ಶಿವರಾಜ್ ಕುಮಾರ್ 'ಭೈರತಿ ರಣಗಲ್' ಸಿನಿಮಾ ಚಿತ್ರೀಕರಣ ಪೂರ್ಣ

ಆರಂಭದಲ್ಲಿ ಆಗಸ್ಟ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದ ಚಿತ್ರವನ್ನು ಈಗ ಸೆಪ್ಟೆಂಬರ್‌ಗೆ ಮುಂದೂಡಲಾಗಿದ್ದು, ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.
ಭೈರತಿ ರಣಗಲ್ ತಂಡದೊಂದಿಗೆ ಶಿವರಾಜ್ ಕುಮಾರ್
ಭೈರತಿ ರಣಗಲ್ ತಂಡದೊಂದಿಗೆ ಶಿವರಾಜ್ ಕುಮಾರ್

ಸ್ಯಾಂಡಲ್‌ವುಡ್‌ನ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರಾದ ಶಿವರಾಜಕುಮಾರ್ ಅವರು ಜುಲೈ 4 ರಂದು ತಮ್ಮ ಬಹು ನಿರೀಕ್ಷಿತ ಚಿತ್ರ ಭೈರತಿ ರಣಗಲ್‌ನ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ನರ್ತನ್ ನಿರ್ದೇಶನದ ಚಿತ್ರದಲ್ಲಿ ಶಿವರಾಜಕುಮಾರ್‌ ನಟನೆಯ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಮುಫ್ತಿ ಸಿನಿಮಾದ ಸೀಕ್ವೆಲ್ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಆಗಸ್ಟ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದ ಚಿತ್ರವನ್ನು ಈಗ ಸೆಪ್ಟೆಂಬರ್‌ಗೆ ಮುಂದೂಡಲಾಗಿದ್ದು, ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಭೈರತಿ ರಣಗಲ್ ಕುರಿತು ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ, ಶಿವರಾಜಕುಮಾರ್ ನಿರೀಕ್ಷೆಗಳು ಹೆಚ್ಚಿವೆ ಮತ್ತು ಚಿತ್ರವು ಉತ್ತಮವಾಗಿ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.

ಅವಿನಾಶ್, ದೇವರಾಜ್, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖಳನಾಯಕನಾಗಿ ರಾಹುಲ್ ಬೋಸ್ , ಮತ್ತು ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜನೆ, ನವೀನ್ ಕುಮಾರ್ ಛಾಯಾಗ್ರಹಣ, ಚೇತನ್ ಡಿಸೋಜಾ ಮತ್ತು ದಿಲೀಪ್ ಸುಬ್ಬರಾಯನ್ ಸಾಹಸಗಳ ಹೊಣೆ ಹೊತ್ತಿದ್ದಾರೆ.

ಭೈರತಿ ರಣಗಲ್ ತಂಡದೊಂದಿಗೆ ಶಿವರಾಜ್ ಕುಮಾರ್
ಕಿರುತೆರೆಗೆ ಮರಳಿದ ಛಾಯಾ ಸಿಂಗ್; ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದಲ್ಲೂ ನಟನೆ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com