಿ. ಪ್ರತಿಯೊಂದು ಚಿತ್ರವು ವಿಶಿಷ್ಟವಾದದ್ದನ್ನು ತರುತ್ತದೆ ಮತ್ತು ನಾನು ಕಮರ್ಷಿಯಲ್ ಸಿನಿಮಾಗಳೊಂದಿಗೆ ಪ್ರೇಕ್ಷಕರನ್ನು ತಲುಪುತ್ತೇನೆ. ಈವರೆಗೆ ಕಮರ್ಷಿಯಲ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಪ್ರಜ್ವಲ್‌ ದೇವರಾಜ್‌ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರರ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಲೋಹಿತ್ ಹೆಚ್ ನಿರ್ದೇಶಿಸಿದ ಈ ಚಲನಚಿತ್ರವು ವಿಶ್ವ ಚಿತ್ರರಂಗದಲ್ಲಿಯೇ ಮೊದಲನೆಯದು ಎಂದು ಹೇಳಲಾದ ಒಂದು ಅದ್ಭುತವಾದ ಟೈಮ್-ಲೂಪ್ ನಿರೂಪಣೆಯಿದೆ. ಸಾಮಾನ್ಯವಾಗಿ ಹಾರರ್‌ ಸಿನಿಮಾಗಳು ಭಾವನಾತ್ಮಕ ಕಥೆಯ ಜತೆಗೆ ದೆವ್ವ, ಭೂತಗಳ ಸುತ್ತ ಮಾತ್ರ ಸಾಗುತ್ತವೆ. ಆದರೆ ‘ರಾಕ್ಷಸ’ ಚಿತ್ರದಲ್ಲಿ ಹಾರರ್‌ ಜತೆಗೆ ಟೈಮ್‌ ಲೂಪ್‌ ಕಾನ್ಸೆಪ್ಟ್‌ ಅನ್ನು ಕೂಡ ಅಳವಡಿಸಿಕೊಳ್ಳಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯೋಗ ಅಪರೂಪ. ‘ಚಿತ್ರಮಂದಿರದಲ್ಲಿ ಈ ಸಿನಿಮಾ ಅತ್ಯುತ್ತಮ ಅನುಭವ ನೀಡಲಿದೆ. ಸಂಪೂರ್ಣ ವಿಶುವಲ್‌ ಎಫೆಕ್ಟ್ ಮೇಲೆಯೇ ಈ ಸಿನಿಮಾ ಸಾಗಲಿದೆ’ ಎಂದು ಹೇಳಿದ್ದಾರೆ. ನಾನು ಹಾರರ್ ಸಿನಿಮಾಗಳಿಂದ ದೂರುವಿರುತ್ತೇನೆ, ಆದ್ದರಿಂದ ಇದನ್ನು ಮಾಡುವುದು ಒಂದು ಸವಾಲಾಗಿತ್ತು ಎಂದು ಪ್ರಜ್ವಲ್ ಒಪ್ಪಿಕೊಂಡಿದ್ದಾರೆ. ಸಾಕಷ್ಟು ಸಿಜಿ ಕೆಲಸಗಳಿದ್ದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತ ಮೂರು ತಿಂಗಳು ಚಿತ್ರೀಕರಣ ನಡೆಸಿದ್ದೇವೆ.ಇದೊಂದು ಉತ್ತಮ ಅನುಭವವಾಗಿತ್ತು ಎಂದು ಪ್ರಜ್ವಲ್ ತಿಳಿಸಿದ್ದಾರೆ.

ನಿರ್ದೇಶಕರು ಇತ್ತೀಚೆಗೆ 'ರಾ ರಾ ರಾಕ್ಷಸ' ಹಾಡನ್ನು ಬಿಡುಗಡೆಗೊಳಿಸಿದರು, ಇದು ಕಾಡುವ 2D ದೃಶ್ಯಗಳನ್ನು ಸಂಗೀತದೊಂದಿಗೆ ಸಂಯೋಜಿಸುತ್ತದೆ, ವರುಣ್ ಉನ್ನಿ ಸಂಗೀತ ಸಂಯೋಜಿಸಿದ್ದಾರೆ ಮತ್ತು ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ರಾಕ್ಷಸ ಒಂದು ಉತ್ತಮ ಸಿನಿಮಾವಾಗಿದೆ, ಇದು ಪ್ರೇಕ್ಷಕರನ್ನುಅಗತ್ಯವಾಗಿ ರಂಜಿಸುತ್ತದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.

Prajwal Devaraj
'ಕರಾವಳಿ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪಾತ್ರದ ಮತ್ತೊಂದು ಶೇಡ್ ಅನಾವರಣ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com