ಮಿಡ್ ವೀಕ್ ಎಲಿಮಿನೇಷನ್; ಬಿಗ್ ಬಾಸ್ ಮನೆಯಿಂದ ತನಿಷಾ ಹೊರಕ್ಕೆ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಿಡ್ ವೀಕ್ ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತನಿಷಾ ಮನೆಯಿಂದ ಹೊರಗೆ ಬಂದಿದ್ದಾರೆ.
ತನಿಷಾ
ತನಿಷಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಿಡ್ ವೀಕ್ ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತನಿಷಾ ಮನೆಯಿಂದ ಹೊರಗೆ ಬಂದಿದ್ದಾರೆ.

ದೊಡ್ಮನೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ತನಿಷಾ ಟಾಪ್ 5ರಲ್ಲಿ ಇರಲಿದ್ದಾರೆ ಎಂಬುದು ಅವರ ಅಭಿಮಾನಿಗಳ ನಂಬಿಕೆಯಾಗಿತ್ತು. ಆದರೆ, ವಾರದ ಮಧ್ಯದಲ್ಲಿ ಬಿಗ್ ಬಾಸ್ ತೆಗೆದುಕೊಂಡಿರುವ ನಿರ್ಧಾರ ಅವರಲ್ಲಿ ನಿರಾಶೆ ಉಂಟುಮಾಡಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯು ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಇನ್ನು ತನಿಷಾ ಅವರ ಪಯಣ ಬಿಗ್ ಬಾಸ್ ಮನೆಯಲ್ಲಿ ಇಲ್ಲಿಗೆ ಮುಕ್ತಾಯವಾಗಿದೆ. ಈ ಕೂಡಲೇ ಮನೆಯಿಂದ ಹೊರಗೆ ಹೋಗ್ಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ.

ಇದರಿಂದ ಗಳಗಳನೆ ಕಣ್ಣೀರು ಹಾಕಿದ ತನಿಷಾ, ನಾನು ಹೋಗ್ಬೇಕು ಎಂದು ತುಂಬಾ ಆಸೆ ಪಟ್ಟಿದ್ದೀರಾ ಅಲ್ಲ ಎಲ್ಲಾ ಎಂದ ತನಿಷಾ ಕಣ್ಣೀರು ಹಾಕಿದ್ದಾರೆ.ನನ್ನ ವಾಯ್ಸ್ ಅಂದ್ರೆ ನಿಮಗೆಲ್ಲಾ ಕಷ್ಟವಾಗಿತ್ತು. ಇನ್ಮುಂದೆ ನನ್ನ ವಾಯ್ಸ್ ನಿಮಗೆ ಕಿರಿಕಿರಿಯುಂಟು ಮಾಡೋದಿಲ್ಲ ಎನ್ನುತ್ತಾ ಕಣ್ಣೀರು ಸುರಿಸಿದ್ದಾರೆ.

ಕಳೆದ ವಾರ ವರ್ತೂರು ಸಂತೋಷ್​ ಹಾಗೂ ತುಕಾಲಿ ಸಂತೋಷ್ ಎಲಿಮಿನೇಷನ್​ ನಿಂದ ಬಚಾವ್ ಆಗಿದ್ರು. ಸುದೀಪ್​ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂದಿದ್ರು. ಇದೀಗ ಬಿಗ್ ಬಾಸ್​ ಡೈರೆಕ್ಟ್​ ಎಲಿಮಿನೇಷನ್ ಮಾಡಿದೆ.

ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ತನಿಖಾ ಔಟ್ ಆಗಿಲ್ಲ. ಆಕೆಯನ್ನು ಸೀಕ್ರೆಟ್ ರೂಮ್ ನಲ್ಲಿ ಇರಿಸಲಾಗಿದೆ. ತನಿಷಾ ನಮ್ರತಾ ಅವರಿಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇದು ನಿಜವೇ, ಇಲ್ಲವೇ ಎಂಬುದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com