ಬಿಗ್ ಬಾಸ್ ಕನ್ನಡ 10: ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ, ದೊಡ್ಮನೆಯಿಂದ ಹೊರಬಂದ ಮೈಕಲ್!

ಬಿಗ್ ಬಾಸ್' ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು, ಈ ವಾರ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ವೀಕ್ಷಕರಿಂದ ಕಡಿಮೆ ವೋಟ್ ಪಡೆದುಕೊಂಡ ಕಾರಣ, ಮೈಕಲ್ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.
ಮೈಕಲ್ ಅಜಯ್
ಮೈಕಲ್ ಅಜಯ್
Updated on

ಬಿಗ್ ಬಾಸ್' ಕನ್ನಡ 10 ಶೋ ಆರಂಭವಾಗಿ ಈಗಾಗಲೇ 13 ವಾರಗಳನ್ನು ಪೂರೈಸಿದ್ದು, ಈ ವಾರ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ವೀಕ್ಷಕರಿಂದ ಕಡಿಮೆ ವೋಟ್ ಪಡೆದುಕೊಂಡ ಕಾರಣ, ಮೈಕಲ್ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.

ಈ ವಾರ ಕಾರ್ತಿಕ್ ಮಹೇಶ್‌, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಈ ಐವರಲ್ಲಿ ಮೈಕಲ್ ಅಜಯ್ ಅವರು ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ.

ಕಾರ್ತಿಕ್, ವರ್ತೂರು ಸಂತೋಷ್, ಮೈಕಲ್, ತುಕಾಲಿ ಸಂತು, ಡ್ರೋನ್ ಪ್ರತಾಪ್ ಈ ಐವರಲ್ಲಿ ಶನಿವಾರದ ಸಂಚಿಕೆಯಲ್ಲಿ ಕಾರ್ತಿಕ್ ಸೇಫ್ ಆಗಿದ್ದರು.

ಭಾನುವಾರದ ಸಂಚಿಕೆಯಲ್ಲಿ ಮೊದಲು ಡ್ರೋನ್ ಪ್ರತಾಪ್ ಸೇಫ್ ಆದರು. ಆನಂತರ ತುಕಾಲಿ ಸಂತು ಸೇಫ್ ಆದರು. ಕೊನೆಗೆ ವರ್ತೂರು ಸಂತೋಷ್‌ & ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಅಂತಿಮವಾಗಿ ಮೈಕಲ್‌ ಕಡಿಮೆ ವೋಟ್ ಪಡೆದ ಕಾರಣ, ಅವರು ಶೋನಿಂದ ಎಲಿಮಿನೇಟ್ ಆದರು.

ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್, ಇಲ್ಲಿಗೆ ಬಂದ ಮೇಲೆ ಕನ್ನಡ ಕಲಿತು ಜನಮನ ಗೆದ್ದರು. ಕನ್ನಡ ಮಣ್ಣಿನ ಮಗನಾಗಿ ಗುರುತಿಸಿಕೊಂಡರು. ಸಾಕಷ್ಟು ಬಾರಿ ಬಿಗ್ ಬಾಸ್ ಶೋ ಬಂದಿದ್ದಕ್ಕೆ ಕನ್ನಡ ಕಲಿತೆ ಎಂದು ಅಭಿಮಾನದಿಂದ ಮೈಕಲ್ ಮಾತನಾಡಿದ್ದರು.

ಬಿಗ್ ಬಾಸ್‌ಗೆ ಕಾಲಿಟ್ಟ 6 ವಾರಗಳ ಕಾಲ ಉತ್ತಮವಾಗಿ ಮೈಕಲ್ ಆಟವಾಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ರಾಂಗ್ ಆಗಿ ವರ್ತಿಸುತ್ತಿದ್ದರು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸ್ಥಾನಕ್ಕೆ ಗೌರವ ಕೊಡದೇ ವರ್ತಿಸಿದ್ದರು. ಇದಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಸುದೀಪ್ ಬೆಂಡೆತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com