'ಭೀಮಾ' ಸಿನಿಮಾದ ಪ್ರತಿಯೊಂದು ಹಾಡು ಕೇಳುಗರ ಹೃದಯ ಸೆಳೆಯುತ್ತಿದೆ: ವಿಜಯ್ ಕುಮಾರ್

ನಟ ವಿಜಯ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ 'ಭೀಮಾ,' ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ವಿಜಯ್ ಕುಮಾರ್ ತಮ್ಮ ಭೀಮಾ ಸಿನಿಮಾದ ಹಾಡುಗಳು ಕೇಳುಗರ ಹೃದಯ ಸೂರೆಗೊಳ್ಳುವಂತೆ ಸಂಯೋಜಿಸಿದ್ದಾರೆ.
ಭೀಮಾ ಸಿನಿಮಾ ಸ್ಟಿಲ್
ಭೀಮಾ ಸಿನಿಮಾ ಸ್ಟಿಲ್

ನಟ ವಿಜಯ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ 'ಭೀಮಾ,' ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ವಿಜಯ್ ಕುಮಾರ್ ತಮ್ಮ ಭೀಮಾ ಸಿನಿಮಾದ ಹಾಡುಗಳು ಕೇಳುಗರ ಹೃದಯ ಸೂರೆಗೊಳ್ಳುವಂತೆ ಸಂಯೋಜಿಸಿದ್ದಾರೆ.

ವಿಶೇಷವಾಗಿ 'ಬ್ಯಾಡ್ ಬಾಯ್ಸ್' ಮತ್ತು 'ಐ ಲವ್' ಯೂ ಕಣೆ ಹಾಡುಗಳು ರಿಲೀಸ್ ಆಗಿವೆ.ಈ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ನಾಗಾರ್ಜುನ ಶರ್ಮಾ ಬರೆದ ತಮ್ಮ ಇತ್ತೀಚಿನ 'ಡೋಂಟ್ ವರಿ ಬೇಬಿ ಚಿನ್ನಮ್ಮ' ಹಾಡು ರಿಲೀಸ್ ಆಗಿದೆ, ಈ ಉತ್ಸಾಹಭರಿತ ಸಾಂಗ್ ಅದರ ಆಕರ್ಷಕ ಟ್ಯೂನ್‌ ನಿಂದ ಶೀಘ್ರವೇ ಜನಪ್ರಿಯವಾಯಿತು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಹಾಡಿನ ಕುರಿತು ಮಾತನಾಡಿದ ನಟ-ನಿರ್ದೇಶಕ ವಿಜಯ್ ಕುಮಾರ್, “ನಾವು ಇತ್ತೀಚೆಗೆ ಹೊಸ ಹಾಡನ್ನು ಬಿಡುಗಡೆ ಮಾಡಿದ್ದೇವೆ, ‘ ಡೋಂಟ್ ವರಿ ಬೇಬಿ ಚಿನ್ನಮ್ಮ’ ಮತ್ತು ಇದು ವಿಶೇಷವಾಗಿ ಯುವ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆಯನ್ನು ಪಡೆಯುತ್ತಿದೆ. ಭೀಮಾ ಚಿತ್ರದಿಂದ ಬಿಡುಗಡೆಯಾದ ಪ್ರತಿಯೊಂದು ಹಾಡು ಕೇಳುಗರ ಹೃದಯವನ್ನು ಸೆಳೆಯುತ್ತಿದೆ ಮತ್ತು ಈ ಹಾಡು ಉತ್ತಮ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಯಾವುದೇ ಚಿತ್ರಕ್ಕೆ ಒಂದು ಹಾಡು ಪರಿಪೂರ್ಣ ಆಹ್ವಾನವಾಗಿದೆ ಮತ್ತು ಇಂದಿನ ಯುವಕರು ಮತ್ತು ಎಲ್ಲಾ ವರ್ಗದ ಪ್ರೇಕ್ಷಕರು ಚಿತ್ರಕ್ಕೆ ಅದೇ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಮತ್ತು ಜಗದೀಶ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಶಿವಸೇನಾ ಅವರ ಛಾಯಾಗ್ರಹಣವಿದೆ.

ಭೀಮಾ ಸಿನಿಮಾ ಸ್ಟಿಲ್
ದುನಿಯಾ ವಿಜಯ್ ಹುಟ್ಟುಹಬ್ಬ; ಭೀಮಾ ತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com