
ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಅಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ ರಿಲೀಸ್ ಅಗಲಿದೆ. ಈ ನಡುವೆ ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ಆಗಸ್ಟ್ 2 ರಂದು ಮರುಬಿಡುಗಡೆಯಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಕೃಷ್ಣ ನಿರ್ದೇಶಿಸಿ ಎಸ್‌ಆರ್‌ವಿ ಪ್ರೊಡಕ್ಷನ್ಸ್ ಮತ್ತು ಉಮಾಪತಿ ಫಿಲ್ಮ್ಸ್ ನಿರ್ಮಿಸಿದ, ಆಕ್ಷನ್-ಪ್ಯಾಕ್ಡ್ ಹೆಬ್ಬುಲಿ ಸಿನಿಮಾ ಮೂಲಕ ಅಮಲಾ ಪೌಲ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.2017 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.
ಹೆಬ್ಬುಲಿಯಲ್ಲಿ ತನ್ನ ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಅರೆಸೈನಿಕ ಕಮಾಂಡೋ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ . ಚಿತ್ರವು ಉತ್ತಮ ವಿಮರ್ಶೆಗಳಿಗೆ ತೆರೆದುಕೊಂಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯ ಯಶಸ್ಸನ್ನು ಗಳಿಸಿತು. ಸೂರ್ಯ ಫಿಲಂಸ್‌ನಿಂದ ವಿತರಿಸಲ್ಪಟ್ಟ ಹೆಬ್ಬುಲಿಯು ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳ ಮರು-ಬಿಡುಗಡೆಗೆ ಸಿದ್ಧವಾಗಿದೆ.
Advertisement