

ಮುಂಬೈ: ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಮಂಗಳವಾರ ಐಪಿಎಲ್ ಗೂ ನಿವೃತ್ತಿ ಘೋಷಿಸಿದ್ದು, ಅತ್ಯುತ್ತಮ ಆಟ, ಎಂ.ಎಸ್.! ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಎಂ.ಎಸ್. ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದು, ಅವರ 'ಪವರ್ ಹಿಟ್ಟಿಂಗ್'(ಶಕ್ತಿಯುತ ಹೊಡೆತಗಳು) ಸಾಮರ್ಥ್ಯದಲ್ಲಿ ಏನೋ ವಿಶೇಷವಿದೆ ಎಂದು ಸೌರವ್‌ಗೆ ಹೇಳಿದ್ದು ನನಗೆ ಇನ್ನೂ ನೆನಪಿದೆ ಎಂದು ಸಚಿನ್ ತೆಂಡೂಲ್ಕರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧೋನಿಯಲ್ಲಿ ಒಂದು ಅಪರೂಪದ ಪ್ರತಿಭೆ ಇತ್ತು ಎಂಬುದು ಅಂದೇ ಸ್ಪಷ್ಟವಾಗಿತ್ತು; ಅವರು ಸಾಗಿದ ಆಟದ ಪಯಣ ನಿಜಕ್ಕೂ ಅದ್ಭುತವಾದುದು.
ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಮತ್ತು ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಭಾಗಿಯಾಗಿದ್ದು ನನಗೆ ಅಪಾರ ಸಂತೋಷ ನೀಡಿದೆ. ನೀವು ಖಂಡಿತವಾಗಿಯೂ ಏನಾದರೂ ವಿಶೇಷ ಸಾಧನೆ ಮಾಡುತ್ತೀರಿ ಎಂದು ನಾನು ಯಾವಾಗಲೂ ನಂಬಿದ್ದೆ, ಆದರೆ ನೀವು ನಿರೀಕ್ಷೆಗೂ ಮೀರಿದ ಸಾಧನೆಗಳನ್ನು ಮಾಡಿದ್ದೀರಿ.
ಭಾರತೀಯ ಕ್ರಿಕೆಟ್‌ಗೆ ನೀವು ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೀರಿ. ನಿಮ್ಮೊಂದಿಗೆ ಈ ಪಯಣವನ್ನು ಹಂಚಿಕೊಂಡಿದ್ದು ತುಂಬಾ ಸಂತೋಷದ ವಿಷಯ. ಅತ್ಯುತ್ತಮ ಆಟ, ಎಂ.ಎಸ್.! ಎಂದು ಸಚಿನ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.