'ಸತ್ಯವತಿ' ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ: 'ಕೆಡಿ ದಿ ಡೆವಿಲ್' ಶೂಟಿಂಗ್ ಪೂರ್ಣಗೊಳಿಸಿದ ಶಿಲ್ಪಾ ಶೆಟ್ಟಿ ಮಾತು!

ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕನ್ನಡದ ‘ಕೆಡಿ’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.
'ಕೆಡಿ' ಶೂಟಿಂಗ್ ಸೆಟ್ ನಲ್ಲಿ ಶಿಲ್ಪಾ ಶೆಟ್ಟಿ
'ಕೆಡಿ' ಶೂಟಿಂಗ್ ಸೆಟ್ ನಲ್ಲಿ ಶಿಲ್ಪಾ ಶೆಟ್ಟಿ
Updated on

ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಅವರು ಕನ್ನಡದ ‘ಕೆಡಿ’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

ಮೈಸೂರಿನಲ್ಲಿ ‘ಕೆಡಿ’ ಸಿನಿಮಾ ಶೂಟಿಂಗ್​ ನಡೆಯುತ್ತಿತ್ತು. ಈಗ ಅವರು ಚಿತ್ರೀಕರಣ ಮುಗಿಸಿದ್ದಾರೆ. ಈ ಖುಷಿಯಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಕೊನೇ ದಿನ ಶೂಟಿಂಗ್​ ಸೆಟ್​ನಿಂದಲೇ ಶಿಲ್ಪಾ ಶೆಟ್ಟಿ ಅವರು ವಿಡಿಯೋ ಮಾಡಿದ್ದಾರೆ. ನಿರ್ದೇಶಕ ‘ಜೋಗಿ’ ಪ್ರೇಮ್ ಸೇರಿದಂತೆ ಇಡೀ ಚಿತ್ರತಂಡದವರ ಜೊತೆ ಶಿಲ್ಪಾ ಶೆಟ್ಟಿ ಖುಷಿ ಖುಷಿಯಿಂದ ಪೋಸ್​ ನೀಡಿದ್ದಾರೆ.

ಕೆಡಿ ದಿ ಡೇವಿಲ್ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಕರ್ನಾಟಕದ ತುಳುನಾಡಿನ ಮೂಲದವರಾದ ಶಿಲ್ಪಾ, ರವಿಚಂದ್ರನ್ ಅವರಿ ಪ್ರೀತ್ಸೋದ್ ತಪ್ಪಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು, ಅದಾದ ನಂತರ ಒಂದಾಗೋಣ ಬಾ ಮತ್ತು ಆಟೋ ಶಂಕರ್ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಈಗ 19 ವರ್ಷಗಳ ನಂತರ ಕೆಡಿ ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಸೆಟ್‌ನಲ್ಲಿ ತಮ್ಮ ಅನುಭವವನ್ನು ವಿವರಿಸಿದ ಶಿಲ್ಪಾ ನಿರ್ದೇಶಕ ಪ್ರೇಮ್ ಅವರ ಪರಿಪೂರ್ಣತೆ ಬಗ್ಗೆ ಶ್ಲಾಘಿಸಿದರು, ಅವರ ಅಚಲವಾದ ಸಮರ್ಪಣೆ ಬಗ್ಗೆ ಹೊಗಳಿದ್ದಾರೆ. ನಿರ್ದೇಶಕರು ಎಂದಿಗೂ ಹಸಿವಿನಿಂದ ಬಳಲಿಲ್ಲ ಎಂದು ತಮಾಷೆ ಮಾಡಿದರು.ಸತ್ಯವತಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದೆಂದು ವಿಶ್ವಾಸದಿಂದ ಘೋಷಿಸಿದರು. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎಂದು ಹೇಳಿದ ಅವರು ಸಿನಿಮಾ ಉತ್ತಮ ಮನರಂಜನೆ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

'ಕೆಡಿ' ಶೂಟಿಂಗ್ ಸೆಟ್ ನಲ್ಲಿ ಶಿಲ್ಪಾ ಶೆಟ್ಟಿ
ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪ್ರೇಮ್, ಭಾಷೆಯ ಅಡೆತಡೆಗಳನ್ನು ಮೀರಿ ಭಾರತದಾದ್ಯಂತ ಇರುವ ವೈವಿಧ್ಯಮಯ ಪ್ರತಿಭೆಗಳನ್ನು ಒಂದುಗೂಡಿಸುವ ಕೌಶಲ್ಯವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವೈವಿಧ್ಯಮಯ ನಟರನ್ನು ಕರೆತಂದಿದ್ದಾರೆ.

