‘ಲೀಡರ್ ರಾಮಯ್ಯ’: ಸಿದ್ದರಾಮಯ್ಯ ಬಯೋಪಿಕ್ ನಲ್ಲಿ ಬಾಲ್ಯದ ಪಾತ್ರಕ್ಕೆ ಮಾಸ್ಟರ್ ಆಕಾಶ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ ಸಿನಿಮಾವಾಗುತ್ತಿದೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇದೀಗ ಲೀಡರ್ ರಾಮಯ್ಯ ಸಿನಿಮಾ ತಂಡದಿಂದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ.
ಲೀಡರ್ ರಾಮಯ್ಯ ಬಯೋಪಿಕ್ ನಲ್ಲಿ ಮಾಸ್ಟರ್ ಆಕಾಶ್
ಲೀಡರ್ ರಾಮಯ್ಯ ಬಯೋಪಿಕ್ ನಲ್ಲಿ ಮಾಸ್ಟರ್ ಆಕಾಶ್
Updated on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ ಸಿನಿಮಾವಾಗುತ್ತಿದೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇದೀಗ ಲೀಡರ್ ರಾಮಯ್ಯ ಸಿನಿಮಾ ತಂಡದಿಂದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ.

ಸಿದ್ದರಾಮಯ್ಯ ಜೀವನಾಧಾರಿತ ಕತೆ ಲೀಡರ್ ರಾಮಯ್ಯ ಎಂಬ ಸತ್ಯರತ್ನಂ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಇದೀಗ ಚಿತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಬಾಲ್ಯದ ಪಾತ್ರಕ್ಕೆ ಮಾಸ್ಟರ್ ಆಕಾಶ್ ಆಯ್ಕೆಯಾಗಿದ್ದಾರೆ.

ಸತ್ಯರತ್ನಂ ನಿರ್ದೇಶನದ ಈ ಬಯೋಪಿಕ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. 9ನೇ ತರಗತಿಯ ಈ ವಿದ್ಯಾರ್ಥಿ ತನ್ನ ನಟನಾ ಕೌಶಲ್ಯವನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶ ಪಡೆಯುತ್ತಿದ್ದಾನೆ. ವಿದ್ಯಾಭ್ಯಾಸ ಮತ್ತು ಸಿನಿಮಾದ ನಡುವೆ ಆಕಾಶ್ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಬಾಲ್ಯದಿಂದಲೂ ಸಿನಿಮಾಗಳು ನನ್ನನ್ನು ಆಕರ್ಷಿಸುತ್ತಿವೆ, ನನಗೆ ನನ್ನ ಪೋಷಕರ ಬೆಂಬಲವಿದೆ. ಥ್ರಿಲ್ಲರ್ ಮಂಜು ಸಾಹಸಗಳ ಮೂಲಕ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ಲಕ್ಕಿ ಶಂಕರ್ ಸರ್ ನನ್ನ ನಟನಾ ಕೌಶಲ್ಯವನ್ನು ಹೆಚ್ಚಿಸುತ್ತಿದ್ದಾರೆ.

ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು. ಅದಕ್ಕೆ ಅಪ್ಪ-ಅಮ್ಮನಿಂದ ಸಹಕಾರ ಸಿಕ್ಕಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾಸ್ಟರ್ ಬಳಿ ಸ್ಟಂಟ್ಸ್, ನಿರ್ದೇಶಕ ಲಕ್ಕಿ ಶಂಕರ್ ಸರ್ ಬಳಿ ಆಕ್ಟಿಂಗ್ ಕಲಿಯುತ್ತಿದ್ದೇನೆ.

ಹಾಗೆಯೇ ಡಾನ್ಸ್, ವರ್ಕೌಟ್ ಸೇರಿ ಸಿನಿಮಾಗೆ ಬೇಕಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ, ನಾಲ್ಕು ಸಿನಿಮಾಗಳ ಭಾಗವಾಗಿರುವದು ಸಂತಸ ತಂದಿದೆ. ನನ್ನ ನಟನೆಯ ಜೊತೆಗೆ ನನ್ನ ಶಿಕ್ಷಣವನ್ನು ಮುಂದುವರಿಸಲು ನಾನು ಬದ್ಧನಾಗಿದ್ದೇನೆ ಎಂದು ಆಕಾಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com