
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ಶನಿವಾರ ಶುರುವಾಗಿದ್ದು, ವಿಜೇತರ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲಗಳು ಮೂಡಿವೆ.ಈ ನಡುವೆ ಎಲಿಮಿನೇಷನ್ ಶಾಕ್ ಪ್ರೇಕ್ಷಕರಿಗೂ ಶಾಕ್ ನೀಡಿದೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ 6 ಮಂದಿ ತಲುಪಿದ್ದು, ಒಬ್ಬೊಬ್ಬರೆ ಸ್ಪರ್ಧಿಗಳೂ ಹೊರಗೆ ಬರುತ್ತಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಅವರು ತುಕಾಲಿ ಸಂತೋಷ್ ಅವರನ್ನು ಹೊರಗೆ ಕರೆದಿದ್ದು, ಇದೇ ವೇಳೆ ವಿನಯ್ ಗೌಡ ಅವರನ್ನ ಕರೆದಿದ್ದಾರೆಂದು ಹೇಳಲಾಗುತ್ತಿದೆ.
ತುಕಾಲಿ ಸಂತೋಷ್ ಅವರು ಟಾಪ್ 6 ಸ್ಪರ್ಧಿಯಾಗಿ ಹೊರಗೆ ಬಂದಿದ್ದರೆ, ವಿನಯ್ ಗೌಡ ಅವರು ಟಾಪ್ 5 ಸ್ಪರ್ಧಿಯಾಗಿ ಹೊರಗೆ ಬಂದಿದ್ದಾರೆಂದು ಹೇಳಲಾಗುತ್ತಿದೆ.
ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ವಿನಯ್ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ವಿನಯ್ ಅವರೇ ಮನೆಯಿಂದ ಹೊರಗೆ ಬಂದಿದ್ದಾರೆಂಬ ಸುದ್ದಿ ಪ್ರೇಕ್ಷಕರಿಗೆ ಶಾಕ್ ನೀಡಿದೆ.
ಕನ್ನಡ ಬಿಗ್‌ಬಾಸ್ ಮನೆಯ 10 ಸೀಸನ್‌ಗಳಲ್ಲಿ ಅತ್ಯಂತ ಹೆಚ್ಚು ಟಿಆರ್‌ಪಿ ಪಡೆದ ಸೀಸನ್ ಇದಾಗಿದೆ. ಈ ಸೀಸನ್‌ನ ಕಂಟೆಸ್ಟೆಂಟ್‌ಗಳು ಮಾಡಿದ್ದೆಲ್ಲವೂ ಜನರಿಗೆ ಹಿಂಸೆಯಾದರೆ, ಕಲರ್ಸ್ ಕನ್ನಡ ವಾಹಿನಿಗೆ ಮಾತ್ರ ಕಂಟೆಸ್ಟೆಂಟ್ ಮಾಡಿದ್ದೆಲ್ಲವೂ ಚಿನ್ನವಾಗಿತ್ತು. ಇನ್ನು ಬಿಗ್‌ಬಾಸ್ ಸೀಸನ್ ಆರಂಭದಿಂದಲೇ ಕಂಟೆಸ್ಟೆಂಟ್ ಆಯ್ಕೆ ಮಾಡುವಾಗಲೇ ವಿಭಿನ್ನ ಮಾನದಂಡವನ್ನು ಅನುಸರಿಸಲಾಯಿತು. ಇಂತಿಷ್ಟು ಓಟ್‌ಗಳನ್ನು ಪಡೆದವರನ್ನಷ್ಟೇ ಮನೆಯೊಳಗೆ ಕಳಿಸಲಾಯಿತು. ಒಟ್ಟು 19 ಜನರು ಬಿಗ್‌ಬಾಸ್ ಮನೆಯನ್ನು ಸೇರಿದ್ದು, ಅಂತಿಮವಾಗಿ ಫೈನಲ್‌ನಲ್ಲಿ 6 ಜನ ಉಳಿದುಕೊಂಡಿದ್ದರು.
ಬಿಗ್‌ಬಾಸ್ ಪ್ರತಿ ಸೀಸನ್‌ನಲ್ಲಿಯೂ ಫೈನಲ್ ದಿನಕ್ಕೆ ಕೇವಲ 5 ಜನರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತಿತ್ತು. ಆದರೆ, ಈ ಸೀಸನ್‌ನಲ್ಲಿ ಮಾತ್ರ 6 ಜನರನ್ನು ಉಳಿಸಿಕೊಂಡು ಎಲ್ಲರನ್ನೂ ಫೈನಲ್‌ಗೆ ಆಡಿಸುತ್ತಿದ್ದಾರೆ. ಇಂದು ಫೈನಲ್ ರೆಕಾರ್ಡಿಂಗ್ ಶೂಟ್ ಆರಂಭವಾಗಿದ್ದು, ಯಾರು ಕಪ್ ಗೆಲ್ಲುತ್ತಾರೆ ಎಂಬುದರ ಮೇಲೆ 6 ಕೋಟಿ ಕನ್ನಡಿಗರ ಚಿತ್ತ ನೆಟ್ಟಿದೆ.
ಆರು ಜನರಲ್ಲಿ ಈಗಾಗಲೇ ಮೂವರನ್ನು ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಮೊದಲು ಕಾಮಿಡಿಯನ್ ತುಕಾಲಿ ಸಂತೋಷ್ ಅವರು ಹೊರಗೆ ಬಿದ್ದಿದ್ದರೆ, ನಂತರ ವಿನಯ್ ಗೌಡ ಹಾಗೂ ವರ್ತೂರ್ ಸಂತೋಷ್ ಅವರು ಹೊರಗೆ ಬಂದಿದ್ದಾರೆಂದು ತಿಳಿದುಬಂದಿದೆ.
Advertisement