ನಿರ್ದೇಶಕ ಹೇಮಂತ್ ರಾವ್ ಅವರ ದೂರದೃಷ್ಟಿ, ಚಿಂತನಾ ಕ್ರಮ ಶ್ಲಾಘನೀಯ: ಶಿವರಾಜಕುಮಾರ್

ನಟ ಡಾ. ಶಿವರಾಜ್‌ಕುಮಾರ್‌ಗೆ 2024 ಮತ್ತೊಂದು ಆಸಕ್ತಿದಾಯಕ ವರ್ಷವಾಗಲಿದೆ, ಏಕೆಂದರೆ ಅವರು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನವರಿ 12 ರಂದು ಬಹುಭಾಷಾ ಸಿನಿಮಾ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಯಾಗಿದೆ.
ಹೇಮಂತ್ ರಾವ್, ಶಿವರಾಜಕುಮಾರ್
ಹೇಮಂತ್ ರಾವ್, ಶಿವರಾಜಕುಮಾರ್
Updated on

ನಟ ಡಾ. ಶಿವರಾಜ್‌ಕುಮಾರ್‌ಗೆ 2024 ಮತ್ತೊಂದು ಆಸಕ್ತಿದಾಯಕ ವರ್ಷವಾಗಲಿದೆ, ಏಕೆಂದರೆ ಅವರು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನವರಿ 12 ರಂದು ಬಹುಭಾಷಾ ಸಿನಿಮಾ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಯಾಗಿದೆ.

ಕರಟಕ ಧಮನಕ ಸಿನಿಮಾ ಕೂಡ ರಿಲೀಸ್ ಆಗಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಟ ಪ್ರಭುದೇವ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾಗೆ ಯೋಗರಾಜ್ ಭಟ್ ನಿರ್ದೇಶನವಿದೆ. ಸೋಮವಾರ ಕರಟಕ- ಧಮನಕ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

ಈ ಸಡಗರದ ನಡುವೆ, ಶಿವರಾಜಕುಮಾರ್ ಸದ್ಯ ನರ್ತನ್ ನಿರ್ದೇಶನದ ಭೈರತಿ ರಣಗಲ್ ಮತ್ತು ಅರ್ಜುನ್ ಜನ್ಯ ಅವರ 45 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇವೆರಡೂ ಈ ವರ್ಷ ಬಿಡುಗಡೆಯಾಗಲಿವೆ. ಲಕ್ಕಿ ಗೋಪಾಲ್ ನಿರ್ದೇಶನದ IV ರಿಟರ್ನ್ಸ್ ಮತ್ತು ದಿನಕರ್ ತೂಗುದೀಪ ಅವರ ನಿರ್ದೇಶನದ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್ ಗಳು ಶಿವಣ್ಣ ಬಳಿಯಿವೆ.

ಇದರ ಜೊತೆಗೆ ನಿರ್ದೇಶಕ ಹೇಮಂತ್ ಎಂ ರಾವ್ ಅವರೊಂದಿಗೂ ಸಿನಿಮಾ ಮಾಡುತ್ತಿದ್ದಾರೆ. ವಿಶಿಷ್ಟ ರೀತಿಯಲ್ಲಿ ಕಥೆ ನಿರೂಪಣೆಗೆ ಹೇಮಂತ್ ರಾವ್ ಹೆಸರುವಾಸಿಯಾಗಿದ್ದಾರೆ. ಹೇಮಂತ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ #5 ಎಂಬ ಶೀರ್ಷಿಕೆ ಇಟ್ಟಿದ್ದು, ಸಿನಿಮಾಗಾಗಿ ತಯಾರಿ ನಡೆಸುತ್ತಿರುವುದಾಗಿ ಇತ್ತೀಚೆಗೆ ಸುಳಿವು ನೀಡಿದರು. ಇದು ವಿಭಿನ್ನ ಪ್ರಕಾರವಾದ ಸಿನಿಮಾವಾಗಿದೆ ಎಂದು ಹೇಳಲಾಗಿದೆ.

ಇನ್ನೂ ಹೇಮಂತ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ನಟ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದು, ಹೇಮಂತ್ ಎಂ ರಾವ್ ಮತ್ತು ನಾನು ಇಂಟ್ರೆಸ್ಟಿಂಗ್ ಯೋಜನೆಗೆ ಕೈಜೋಡಿಸುತ್ತಿದ್ದೇವೆ, ಸ್ವಲ್ಪ ಸಮಯದ ಹಿಂದೆ ಗ್ರೀನ್ ಸಿಗ್ನಲ್ ನೀಡಲಾಯಿತು. ನಾನು ನಿರ್ದೇಶಕರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಮತ್ತು ಚಿತ್ರವು ಪ್ರಸ್ತುತ ತಯಾರಿ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಹೇಮಂತ್ ಅವರ ನಿರ್ದೇಶನದ ಬಗ್ಗೆ ಶ್ಲಾಘಿಸಿದ ಶಿವರಾಜಕುಮಾರ್ ಅವರು ಯೋಜನೆಯ ವಿಶಿಷ್ಟತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ಹೇಮಂತ್ ಅವರಿಗೆ ದೂರದೃಷ್ಟಿ ಇದೆ ಮತ್ತು ಅವರ ಆಲೋಚನಾ ಕ್ರಮ ಶ್ಲಾಘನೀಯ. ನಾನು  ಕಥೆಯ ಬಗ್ಗೆ ಈಗಲೇ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ, ಇದೊಂದು ವಿಭಿನ್ನ ಅನುಭವವಾಗಲಿದೆ ಎಂದು ನನಗೆ ಶೇ. 100 ರಷ್ಟು ವಿಶ್ವಾಸವಿದೆ ಎಂದಿದ್ದಾರೆ ಶಿವಣ್ಣ.

ಇವರಿಬ್ಬರು ಯಾವ ರೀತಿಯ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿದೆ. ಏತನ್ಮಧ್ಯೆ, ಹೇಮಂತ್ ಎಂ ರಾವ್ ಅವರ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಹೊರಬಂದಿದೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್ ನಟಿಸಿರುವ ಈ ಚಿತ್ರವು ಪ್ರಸ್ತುತ ಅಮೇಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com