ಭೂಕಂಪದಿಂದ ಜಪಾನ್ ತತ್ತರ; ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಜ್ಯೂ. ಎನ್‌ಟಿಆರ್ ಹೇಳಿದ್ದೇನು?

ಮಂಗಳವಾರ ಬೆಳಿಗ್ಗೆ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರು ಜಪಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಪ್ರಬಲ ಭೂಕಂಪಗಳ ಸರಣಿಯ ನಂತರ ಆ ದೇಶದಲ್ಲಿ ಶೀಘ್ರವಾಗಿ ಪರಿಸ್ಥಿತಿ ಸುಧಾರಿಸಲಿ ಎಂದು ಹಾರೈಸಿದ್ದಾರೆ ಎಂದು ಹೇಳಿದರು.
ಜೂನಿಯರ್ ಎನ್‌ಟಿಆರ್
ಜೂನಿಯರ್ ಎನ್‌ಟಿಆರ್
Updated on

ಮಂಗಳವಾರ ಬೆಳಿಗ್ಗೆ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರು ಜಪಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಪ್ರಬಲ ಭೂಕಂಪಗಳ ಸರಣಿಯ ನಂತರ ಆ ದೇಶದಲ್ಲಿ ಶೀಘ್ರವಾಗಿ ಪರಿಸ್ಥಿತಿ ಸುಧಾರಿಸಲಿ ಎಂದು ಹಾರೈಸಿದ್ದಾರೆ ಎಂದು ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ ಜೂನಿಯರ್ ಎನ್‌ಟಿಆರ್, 'ಜಪಾನ್‌ನಿಂದ ಇಂದು ಸುರಕ್ಷಿತವಾಗಿ ಮನೆಗೆ ಹಿಂತಿರುಗಿದ್ದೇನೆ ಮತ್ತು ಅಲ್ಲಿ ಸಂಭವಿಸಿದ ಭೂಕಂಪಗಳಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಕಳೆದ ವಾರ ಪೂರ್ತಿ ಅಲ್ಲಿಯೇ ಕಳೆದಿದ್ದೇನೆ ಮತ್ತು ನನ್ನ ಹೃದಯವು ಬಾಧಿತರಾಗಿರುವ ಪ್ರತಿಯೊಬ್ಬರಿಗೂ ದುಃಖಿಸುತ್ತದೆ. ಜನರ ಹಾರೈಕೆಗೆ ಕೃತಜ್ಞರಾಗಿರುತ್ತೇನೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲು ಆಶಿಸುತ್ತೇನೆ. ಬಲಿಷ್ಠವಾಗಿರಿ, ಜಪಾನ್' ಎಂದು ಬರೆದಿದ್ದಾರೆ.

ನಿರ್ದೇಶಕ ಎಸ್‌ಎಸ್ ರಾಜಮೌಳಿ ಕೂಡ ಟ್ವೀಟ್ ಮಾಡಿದ್ದು, 'ಜಪಾನ್ ಮೇಲೆ ತೀವ್ರವಾಗಿ ಪರಿಣಾಮ ಬೀರಿರುವ ಭೂಕಂಪಗಳ ಬಗ್ಗೆ ತಿಳಿದುಕೊಳ್ಳುವುದು ಆತಂಕಕಾರಿ ಸಂಗತಿಯಾಗಿದೆ. ಆ ದೇಶವು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನನ್ನ ಆಲೋಚನೆಗಳು ಭೂಕಂಪ ಪೀಡಿತ ಪ್ರತಿಯೊಬ್ಬರೊಂದಿಗೂ ಇವೆ' ಎಂದು ಅವರು ಹೇಳಿದರು.

