
ಕೆಜಿಎಫ್ 1 ಮತ್ತು 2 ಬ್ಲಾಕ್ ಬಸ್ಟರ್ ಚಿತ್ರಗಳ ಸರದಾರ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಚಿತ್ರ ಟಾಕ್ಸಿಕ್‌ನ ಜಾಗತಿಕ ಬಿಡುಗಡೆಗಾಗಿ 20 ಸೆಂಚುರಿ ಫಾಕ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. KVN ಪ್ರೊಡಕ್ಷನ್ಸ್‌ನಲ್ಲಿ ಸಹ ಪಾಲುದಾರರಾಗಿರುವ ಯಶ್ ಟಾಕ್ಸಿಕ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಆಶಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಚರ್ಚೆಗಳು ಅತ್ಯಂತ ಆರಂಭಿಕ ಹಂತಗಳಲ್ಲಿವೆ ಎಂದು ಹೇಳಿವೆ.
ಟಾಕ್ಸಿಕ್‌ನ ಕಥೆ ಹೇಳುವ ಮಾದರಿ ಮತ್ತು ದೃಶ್ಯಗಳು ಹಾಲಿವುಡ್ ಚಿತ್ರಗಳಿಗೆ ಸರಿಯಾಗಿವೆ ಎಂದು ಯಶ್ ಬಲವಾಗಿ ನಂಬಿದ್ದು ದೊಡ್ಡ ಮಟ್ಟದಲ್ಲಿ ಬಿಡುಗಡೆಗಾಗಿ ಜಾಗತಿಕ ದೈತ್ಯರೊಂದಿಗೆ ಪಾಲುದಾರಿಕೆಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ಮೂಲವು ಸೇರಿಸಿದೆ. 2025ರ ಬೇಸಿಗೆಯ ವೇಳೆಗೆ ಅಂತಾರಾಷ್ಟ್ರೀಯ ವಿತರಣೆಯ ಕುರಿತಂತೆ ಅಂತಿಮ ತೀರ್ಮಾನಗಳು ಹೊರಬರಲಿದೆ.
ಟಾಕ್ಸಿಕ್ ತಯಾರಕರು ಚಿತ್ರವನ್ನು 2025ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೂ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ. ಶೂಟಿಂಗ್ ಶೆಡ್ಯೂಲ್ ಮುಗಿಯುತ್ತಿದ್ದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಚಿತ್ರವು 2025ರ ಬಹು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಯಶ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಡಿಸೆಂಬರ್ 2023ರಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಯಿತು. ಮುಂಬರುವ ಚಿತ್ರವು ಗ್ಯಾಂಗ್‌ಸ್ಟರ್ ಥ್ರಿಲ್ಲರ್ ಆಗಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಯಶ್ ಎದುರು ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಟಾಕ್ಸಿಕ್ ಜೊತೆಗೆ, ಯಶ್ ನಿತೇಶ್ ತಿವಾರಿಯ ನಿರ್ದೇಶನದ ರಾಮಾಯಣದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಯಶ್ 200 ಕೋಟಿ ಪಡೆಯಲಿದ್ದಾರೆ ಎಂದು ಸುದ್ದಿಯಾಗಿದೆ.
Advertisement