ಬಾಲವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಜತೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ?

ಸಾರಾ ತೆಂಡೂಲ್ಕರ್ ಅವರ ಮದುವೆಯ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಅವರು 2027ರಲ್ಲಿ ವಿವಾಹವಾಗಬಹುದು ಎಂಬರ್ಥದ ಪೋಸ್ಟ್ ವೈರಲ್ ಆಗಿದೆ.
Wedding bells for Sara Tendulkar and Rajveer Deol, viral post sparks 2027 wedding buzz
ಸಾರಾ ತೆಂಡೂಲ್ಕರ್ - ಸನ್ನಿ ಡಿಯೋಲ್, ರಾಜ್‌ವೀರ್
Updated on: 

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮುದ್ದಿನ ಮಗಳು ಸಾರಾ ತೆಂಡೂಲ್ಕರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪುತ್ರ ರಾಜ್‌ವೀರ್ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಾರಾ ತೆಂಡೂಲ್ಕರ್ ಅವರ ಮದುವೆಯ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಅವರು 2027ರಲ್ಲಿ ವಿವಾಹವಾಗಬಹುದು ಎಂಬರ್ಥದ ಪೋಸ್ಟ್ ವೈರಲ್ ಆಗಿದ್ದು, ಅವರ ಮದುವೆಯ ಕುರಿತಾದ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹಾಗಾದರೆ, ಈ ಮದುವೆಯ ವದಂತಿಗಳ ಹಿಂದಿರುವ ಸತ್ಯವೇನು? ಸಾರಾ ಮತ್ತು ರಾಜ್‌ವೀರ್ ಹೆಸರುಗಳು ಹೇಗೆ ಒಟ್ಟಿಗೆ ಕೇಳಿಬರಲಾರಂಭಿಸಿದವು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Wedding bells for Sara Tendulkar and Rajveer Deol, viral post sparks 2027 wedding buzz
ರಾಮಾಯಣ 2 ಬಗ್ಗೆ ಬಿಗ್ ಅಪ್‌ಡೇಟ್: ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಅಬ್ಬರ; ವಾನರ ಸೇನೆಯ 'ಅದ್ಭುತ ದೃಶ್ಯಗಳು'!

ಸಾರಾ - ರಾಜ್‌ವೀರ್ ಮದುವೆಯ ವದಂತಿ ಶುರುವಾಗಿದ್ದು ಹೇಗೆ?

ಪ್ರತಿಯೊಂದು ಸೆಲೆಬ್ರಿಟಿ ವದಂತಿಗೂ ಒಂದು ಮೂಲವಿರುತ್ತದೆ. ಈ ವದಂತಿಯ ಮೂಲವನ್ನು ಹುಡುಕುತ್ತಾ ಹೋದರೆ, '@Bhumika_2026' ಎಂಬ ಎಕ್ಸ್ ಖಾತೆಯಲ್ಲಿ ಮಾಡಲಾದ ಪೋಸ್ಟ್ ನಲ್ಲಿ ರಾಜ್‌ವೀರ್ ಡಿಯೋಲ್ ಅವರು ಸಾರಾ ತೆಂಡೂಲ್ಕರ್ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, 2027ರ ವೇಳೆಗೆ ಇವರಿಬ್ಬರ ಮದುವೆ ನಡೆಯಬಹುದು ಎಂದೂ ಅದರಲ್ಲಿ ಸೂಚಿಸಲಾಗಿದೆ. ಇದೇ ರೀತಿಯ ವದಂತಿಗಳು ರೆಡ್ಡಿಟ್ (Reddit) ವೇದಿಕೆಯಲ್ಲೂ ಹರಿದಾಡುತ್ತಿವೆ.

ರಾಜ್‌ವೀರ್ ಡಿಯೋಲ್- ಸಾರಾ ಟೆಂಡೂಲ್ಕರ್ ಮದುವೆ ಮಾತುಕತೆ!

ಇನ್ನು ರಾಹುಲ್ ಗುಪ್ತಾ ಎನ್ನುವವರು ಸನ್ನಿ ಡಿಯೋಲ್ ಅವರ ಮಗ ರಾಜ್‌ವೀರ್ ಡಿಯೋಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಮದುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸನ್ನಿ ಡಿಯೋಲ್ ಅವರ ತಂಡದ ವಿಶೇಷ ಮೂಲವೊಂದು ರಾಜ್‌ವೀರ್ ಮತ್ತು ಸಾರಾ ಒಂದು ಪಾರ್ಟಿಯಲ್ಲಿ ಭೇಟಿಯಾದರು ಎಂದು ತಮಗೆ ತಿಳಿಸಿದ್ದು, ಆ ಭೇಟಿಯ ನಂತರ, ಅವರ ಮದುವೆಯ ಬಗ್ಗೆ ಮಾತುಕತೆಗಳು ಪ್ರಾರಂಭವಾಗಿವೆ ಎಂದು ವರದಿಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಸಂಬಂಧ ಮುಂದುವರೆದರೆ, ಅದು ಭಾರತದ ಎರಡು ಅತ್ಯಂತ ಪ್ರತಿಷ್ಠಿತ ಕುಟುಂಬಗಳನ್ನು ಒಟ್ಟಿಗೆ ತರಬಹುದು. ಇದು ಹೆಚ್ಚು ಚರ್ಚಿಸಲ್ಪಡುವ ಸೆಲೆಬ್ರಿಟಿ ವಿವಾಹಗಳಲ್ಲಿ ಒಂದಾಗಬಹುದು! ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X