ಸಿನಿಮಾ ಸುದ್ದಿ

ಧರ್ಮೇಂದ್ರ ಮೊಮ್ಮಗನ ಜೊತೆ ಸಚಿನ್ ಪುತ್ರಿ ಸಾರಾ ವಿವಾಹ: ವೈರಲ್ ಸುದ್ದಿಯ ಹಿಂದಿನ ಸತ್ಯಾಂಶವೇನು?

ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಮದುವೆ ನೋಡಿದಾಗ, ತಮಗೊಂದು ಮುನ್ನೋಟ ಸಿಕ್ಕಂತಾಯಿತು ಎಂದು ಹೇಳಿದ್ದರು. ಇದು ತಮ್ಮದೇ ಭವಿಷ್ಯದ ಮದುವೆಗೆ ಒಂದು "ಪ್ರಾಯೋಗಿಕ ಸುತ್ತು" ಇದ್ದಂತೆ ಎಂದು ಅವರು ಬಣ್ಣಿಸಿದ್ದರು.

ಧರ್ಮೇಂದ್ರ ಮೊಮ್ಮಗನ ಜೊತೆ ಸಚಿನ್ ಪುತ್ರಿ ಸಾರಾ ವಿವಾಹ: ವೈರಲ್ ಸುದ್ದಿಯ ಹಿಂದಿನ ಸತ್ಯಾಂಶವೇನು?
ಸಾರಾ ತೆಂಡೂಲ್ಕರ್ ಮತ್ತು ರಾಜ್ ವೀರ್ ಡಿಯೋಲ್
Published On :

ಮುಂಬಯಿ: ಸಚಿನ್ ತೆಂಡೂಲ್ಕರ್ ಪುತ್ರಿ ಮತ್ತು ರಾಜ್‌ವೀರ್ ಡಿಯೋಲ್ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಿದಾಡುತ್ತಿವೆ, ಆದರೆ, ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ತಿಳಿದುಬಂದಿದೆ.

ಸಾರಾ ಆಪ್ತ ಮೂಲಗಳ ಪ್ರಕಾರ ಇವರ ನಡುವೆ ಮದುವೆ ನಡೆಯುವ ಸಾಧ್ಯತೆಯೇ ಇಲ್ಲವಂತೆ ಏಕೆಂದರೆ, ಇವರಿಬ್ಬರೂ ಪರಸ್ಪರ ಭೇಟಿಯೇ ಆಗಿಲ್ಲ ಎಂದು ಹೇಳಿದೆ. ಸಾರಾ ಮತ್ತು ರಾಜ್‌ವೀರ್ 2027ರಲ್ಲಿ ಮದುವೆಯಾಗಲಿದ್ದಾರೆ ಎಂಬ ಪೋಸ್ಟ್‌ಗಳು ವೈರಲ್ ಆಗಿದ್ದವು. ಸಾರಾಗೆ ರಾಜ್‌ವೀರ್ ದುಬಾರಿ ಉಡುಗೊರೆ ಕಳುಹಿಸುತ್ತಿದ್ದಾರೆ ಎಂದೂ ಹಬ್ಬಿಸಲಾಗಿತ್ತು.

ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ. ಸಾರಾ ಸದ್ಯ ಸಿಂಗಲ್ ಆಗಿದ್ದಾರೆ. ತಮ್ಮ ಕೆಲಸದ ಕಡೆ ಗಮನ ಹರಿಸಿದ್ದಾರೆ. ಈ ಸುದ್ದಿ ಅನಗತ್ಯ ಮತ್ತು ಗೊಂದಲ ಮೂಡಿಸುವಂತಿದೆ ಎಂದು ಆಪ್ತ ಮೂಲಗಳು ಹೇಳಿವೆ. ಸಾರಾ ಮತ್ತು ರಾಜ್‌ವೀರ್ ಭೇಟಿಯೇ ಆಗಿಲ್ಲ ಎಂದ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಸಾರಾ ವೈಯಕ್ತಿಕ ಬದುಕಿನ ಬಗ್ಗೆ ಇಂತಹ ವದಂತಿಗಳು ಹೊಸತಲ್ಲ. ಹಿಂದೆಯೂ ಹಲವು ಬಾರಿ ಇಂತಹ ಸುದ್ದಿಗಳು ಹರಿದಾಡಿದ್ದವು. ಅವರ ಹೆಸರು ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಸಾರಾ ಮಾತ್ರ ಇಂತಹ ಗಾಳಿಸುದ್ದಿಗಳಿಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ‘ಸಚಿನ್ ಮತ್ತು ಅಂಜಲಿ ಉತ್ತಮ ಸ್ನೇಹಿತರಂತೆ ಇರುತ್ತಾರೆ. ತಮ್ಮ ಭವಿಷ್ಯದ ಸಂಬಂಧದಲ್ಲೂ ಅಂತಹ ಸ್ನೇಹ ಇರಬೇಕು’ ಎಂದು ಸಾರಾ ಬಯಸಿದ್ದರು.

ಈ ಹಿಂದೆ ಮದುವೆಯ ಕುರಿತಾದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಸಾರಾ, ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಮದುವೆ ನೋಡಿದಾಗ, ತಮಗೊಂದು ಮುನ್ನೋಟ ಸಿಕ್ಕಂತಾಯಿತು ಎಂದು ಹೇಳಿದ್ದರು. ಇದು ತಮ್ಮದೇ ಭವಿಷ್ಯದ ಮದುವೆಗೆ ಒಂದು "ಪ್ರಾಯೋಗಿಕ ಸುತ್ತು" ಇದ್ದಂತೆ ಎಂದು ಅವರು ಬಣ್ಣಿಸಿದ್ದರು.

'ವೋಗ್' (Vogue) ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಸಾರಾ, "ಅದು ನನಗೆ ಒಂದು ಉತ್ತಮ ಪ್ರಾಯೋಗಿಕ ಸುತ್ತಿನಂತಾಯಿತು. ಈಗ ನನಗೆ ಏನು ಬೇಕು ಮತ್ತು ಏನು ಬೇಡ ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಾರಾ ಮತ್ತು ರಾಜ್‌ವೀರ್ ಮದುವೆ ಸುದ್ದಿ ಕೇವಲ ವದಂತಿ ಅಷ್ಟೇ. ಇಬ್ಬರ ನಡುವೆ ಯಾವುದೇ ಪ್ರೀತಿ ಅಥವಾ ಸಂಬಂಧ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 2027ರ ಮದುವೆ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.