
ಇಂಡಿಯನ್ ಜಾಕಿ ಚಾನ್ ಎಂದೇ ಹೆಸರಾದ ನಟ, ಫೈಟ್ ಮಾಸ್ಟರ್, ಸ್ಟಂಟ್ ಮ್ಯಾನ್ ಥ್ರಿಲ್ಲರ್ ಮಂಜು ಅವರು ಮುಗಿಲ ಮಲ್ಲಿಗೆ ಚಿತ್ರದಲ್ಲಿ ನಟಿಸುತ್ತಿದ್ದು, ಮುತ್ತತ್ತಿ ದೇವರಾಜ್ ಪಾತ್ರದಲ್ಲಿ ಮಿಂಚಲಿದ್ದಾರೆ,
ಎ.ಎನ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಸಿನಿಮಾದಲ್ಲಿ ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗು ಸಹನಾ ಚಂದ್ರಶೇಖರ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.
ಮುಗಿಲ ಮಲ್ಲಿಗೆ ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ ಲವ್ ಸ್ಟೋರಿಯಾಗಿದೆ. ಇಷ್ಟು ದಿನ ಆ್ಯಕ್ಷನ್ ಹಾಗೂ ಪೋಲೀಸ್ ಪಾತ್ರಗಳಲ್ಲಿ ನಟಿಸಿದ್ದ ಥ್ರಿಲ್ಲರ್ ಮಂಜು ಅವರು ಈ ಚಿತ್ರದಲ್ಲಿ ಮುತ್ತತ್ತಿ ದೇವರಾಜ್ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪತ್ನಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯಾ ಅವರು ನಟಿಸಿದ್ದಾರೆ.
ಈಗಾಗಲೇ ಕಂಬಳಿಪುರ ಕಾಟೇರಮ್ಮ, ಭಕ್ತರಹಳ್ಳಿ, ಪೂಜೇನ ಅಗ್ರಹಾರ, ಗಟ್ಟಿಗನಬ್ಬೆ ಹಾಗೂ ಹೊಸಕೋಟೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಚಿತ್ರೀಕರಣವನ್ನು ಮುಗಿಸಿರುವ ಮುಗಿಲ ಮಲ್ಲಿಗೆ ಚಿತ್ರತಂಡ, ಹಾಡುಗಳು ಚಿತ್ರೀಕರಣಕ್ಕಾಗಿ ಸಕಲೇಶಪುರ, ಮಡಿಕೇರಿಗೆ ತೆರಳುತ್ತಿದೆ.
ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಸಂಯೋಜನೆ, ರಾಜೀವ್ ಕೃಷ್ಣ ಅವರ ಸಾಹಿತ್ಯ. ವಿನಯ್ ಜಿ. ಆಲೂರು ಅವರ ಸಂಕಲನ. ಥ್ರಿಲ್ಲರ್ ಮಂಜು ಅವರ ಸಾಹಸ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಭದ್ರಾವತಿ ಪ್ರವೀಣ್ ಅವರ ಸಹ ನಿರ್ದೇಶನವಿದ್ದು, ಈಗಾಗಲೇ ಟಾಲಿವುಡ್ ನಲ್ಲಿ ರುದ್ರಾಕ್ಷ ಪುರಂ, ಪ್ರೇಮಭಿಕ್ಷ ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಮುಗಿಲ ಮಲ್ಲಿಗೆ ಚಿತ್ರದ ಪ್ರಮುಖ ತಾರಾಗಣದಲ್ಲಿ ರಾಜೇಶ್, ಶಂಕರ್, ಎಂವಿ ಸಮಯ, ಕಿಶೋರ್ ಕುಂಬ್ಳೆ, ಶಿವು ಕಾಸರಗೋಡು, ಸಿದ್ದಯ್ಯ ಹಿರೇಮಠ, ರವಿ, ದೀನ, ಬೃಂದಾ, ನಾಗ, ಜಯರಾಂ, ಯುವೀನ್, ಸತ್ಯವರ ನಾಗೇಶ್, ವಸಂತ ನಾಯಕ್, ಕಿರಣ್ ಗಟ್ಟಿಗನಬ್ಬೆ, ಮೋನಿಕಾ ಸೇರಿದಂತೆ ಹಲವರು ಇದ್ದಾರೆ.
ಮುಗಿಲ ಮಲ್ಲಿಗೆ ಚಿತ್ರಕ್ಕೆ ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಅವರ ಸಂಗೀತ ಮತ್ತು ರಾಜೀವ್ ಕೃಷ್ಣ ಅವರ ಸಾಹಿತ್ಯವಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ಸಂಕಲನಕಾರ ವಿನಯ್ ಜಿ ಅಲ್ಲೂರು ಮತ್ತು ಕಲಾ ನಿರ್ದೇಶಕ ಮಲ್ಲಿಕಾರ್ಜುನ ಕೂಡ ಇದ್ದಾರೆ, ಥ್ರಿಲ್ಲರ್ ಮಂಜು ಅವರೇ ಸಾಹಸಗಳನ್ನು ನಿರ್ವಹಿಸುತ್ತಿದ್ದಾರೆ.
Advertisement