ಮತ್ಸ್ಯಗಂಧ ನನ್ನನ್ನು ಪೊಲೀಸ್ ಆಗಿ ಹೊಸ ಅವತಾರದಲ್ಲಿ ತೋರಿಸಿದೆ: ನಟ ಪೃಥ್ವಿ ಅಂಬರ್

ಉದಯೋನ್ಮುಖ ನಿರ್ದೇಶಕರೊಂದಿಗೆ ಪ್ರಯೋಗ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಪೃಥ್ವಿ ಅಂಬರ್, "ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುವುದರಿಂದ ಬಾಂಧವ್ಯ ವೃದ್ಧಿಯ ಮಹತ್ವವನ್ನು ಕಲಿಸುತ್ತದೆ. ಒಟ್ಟಾರೆ ಅನುಭವವನ್ನು ಹೆಚ್ಚಿಸಿದೆ ಎನ್ನುತ್ತಾರೆ.
ಪೃಥ್ವಿ ಅಂಬರ್
ಪೃಥ್ವಿ ಅಂಬರ್Express

ಉದಯೋನ್ಮುಖ ನಿರ್ದೇಶಕರೊಂದಿಗೆ ಪ್ರಯೋಗ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಪೃಥ್ವಿ ಅಂಬರ್, "ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುವುದರಿಂದ ಬಾಂಧವ್ಯ ವೃದ್ಧಿಯ ಮಹತ್ವವನ್ನು ಕಲಿಸುತ್ತದೆ. ಅದು ಒಟ್ಟಾರೆ ಅನುಭವವನ್ನು ಹೆಚ್ಚಿಸಿದೆ ಎನ್ನುತ್ತಾರೆ. ದೇವರಾಜ್ ಪೂಜಾರಿ ನಿರ್ದೇಶನದ ಮತ್ಸ್ಯಗಂಧದಲ್ಲಿನ ತಮ್ಮ ಪಾತ್ರದ ಬಗ್ಗೆ ಬಹಳ ಕುತೂಹಲ ಇರಿಸಿಕೊಂಡಿದ್ದಾರೆ. ಇದು ಕರಾವಳಿ ಬೆಲ್ಟ್ ಹಿನ್ನೆಲೆವುಳ್ಳ ಕ್ರೈಮ್ ಚಿತ್ರಕಥೆ ಎಂದು ಹೇಳಲಾಗುತ್ತಿದೆ.

“ಹಿಂದೆ ಪ್ರಣಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಚ್ಚಿನ ಆಸ್ಥೆ ವಹಿಸಿದ್ದೆ. ಆದರೆ, ಮತ್ಸ್ಯಗಂಧ ನನ್ನನ್ನು ಪೊಲೀಸ್ ಆಗಿ ಹೊಸ ಅವತಾರದಲ್ಲಿ ತೋರಿಸಿದೆ ಎಂದರು.

ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಿರುವ ಆಕ್ಷನ್ ಚಿತ್ರಗಳ ಪ್ರಿಯರಾದ ಪೃಥ್ವಿ ಅವರ ಪೊಲೀಸ್ ಅಧಿಕಾರಿ ಪಾತ್ರವು ಪ್ರೇಕ್ಷಕರಿಗೆ ಹೊಸ ದೃಷ್ಟಿಕೋನ ನೀಡುವ ವಿಶ್ವಾಸದಲ್ಲಿದ್ದಾರೆ. ಚಿತ್ರದ ನಿರೂಪಣೆ ವಿವರಿಸಿದ ಪೃಥ್ವಿ,ಇದು ಉತ್ತರ ಕನ್ನಡದ ಸುತ್ತ ಸುತ್ತುತ್ತದೆ ಮತ್ತು ಪ್ರಾಥಮಿಕವಾಗಿ ಮೀನುಗಾರರ ಜೀವನ ಮತ್ತು ಅವರ ಹೋರಾಟಗಳ ಮೇಲೆ ಕೇಂದ್ರೀಕರಿಸುತ್ತದೆ. ನಾನು ಒಂದು ಸಣ್ಣ ಪೊಲೀಸ್ ಠಾಣೆಯಲ್ಲಿ ವಾಸ್ತವಿಕ ಪೋಲೀಸ್ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರದಲ್ಲಿನ ಪೋಲೀಸರ ಚಿತ್ರಣ ಮತ್ತು ಒಟ್ಟಾರೆ ವಾತಾವರಣವು ವಾಸ್ತವಿಕತೆಗೆ ಹೊಂದಿಕೆಯಾಗುತ್ತದೆ. ವೀಕ್ಷಕರಿಗೆ ಕಾನೂನಿನ ಬಗ್ಗೆ ನಿಜವಾದ ಒಳನೋಟವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪೊಲೀಸ್ ಅಧಿಕಾರಿಯ ಪಾತ್ರವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಮಹದಾಸೆ ಹೊಂದಿದ್ದಾರೆ.

ಪೃಥ್ವಿ ಅಂಬರ್
ಪೃಥ್ವಿ ಅಂಬರ್ ನಟನೆಯ 'ಮತ್ಸ್ಯಗಂಧ' ಫೆ.23ರಂದು ಬಿಡುಗಡೆ

ನಿರ್ದೇಶಕರ ಪ್ರಕಾರ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿಗೆ ಈ ಚಿತ್ರವು ಹೊಸ ಇಮೇಜ್ ನೀಡಲಿದೆ. ಮತ್ಸ್ಯಗಂಧ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಪ್ರಶಾಂತ್ ಸಿದ್ಧಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಜರಂಗಿ ಲೋಕಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ವಿಲನ್ ಆಗಿದ್ದು, ಈ ವಾರ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ನಿರ್ದೇಶಕರು ತಿಳಿಸಿದರು. ಬಿ ಎಸ್ ವಿಶ್ವನಾಥ್ ಅವರ ಸಹ್ಯಾದ್ರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಕನ್ನಡ ಪಿಚ್ಚರ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರದ ತಾರಾಗಣದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಪಿಡಿ ಸತೀಶ್ ಚಂದ್ರ, ದಿಶಾ ಶೆಟ್ಟಿ, ನಿರೀಕ್ಷಾ ಶೆಟ್ಟಿ ಮುಂತಾದವರು ಇದ್ದಾರೆ. ಮತ್ಸಗಂಧ ಚಿತ್ರಕ್ಕೆ ಪ್ರವೀಣ್ ಎಂ ಪ್ರಭು ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com