
ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕರಾವಳಿ ಸಿನಿಮಾ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದ ಮಾಡುತ್ತಿದೆ.
ಕರಾವಳಿ ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಮತ್ತೊಂದು ಭರ್ಜರಿ ಪೋಸ್ಟ್ ಅನಾವರಣವಾಗಿದೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ಪೋಸ್ಟರ್ ಕರಾವಳಿ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ವೈರಲ್ ಆಗಿದೆ.
ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ.
ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್ ನ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.
ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆಯಾಗಿದ್ದು ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.
Advertisement