ಉದಾಹರಣೆಗೆ, ಅವರು ಎಕ್ಸ್‌ಕ್ಯೂಸ್ ಮಿಗಾಗಿ ತೆಲುಗು ಸಂಗೀತ ನಿರ್ದೇಶಕ ಆರ್‌ಪಿ ಪಟ್ನಾಯಕ್ ಅವರನ್ನು ಕರೆ ತಂದರು, ಪ್ರೀತಿ ಈಕೆ ಭೂಮಿ ಮೇಲಿದೆ ಸಿನಿಮಾದ ವಿಶೇಷ ಗೀತೆಯಲ್ಲಿ ಮಲ್ಲಿಕಾ ಶೆರಾವತ್ ಮತ್ತು ರಾಜ್ ದಿ ಶೋಮ್ಯಾನ್‌ನಲ್ಲಿ ಪ್ರಿಯಾಂಕಾ ಕೊಠಾರಿ ಅವರನ್ನು ಸ್ಯಾಂಡಲ್ ವುಡ್ ಗೆ ಕರೆ ತಂದರು. ದಿ ವಿಲನ್‌ ಚಿತ್ರದಲ್ಲಿ ಆಮಿ ಜಾಕ್ಸನ್‌ ಕರೆತಂದು ನಾಯಕಿಯನ್ನಾಗಿ ಮಾಡಿದರು.

ನಿರ್ದೇಶಕ ‘ಜೋಗಿ’ ಪ್ರೇಮ್, ಶಿಲ್ಪಾ ಶೆಟ್ಟಿ
ನಿರ್ದೇಶಕ ‘ಜೋಗಿ’ ಪ್ರೇಮ್, ಶಿಲ್ಪಾ ಶೆಟ್ಟಿ

ಈಗ, ಕೆಡಿಗಾಗಿ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಜೊತೆಗೂಡಿದ್ದಾರೆ, ಅವರು ತಮ್ಮ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರೆಸಿದ್ದಾರೆ. ಕನ್ನಡೇತರ ನಟರೊಂದಿಗೆ ಕೆಲಸ ಮಾಡುವಾಗ ನನಗೆ ಕೆಲವು ತತ್ವಗಳಿವೆ. ಮೊದಲನೆಯದಾಗಿ, ಅವರು ಅರ್ಥಮಾಡಿಕೊಳ್ಳುವ ದೇಹ ಭಾಷೆಯೊಂದಿಗೆ ನಾನು ಪಾತ್ರವನ್ನು ಪ್ರದರ್ಶಿಸುತ್ತೇನೆ.

'ಕೆಡಿ' ಶೂಟಿಂಗ್ ಸೆಟ್ ನಲ್ಲಿ ಶಿಲ್ಪಾ ಶೆಟ್ಟಿ
ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟ

ಎರಡನೆಯದಾಗಿ, ನಾನು ಕೇವಲ ಒಂದು ಟೇಕ್‌ಗೆ ಸುಮ್ಮನಾಗುವುದಿಲ್ಲ, ಒಂದು ಶಾಟ್ ಅನುಮೋದಿಸಲು ನಾನು 4 ರಿಂದ 5 ಟೇಕ್ಸ್ ತೆಗೆದುಕೊಳ್ಳುತ್ತೇನೆ. ನಾವು ಮಾನಿಟರ್ ಮುಂದೆ ಒಟ್ಟಿಗೆ ಕುಳಿತು ಸಿನಿಮಾದ ಸಾರ್ವತ್ರಿಕ ಭಾಷೆಯ ಮೂಲಕ ಸಂವಹನ ನಡೆಸುತ್ತೇವೆ ಎಂದು ಪ್ರೇಮ್ ಹೇಳಿದ್ದಾರೆ.

ಅವರು ಸಾಂದರ್ಭಿಕ ಸಂವಹನ ಬಿಕ್ಕಟ್ಟುಗಳನ್ನು ಒಪ್ಪಿಕೊಂಡರೂ, ವಿಶೇಷವಾಗಿ ವಿದೇಶಿ ಸಂಗೀತಗಾರರೊಂದಿಗೆ, ಅಂತರವನ್ನು ನಿವಾರಿಸಲು ಸಿನಿಮೀಯ ಭಾಷೆಯ ಶಕ್ತಿಯನ್ನು ಅವರು ನಂಬುತ್ತಾರೆ. "ನಾನು ಪರಿಪೂರ್ಣನಲ್ಲ, ಆದರೆ ನಾನು ಯಾವಾಗಲೂ ಕ್ಷಮೆಯಾಚಿಸುತ್ತೇನೆ. ಅಂತಿಮವಾಗಿ, ಸಿನಿಮಾ ಮೂಲಕ ನಮ್ಮ ಸಂಪರ್ಕವು ಮೇಲುಗೈ ಸಾಧಿಸುತ್ತದೆ ಎಂದು ಪ್ರೇಮ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಕೆಡಿ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com