'ಬ್ಯಾಕ್ ಬೆಂಚರ್ಸ್' ಚಿತ್ರ ತಾಜಾ ಪ್ರತಿಭೆಗಳ ಸಂಗಮ: ಮನೋಹರ್ ಜೋಶಿ

ಹೊಸ ಚಿತ್ರ ಬ್ಯಾಕ್ ಬೆಂಚರ್ಸ್, ನಿರ್ಮಾಪಕ-ನಿರ್ದೇಶಕ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ತಯಾರಾಗಿದ್ದು ಪ್ರಧಾನವಾಗಿ ತಾಜಾ ಪ್ರತಿಭೆಗಳನ್ನು ಹೊಂದಿದೆ. ನಿರ್ದೇಶಕ ಮತ್ತು ಛಾಯಾಗ್ರಾಹಕರು ಚಿತ್ರ ಯಶಸ್ವಿಯಾಗಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ.
ಬ್ಯಾಕ್ ಬೆಂಚರ್ಸ್ ಚಿತ್ರ ತಂಡ
ಬ್ಯಾಕ್ ಬೆಂಚರ್ಸ್ ಚಿತ್ರ ತಂಡ
Updated on

ಹೊಸ ಚಿತ್ರ ಬ್ಯಾಕ್ ಬೆಂಚರ್ಸ್, ನಿರ್ಮಾಪಕ-ನಿರ್ದೇಶಕ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ತಯಾರಾಗಿದ್ದು ಪ್ರಧಾನವಾಗಿ ತಾಜಾ ಪ್ರತಿಭೆಗಳನ್ನು ಹೊಂದಿದೆ. ನಿರ್ದೇಶಕ ಮತ್ತು ಛಾಯಾಗ್ರಾಹಕರು ಈ ಚಿತ್ರ ಯಶಸ್ವಿಯಾಗಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ, ಚಿತ್ರ ನಿರ್ಮಾಣದ ಎಲ್ಲಾ ಅಂಶಗಳಲ್ಲಿ ಯುವಕರು ಉತ್ಸಾಹದಿಂದ ತೊಡಗಿಸಿಕೊಂಡಿದ್ದನ್ನು ಪ್ರಶಂಸಿಸಿದರು. ಹತ್ತು ಕಾಲೇಜುಗಳಿಗೆ ಭೇಟಿ ನೀಡುವುದು ಸೇರಿದಂತೆ ಅವರ ಪೂರ್ವಭಾವಿ ಪ್ರಚಾರದ ಪ್ರಯತ್ನಗಳು ಗುರುತು ಮಾಡುವ ಅವರ ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ ಎಂದು ಶ್ಲಾಘಿಸಿದರು. ತಮ್ಮ ಐದು ತಿಂಗಳ ಪ್ರಚಾರದ ಪ್ರಯತ್ನಗಳಿಂದ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತದೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ.

ಬ್ಯಾಕ್ ಬೆಂಚರ್ಸ್ ಚಿತ್ರ ತಂಡ
Video: ವಿವಾಹೇತರ ಸಂಬಂಧ ಆರೋಪ; ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ

ಛಾಯಾಗ್ರಾಹಕ ಮನೋಹರ್ ಜೋಶಿ ಅವರು ಬ್ಯಾಕ್ ಬೆಂಚರ್ಸ್‌ ಸಿನಿಮಾದಲ್ಲಿ ಯುವಜನತೆಯ ಶ್ರದ್ಧೆಯನ್ನು ಕೊಂಡಾಡಿದರು. ಕಾಲೇಜು ದಿನಗಳಲ್ಲಿ ಬ್ಯಾಕ್ ಬೆಂಚ್ ನಲ್ಲಿ ಕೂರುತ್ತಿದ್ದ ನನಗೆ ಕಾಲೇಜು ದಿನಗಳ ನೆನಪು ಆಗುತ್ತದೆ. ಈ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಯುವಕರು ಸಾಕಷ್ಟು ಪ್ರಯತ್ನ ಹಾಕಿದ್ದಾರೆ. ಕ್ಯಾಮರಾ ಮುಂದೆ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು. ಆನಂದ್ ಆಡಿಯೋ ಬ್ಯಾಕ್ ಬೆಂಚರ್ಸ್ ನ ಯೆಲ್ಲೋ ಯೆಲ್ಲೋ ಹಾಡನ್ನು ಬಿಡುಗಡೆ ಮಾಡಿದೆ. ಸಂಯೋಜಕರೂ ಆಗಿರುವ ನಕುಲ್ ಅಭಯಂಕರ್ ಹಾಡಿದ್ದು, ಜನಮನ ತಟ್ಟಿದೆ.

ಬ್ಯಾಕ್ ಬೆಂಚರ್ ತಾರಾಗಣದಲ್ಲಿ ಜತಿನ್ ಆರ್ಯನ್, ಆಕಾಶ್ ಎಂಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಲಿಕರ್, ಮಾನ್ಯ ಗೌಡ, ಕುಂಕುಮ್ ಎಚ್, ಅನುಷಾ ಸುರೇಶ್, ವೆಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಮತ್ತು ಗೌರವ್ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com