ಕಾಂತಾರ ಖ್ಯಾತಿಯ ಸಪ್ತಮಿ ಗೌಡ ತೆಲುಗಿಗೆ ಎಂಟ್ರಿ; ನಿತಿನ್ ನಟನೆಯ ತಮ್ಮುಡು ಚಿತ್ರಕ್ಕೆ ನಾಯಕಿ

ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ಮತ್ತು ಶ್ರೀಲೀಲಾ ಬಳಿಕ ಬಹುಭಾಷೆಗಳಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಇದೀಗ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. 'ದಿ ವ್ಯಾಕ್ಸಿನ್ ವಾರ್' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ಇದೀಗ ನಟ ನಿತಿನ್ ಅವರ ಮುಂಬರುವ ಚಿತ್ರ 'ತಮ್ಮುಡು' ಮೂಲತ ತೆಲುಗಿಗೆ ಎಂಟ್ರಿ ನೀಡುತ್ತ
ಸಪ್ತಮಿ ಗೌಡ
ಸಪ್ತಮಿ ಗೌಡ

ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್ ಮತ್ತು ಶ್ರೀಲೀಲಾ ಬಳಿಕ ಬಹುಭಾಷೆಗಳಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿಯವರ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಇದೀಗ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವ ಕನ್ನಡದ ನಾಯಕಿಯಾಗಲಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ಇದೀಗ ನಟ ನಿತಿನ್ ಅವರ ಮುಂಬರುವ ಚಿತ್ರ 'ತಮ್ಮುಡು' ಮೂಲತ ತೆಲುಗಿಗೆ ಎಂಟ್ರಿ ನೀಡುತ್ತಿದ್ದಾರೆ. ಈ ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ.

ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಫೆಬ್ರುವರಿ ಆರಂಭದಲ್ಲಿ ಸೆಟ್‌ಗೆ ಸೇರಲಿರುವ ನಟಿ, ತೆಲುಗು ಉದ್ಯಮಕ್ಕೆ ಪ್ರವೇಶಿಸುತ್ತಿರುವ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. 'ತೆಲುಗು ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ಕುದುರೆ ಸವಾರಿಯಂತಹ ಕೆಲವು ಹೊಸ ಕೌಶಲ್ಯಗಳನ್ನು ಕಲಿಯಲು ನನಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಈ ಮೂಲಕ ನಾನು ಹೊಸ ವರ್ಷವನ್ನು ಪ್ರಾರಂಭಿಸಲು ಉತ್ಸುಕಳಾಗಿದ್ದೇನೆ' ಎನ್ನುತ್ತಾರೆ ಸಪ್ತಮಿ.

ಬಾಲಿವುಡ್ ಅಥವಾ ಟಾಲಿವುಡ್ ಆಗಿರಲಿ, ಯಾವುದೋ ಹೊಸ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ನನಗೆ ಥ್ರಿಲ್ ಎನಿಸುವುದಿಲ್ಲ. ಬದಲಿಗೆ, ದೊಡ್ಡ ಯೋಜನೆಯೊಂದರ ಭಾಗವಾಗುವುದಕ್ಕೆ ನನಗೆ ಸಂತೋಷವಾಗುತ್ತದೆ. ನನಗೆ ಒಂದು ಉದ್ಯಮದೊಂದಿಗೆ ಇನ್ನೊಂದರತ್ತ ಒಲವು ತೋರಲು ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಭಾಷೆಯ ಹೊರತಾಗಿ ಉತ್ತಮ ಸಿನಿಮಾಗಳನ್ನು ಮಾಡುವುದರಲ್ಲಿ ನನಗೆ ತೃಪ್ತಿಯಿದೆ' ಎಂದು ಅವರು ಹೇಳುತ್ತಾರೆ. 

'ಯಾವುದೇ ಉದ್ಯಮಕ್ಕೆ ನಾನು ಸೇರಿಕೊಂಡರೆ ಅಲ್ಲಿಂದ ಕಲಿಯುವುದಕ್ಕೆ ಸಾಕಷ್ಟು ಇರುತ್ತದೆ. ಕಾಂತಾರ ಮತ್ತು ನನ್ನ ಮುಂಬರುವ ಚಿತ್ರ 'ಯುವ' ದಲ್ಲಿ ನಾನು ಅನುಭವಿಸಿದಂತೆ ಹೊಸದನ್ನು ಕಲಿಯುತ್ತೇನೆ ಅಥವಾ ಕೆಲವು ರೀತಿಯ ರೂಪಾಂತರಕ್ಕೆ ಒಳಗಾಗುತ್ತೇನೆ' ಎಂದು ಸಪ್ತಮಿ ಹೇಳುತ್ತಾರೆ.

ತಮ್ಮುಡು ಚಿತ್ರದ ಬಗ್ಗೆ ಮಾತನಾಡುವ ಅವರು, 'ಇದು ಕಮರ್ಷಿಯಲ್ ಚಿತ್ರ, ಆದರೆ ವಿಭಿನ್ನ ಪ್ರಕಾರದ್ದಾಗಿದೆ. ನನಗೆ ಹೆಚ್ಚು ಮುಖ್ಯವಾದುದು ನಾನು ನಿರ್ವಹಿಸುತ್ತಿರುವ ಪಾತ್ರ, ಕಥೆಯ ನಿರೂಪಣೆ ಮತ್ತು ಈ ಪಾತ್ರಕ್ಕಿರುವ ಮಹತ್ವ. ಕೆಲವು ಯೋಜನೆಗಳು ನನಗೆ ಬೆಳೆಯಲು ಸಹಾಯ ಮಾಡುತ್ತವೆ ಮತ್ತು ನಟಿಯಾಗಿ ಮತ್ತೊಂದು ಉದ್ಯಮಕ್ಕೆ ಪ್ರವೇಶಿಸುವುದಕ್ಕೆ ದಾರಿಯನ್ನು ಸುಗಮಗೊಳಿಸುತ್ತವೆ ಎಂದು ನಾನು ನಂಬುತ್ತೇನೆ' ಎನ್ನುತ್ತಾರೆ.

ಈಮಧ್ಯೆ, ಕನ್ನಡ ಚಿತ್ರರಂಗದಲ್ಲಿ ಸಪ್ತಮಿ ಅವರ ಮುಂದಿನ ಯುವ ಸಿನಿಮಾ ಮಾರ್ಚ್ 28 ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಅಲ್ಲಿ ಅವರು ಯುವ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಯುವ ಚಿತ್ರವನ್ನು ಸಂತೋಷ್ ಆನಂದ್‌ ರಾಮ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ. 

'ನಾನು ಕನ್ನಡದಲ್ಲಿ ಕೆಲವು ಉತ್ತಮ ಸ್ಕ್ರಿಪ್ಟ್‌ಗಳಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಮತ್ತು ಈ ವರ್ಷ ಕೆಲವು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಭರವಸೆ ಇದೆ' ಎಂದು ಹೇಳುತ್ತಾರೆ ಸಪ್ತಮಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com