ಜನವರಿ 1 ರಂದು ಪಶ್ಚಿಮ ಜಪಾನ್‌ನಲ್ಲಿ ಪ್ರಬಲ ಭೂಕಂಪಗಳ ಸರಣಿಯು ಅಪ್ಪಳಿಸಿದ್ದು, ದೇಶದ ಹವಾಮಾನ ಸಂಸ್ಥೆಯು ಇಶಿಕಾವಾ, ಜಪಾನ್‌ನ ಮುಖ್ಯ ದ್ವೀಪವಾದ ಹೊನ್ಶುವಿನ ಪಶ್ಚಿಮ ಕರಾವಳಿಯ ಉಳಿದ ಭಾಗಗಳು ಮತ್ತು ಉತ್ತರದ ಹೊಕ್ಕೈಡೋ ದ್ವೀಪಕ್ಕೆ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಿದೆ. 

ಪ್ರಬಲವಾದ ಭೂಕಂಪದ ಸುಮಾರು 10 ನಿಮಿಷಗಳ ನಂತರ ಕನಿಷ್ಠ 1.2 ಮೀಟರ್ (ನಾಲ್ಕು ಅಡಿ) ಎತ್ತರದ ಅಲೆಗಳು ವಾಜಿಮಾ ಬಂದರಿಗೆ ಅಪ್ಪಳಿಸಿದವು ಮತ್ತು ಉತ್ತರದ ಪ್ರಮುಖ ದ್ವೀಪವಾದ ಹೊಕ್ಕೈಡೋದವರೆಗೆ ಬೇರೆಡೆ ಸಣ್ಣ ಸುನಾಮಿಗಳು ಅಪ್ಪಳಿಸಿರುವ ವರದಿಯಾಗಿದೆ.

ವರದಿಗಳ ಪ್ರಕಾರ, ಜಪಾನ್‌ನಲ್ಲಿ ಸಂಭವಿಸಿದ ಭೂಕಂಪಗಳಿಂದ ಸತ್ತವರ ಸಂಖ್ಯೆ 48 ಕ್ಕೆ ಏರಿದೆ. ಪ್ರಬಲ ಭೂಕಂಪಗಳ ಸರಣಿಯು ಸಾವಿರಾರು ಕಟ್ಟಡಗಳು, ವಾಹನಗಳು ಮತ್ತು ದೋಣಿಗಳನ್ನು ಹಾನಿಗೊಳಿಸಿದೆ. 

ಅಧಿಕಾರಿಗಳು ಮಂಗಳವಾರ, ಹೆಚ್ಚು ಬಲಿಷ್ಠವಾದ ಭೂಕಂಪಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ದೂರವಿರಲು ಎಚ್ಚರಿಕೆ ನೀಡಿದ್ದಾರೆ.

ಜೂನಿಯರ್ ಎನ್‌ಟಿಆರ್ ಅಭಿನಯದ RRR ಚಿತ್ರವು 2022ರಲ್ಲಿ ಜಪಾನ್‌ನಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾವಾಗಿ ಹೊರಹೊಮ್ಮಿದೆ. 

ಪಿಟಿಐ ಪ್ರಕಾರ, ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವು ಜಪಾನೀಸ್ ಬಾಕ್ಸ್ ಆಫೀಸ್‌ನಲ್ಲಿ 410 ಮಿಲಿಯನ್ ಯೆನ್‌ಗಳನ್ನು ಸಂಗ್ರಹಿಸಿದೆ. ನಟ ಮತ್ತು ಅವರ ಸಹನಟ ರಾಮ್ ಚರಣ್ ಈ ಹಿಂದೆ ಚಿತ್ರದ ಪ್ರಚಾರಕ್ಕಾಗಿ ಜಪಾನ್‌ಗೆ ಭೇಟಿ ನೀಡಿದ್ದರು.

ಕೊರಟಾಲ ಶಿವ ನಿರ್ದೇಶನದ ತೆಲುಗು ಚಿತ್ರ ದೇವರಾದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲನೆಯದು ಏಪ್ರಿಲ್ 5 ರಂದು ಬಿಡುಗಡೆಯಾಗಲಿದೆ. ಅಲ್ಲದೆ, ಬಾಲಿವುಡ್ ನಟ ಹೃತಿಕ್ ರೋಷನ್ ಅವರ ವಾರ್ 2 ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com