ಧ್ರುವಸರ್ಜಾ- ಪ್ರೇಮ್ ಜೋಡಿಯ 'KD ದಿ ಡೇವಿಲ್' ಕಿಂಗ್ ಡಮ್ ಗೆ ಮಾದಕ ಚೆಲುವೆ ನೋರಾ ಫತೇಹಿ ಎಂಟ್ರಿ?
ತಮ್ಮ ಸಿನಿಮಾಗಳ ಆಕರ್ಷಕ ಟೈಟಲ್, ಸಂಗೀತ ಹಾಗೂ ಅಸಾಮಾನ್ಯ ಕಲಾವಿದರನ್ನು ಕರೆತರುವ ಮೂಲಕ ಹೆಸರುವಾಸಿಯಾಗಿರುವ ನಟ-ನಿರ್ದೇಶಕ ಪ್ರೇಮ್ ಇತ್ತೀಚೆಗೆ ತಮ್ಮ ಕೆಡಿ ಸಿನಿಮಾ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಧ್ರುವ ಸರ್ಜಾ ನಟಿಸುತ್ತಿರುವ ಕೆಡಿ ಸಿನಿಮಾದಲ್ಲಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅವರಂತಹ ದಿಗ್ಗಜರು ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ಜೊತೆಗೆ ಬಾಲಿವುಡ್ ನ ಜನಪ್ರಿಯ ಶಿಲ್ಪಾ ಶೆಟ್ಟಿ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚಿನ ಊಹಾಪೋಹಗಳ ಪ್ರಕಾರ ಪ್ರೇಮ್ ಚಿತ್ರದ ಪಾತ್ರವರ್ಗಕ್ಕೆ ನೋರಾ ಫತೇಹಿಯನ್ನು ಸೇರಿಸಿದ್ದಾರೆ. ನೋರಾ ಫತೇಹಿ ನಟ ಧ್ರುವ ಸರ್ಜಾ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ನೋರಾ, ಬಿಗ್ ಬಾಸ್ ಮತ್ತು ತನ್ನ ದಿಲ್ಬರ್ ಹಾಡಿನ ಮೂಲಕ ಬಾಲಿವುಡ್ ನ ಹಲವು ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಹಿಂದಿ ಮತ್ತು ತೆಲುಗಿನಲ್ಲಿ ವಿಶೇಷ ಪಾತ್ರಗಳಲ್ಲಿ ಮತ್ತು ತಮಿಳು ಮತ್ತು ಮಲಯಾಳಂನಲ್ಲಿ ದ್ವಿಭಾಷಾ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ವದಂತಿಗಳು ನಿಜವಾದರೆ ಕೆಡಿ ಮೂಲಕ ನೊರಾ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ: ಕೆಡಿ ದಿ ಡೇವಿಲ್' ಗೆ ವಿಜಯ್ ಸೇತುಪತಿ ಸೇರ್ಪಡೆ?
ನಿರ್ದಿಷ್ಟ ಹಾಡಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ನೋರಾ ಆಗಮನವನ್ನು ಮೂಲಗಳು ತಿಳಿಸಿದ್ದರೂ, ತಂಡದಿಂದ ಅಧಿಕೃತ ದೃಢೀಕರಣವು ಇನ್ನೂ ಬಾಕಿ ಉಳಿದಿದೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಕೆಡಿ ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹಲವೆಡೆ ಶೂಟಿಂಗ್ ನಡೆದಿದ್ದು, ಇತ್ತೀಚೆಗೆ ರಾಮ್ ಲಕ್ಷ್ಮಣ್ ಕೊರಿಯೋಗ್ರಾಫ್ ನಲ್ಲಿ ಹೈ-ಆಕ್ಟೇನ್ ಫೈಟ್ ಸೀಕ್ವೆನ್ಸ್ ಚಿತ್ರೀಕರಣ ಮಾಡಿದೆ. ಹೊಸ ವರ್ಷದ ಪೋಸ್ಟ್‌ನಲ್ಲಿ, ನಿರ್ದೇಶಕ ಪ್ರೇಮ್ ಈ ವರ್ಷ ಕೆಡಿ ಬಹುಭಾಷಾ ಸಿನಿಮಾ ಬಿಡುಗಡೆಯ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ, ಆದರೆ ಕಥಗೆ ಸಂಬಂಧಿಸಿದ ವಿವರಗಳು ಇನ್ನೂ ಬಿಡುಗಡೆಯಾಗಬೇಕಾಗಿದೆ.
ಕೆಡಿ ಅಲ್ಲದೆ, ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಮತ್ತು ಉದಯ್ ಮೆಹ್ತಾ ನಿರ್ಮಾಣದ ಈ ಚಿತ್ರವು ಮುಕ್ತಾಯದ ಹಂತದಲ್ಲಿದೆ, ಇನ್ನೂ ಒಂದೆರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