ಕಾರ್ತಿ ಅಭಿನಯದ ಸರ್ದಾರ್-2 ಸಿನಿಮಾ ಸೆಟ್ ನಲ್ಲಿ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು
ಚೆನ್ನೈ: ಪಿಎಸ್ ಮಿತ್ರನ್ ಅವರ ಕಾರ್ತಿ ಅಭಿನಯದ ಸರ್ದಾರ್ 2ರ ಸೆಟ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದಾರೆ.
ಏಳುಮಲೈ ಎಂಬ ಸ್ಟಂಟ್‌ಮ್ಯಾನ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ರೋಸ್ಟ್ರಮ್‌ನಿಂದ 20 ಅಡಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಚೆನ್ನೈನ ಸಾಲಿಗ್ರಾಮದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಏಳುಮಲೈ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರು ಬಿದ್ದ ನಂತರ ಗಂಭೀರ ಗಾಯಗೊಂಡರು. ರಾತ್ರಿ 11:30ಕ್ಕೆ ರಕ್ತಸ್ರಾವದಿಂದ ಅವರು ನಿಧನರಾಗಿದ್ದು, ಸರ್ದಾರ್ 2 ಚಿತ್ರೀಕರಣ ಸ್ಥಗಿತಗೊಂಡಿದೆ.
ನಮ್ಮ ಸರ್ದಾರ್ 2 ಚಿತ್ರದ ಸೆಟ್‌ಗಳಲ್ಲಿ ಸ್ಟಂಟ್ ರಿಗ್ ಮ್ಯಾನ್ ಆಗಿ ಕೆಲಸ ಮಾಡಿದ ಸ್ಟಂಟ್ ಯೂನಿಯನ್ ಸದಸ್ಯ ಏಳುಮಲೈ ಅವರ ಸಾವಿನ ಬಗ್ಗೆ ತಿಳಿಸಲು ವಿಷಾದಿಸುತ್ತೇವೆ. ಜುಲೈ 16 ರ ಮಂಗಳವಾರ ಸಂಜೆ, ಸ್ಟಂಟ್ ಸೀಕ್ವೆನ್ಸ್ ಚಿತ್ರೀಕರಣದ ನಂತರ, ಏಳುಮಲೈ ಅವರು 20 ಅಡಿ ಎತ್ತರದ ರೋಸ್ಟ್ರಮ್ನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡರು. ನರಬಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೂಡಲೇ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 11.30 ರ ಸುಮಾರಿಗೆ ನಿಧನರಾದರು. ನಮ್ಮ ಇಡೀ ತಂಡವು ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತದೆ ಎಂದು ಸರ್ದಾರ್ 2ರ ಪ್ರೊಡಕ್ಷನ್ ಹೌಸ್ ಪ್ರಿನ್ಸ್ ಪಿಕ್ಚರ್ಸ್ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