'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!

ತಮಿಳುನಾಡಿನ ಪ್ರೀತಿಯ 'ದತ್ತು ಪುತ್ರ'ನಿಗೆ, ಅವರಿಗೆ ನಿಜವಾಗಿಯೂ ನೀಡಬೇಕಾಗಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಇನ್ನೊಂದು ಕೊನೆಯ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಿಎಂ ಪೋಸ್ಟ್ ಮಾಡಿದ್ದಾರೆ.
MK Stalin pays emotional tribute to MS Dhoni after IPL retirement
ಧೋನಿ - ಸ್ಟಾಲಿನ್
Updated on: 

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದಿಂದ ಮಾಜಿ ಕ್ಯಾಪ್ಟನ್​​ ಎಂ.ಎಸ್​. ಧೋನಿ ಅವರು ಮಂಗಳವಾರ ಐಪಿಎಲ್ ಗೂ ನಿವೃತ್ತಿ ಘೋಷಿಸಿದ್ದು, ಅವರಿಗೆ ಸಲ್ಲಬೇಕಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.

ಧೋನಿ ಚೆನ್ನೈಗೆ ಐಪಿಎಲ್ ಟ್ರೋಫಿಗಳಿಗಿಂತಲೂ ಹೆಚ್ಚಿನದನ್ನು ನೀಡಿದ್ದಾರೆ. ಅವರು ನಮಗೆ ತಲಮಾರುಗಳನ್ನು ಒಂದುಗೂಡಿಸುವ ಭಾವನೆಯನ್ನು ನೀಡಿದ್ದಾರೆ. ಅದು ಕ್ರಿಕೆಟ್‌ನ ಗಡಿಗಳನ್ನು ಮೀರಿದ ಬಾಂಧವ್ಯವನ್ನು ಬೆಸೆಯಿತು ಎಂದು ಎಂ.ಕೆ. ಸ್ಟಾಲಿನ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿಯೊಂದು ಒಳ್ಳೆಯ ವಿಷಯಕ್ಕೂ ಒಂದು ಅಂತ್ಯವಿರುತ್ತದೆ. ತಮಿಳುನಾಡಿನ ಪ್ರೀತಿಯ 'ದತ್ತು ಪುತ್ರ'ನಿಗೆ, ಅವರಿಗೆ ನಿಜವಾಗಿಯೂ ನೀಡಬೇಕಾಗಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಇನ್ನೊಂದು ಕೊನೆಯ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಿಎಂ ಪೋಸ್ಟ್ ಮಾಡಿದ್ದಾರೆ.

MK Stalin pays emotional tribute to MS Dhoni after IPL retirement
IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ: ಅವರ ಮುಂದಿನ ನಡೆ ಏನು?

ನಮಗೆ ಅಸಂಖ್ಯಾತ ಸಂತೋಷದ ಕ್ಷಣಗಳನ್ನು,ಅದ್ಭುತವಾದ ವಿಜಯಗಳು ಮತ್ತು ನೆನಪುಗಳನ್ನು ನೀಡಿದ್ದಕ್ಕಾಗಿ ಧನ್ಯವಾದ. ಈಗ ಸಿಎಸ್​ಕೆ ಮಾರ್ಗದರ್ಶಕರಾಗಿ ನಿಮ್ಮ ಹೊಸ ಇನ್ನಿಂಗ್ಸ್‌ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆಂದು ಸ್ಟಾಲಿನ್​ ಹೇಳಿದ್ದಾರೆ.

ಕ್ಯಾಪ್ಟನ್​ ಕೂಲ್​ ಎಂದೇ ಖ್ಯಾತಿ ಗಳಿಸಿದ್ದ ಧೋನಿ, ಜಾರ್ಖಂಡ್​ನ ರಾಂಚಿ ಮೂಲದವರಾಗಿದ್ದರೂ, ಸಿಎಸ್​ಕೆ ತಂಡದ ನಾಯಕತ್ವ ವಹಿಸಿಕೊಂಡ ದಿನದಿಂದ ತಮಿಳುನಾಡಿನ ಜನ ಧೋನಿಯನ್ನು ತಮ್ಮೂರಿನ, ತಮ್ಮ ಮನೆಯ ಮಗನೆಂದೇ ಭಾವಿಸಿ ಪ್ರೋತ್ಸಾಹಿಸಿದರು. ಈದೀಗ ಎಂ.ಎಸ್​. ಧೋನಿ ವಿದಾಯದ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಆಪ್ತರು ಭಾವುಕ ನುಡಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X