ಕಟೌಟ್ ನಿಲ್ಲಿಸಲು ಹೋಗಿ ಮೂವರು ಸಾವು: ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ

ಹುಟ್ಟು ಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ಸಂಜೆಯೇ ನಟ ಯಶ್ ಗದಗ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಯಶ್
ಯಶ್

ಬೆಂಗಳೂರು: ಹುಟ್ಟು ಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ಸಂಜೆಯೇ ನಟ ಯಶ್ ಗದಗ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ವಿದೇಶದಿಂದ ಬರುತ್ತಿದ್ದಂತೆಯೇ ಹೆಲಿಕಾಪ್ಟರ್ ನಲ್ಲಿ ಯಶ್ ಗದಗ ಜಿಲ್ಲೆಗೆ ಆಗಮಿಸಿ, ಅಲ್ಲಿಂದ ಮೃತ ಅಭಿಮಾನಿಗಳ ಮನೆಗೆ ತೆರಳಲಿದ್ದಾರೆ. 3 ಗಂಟೆ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದು ಅಲ್ಲಿಂದ 4 ಗಂಟೆಗೆ ರಸ್ತೆ ಮೂಲಕ ಲಕ್ಷ್ಮೀಶ್ವರಕ್ಕೆ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿದ್ದಾರೆ ಎಂದು ಅವರು ಆಪ್ತರು ಮಾಹಿತಿ ನೀಡಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಶ್ 'ಕೆಜಿಎಫ್ 2' ಬಳಿಕ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹುಟ್ಟುಹಬ್ಬಕ್ಕೆ ಕೆಲವೇ ದಿನಗಳ ಹಿಂದಷ್ಟೇ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಸಿನಿಮಾ ಕೆಲಸದ ನಿಮಿತ್ತ ಊರಲ್ಲಿ ಇರುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಬಹಿರಂಗ ಪತ್ರ ಬರೆದಿದ್ದರು. ಹೀಗಿದ್ದರೂ ಅಭಿಮಾನಿಗಳು ತಮ್ಮ ಊರಿನಲ್ಲೇ ಬರ್ತ್‌ಡೇ ಸಂಭ್ರಮಿಸಲು ಮುಂದಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com