ಅಂಜಲಿ ಮೆನನ್ ನಿರ್ದೇಶನದ ತಮಿಳು ಚಿತ್ರ ನಿರ್ಮಾಣಕ್ಕೆ KRG ಸ್ಟುಡಿಯೋಸ್‌ ಮುಂದು

ಕೆಆರ್‌ಜಿ ಸ್ಟುಡಿಯೋಸ್‌ನ ನಿರ್ಮಾಪಕ ಕಾರ್ತಿಕ್ ಗೌಡ ಸಂತಸ
ಕೆಆರ್‌ಜಿ ಸ್ಟುಡಿಯೋಸ್‌
ಕೆಆರ್‌ಜಿ ಸ್ಟುಡಿಯೋಸ್‌

ಮುಂಬೈ: ಬೆಂಗಳೂರು ಡೇಸ್ ಚಿತ್ರ ನಿರ್ದೇಶಕಿ ಅಂಜಲಿ ಮೆನನ್ ಮಂಗಳವಾರ ತಮಿಳು ಸಿನಿಮಾವೊಂದಕ್ಕೆ ಕನ್ನಡ ಮೂಲದ ನಿರ್ಮಾಣ ಕಂಪನಿ KRG ಸ್ಟುಡಿಯೋಸ್‌ನೊಂದಿಗೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

ಮಂಜಾಡಿಕುರು, ಕೂಡೆ ಮತ್ತು ವಂಡರ್ ವುಮೆನ್ ನಂತಹ ಮೆಚ್ಚುಗೆ ಪಡೆದ ಸಿನಿಮಾಗಳಿಗೆ ಹೆಸರಾಗಿರುವ ನಿರ್ದೇಶಕಿ, ಮನರಂಜನೆಯೊಂದಿಗೆ ಪ್ರೇಕ್ಷಕರನ್ನು ಚಿಂತನೆಗೆ ದೂಡುವ ಸಿನಿಮಾಗಳನ್ನು ನಿರ್ದೇಶಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್‌ನೊಂದಿಗೆ ಕೆಲಸ ಮಾಡಲು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುವ ಮೆನನ್, ಪ್ರೇಕ್ಷಕರನ್ನು ಆಕರ್ಷಿಸುವ ವಿಶ್ವದರ್ಜೆಯ ನಿರ್ಮಾಣ ಗುಣಮಟ್ಟವನ್ನು ಕಾಯ್ದುಕೊಂಡು ತಮ್ಮ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಬಲಿಷ್ಠವಾದ ಸಿನಿಮಾಗಳನ್ನು ನಿರ್ಮಿಸಲು ನಾವು ಎದುರುನೋಡುತ್ತಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಆರ್‌ಜಿ ಸ್ಟುಡಿಯೋಸ್ 2017 ರಲ್ಲಿ ಚಿತ್ರವಿತರಣೆಯನ್ನು ಸ್ಥಾಪಿಸಿತು ಮತ್ತು ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿದೆ. ಮೂರು ವರ್ಷಗಳ ನಂತರ, ಸಂಸ್ಥೆಯು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿತು. ರತ್ನನ್ ಪ್ರಪಂಚ ಮತ್ತು ಗುರುದೇವ್ ಹೊಯ್ಸಳದಂತಹ ಸಿನಿಮಾಗಳನ್ನು ನಿರ್ಮಿಸಿ ಮೆಚ್ಚುಗೆ ಗಳಿಸಿತು.

ಕೆಆರ್‌ಜಿ ಸ್ಟುಡಿಯೋಸ್‌ನ ನಿರ್ಮಾಪಕ ಮತ್ತು ಸಹ ಸಂಸ್ಥಾಪಕ ಕಾರ್ತಿಕ್ ಗೌಡ ಅವರು ಮೆನನ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಅಂಜಲಿ ಮೆನನ್ ಅವರೊಂದಿಗಿನ ನಮ್ಮ ಸಹಯೋಗವು ಕೆಆರ್‌ಜಿ ಸ್ಟುಡಿಯೋಸ್‌ನ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಇಲ್ಲಿ ಕಥೆ ಹೇಳುವ ಮೂಲತತ್ವವು ಆದ್ಯತೆ ಪಡೆದಿದೆ.

ನಾವು ಸಿನಿಮಾದ ಮಾಂತ್ರಿಕತೆಯನ್ನು ನಂಬುತ್ತೇವೆ ಮತ್ತು ಈ ಸಹಯೋಗವು ವೈವಿಧ್ಯಮಯ ಪ್ರೇಕ್ಷಕರು ಮತ್ತು ಭಾಷೆಗಳಲ್ಲಿ ಪ್ರತಿಧ್ವನಿಸುವ ಕಥೆಗಳನ್ನು ರೂಪಿಸುವ ನಮ್ಮ ಸಮರ್ಪಣೆಗೆ ಉದಾಹರಣೆಯಾಗಿದೆ ಎಂದು ಕಾರ್ತಿಕ್ ಗೌಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com