ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದ ಆಡಿಯೋ ಹಕ್ಕು ದಾಖಲೆ ಬೆಲೆಗೆ ಮಾರಾಟ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜಿಸಿರುವ ಕೆಡಿ ಸಿನಿಮಾದಲ್ಲಿ ಆರು ಹಾಡುಗಳಿವೆ. ಆರಂಭಿಕ ಮೆಲೋಡಿಗಳು ಮೈಸೂರಿನಲ್ಲಿ ಹುಟ್ಟಿದ್ದರೂ, ಬುಡಾಪೆಸ್ಟ್‌ನಲ್ಲಿ ಸುಮಾರು 256 ಸಂಗೀತಗಾರರು ಒಗ್ಗೂಡಿ ಚಿತ್ರಕ್ಕೆ ಸಂಗೀತ ರಚಿಸಿದ್ದಾರೆ.
ಶ್ಯಾಮ್, ಸುಪ್ರೀತ್, ಪ್ರೇಮ್, ಅರ್ಜುನ್ ಜನ್ಯ, ಧ್ರುವ ಸರ್ಜಾ ಮತ್ತು ಆನಂದ್
ಶ್ಯಾಮ್, ಸುಪ್ರೀತ್, ಪ್ರೇಮ್, ಅರ್ಜುನ್ ಜನ್ಯ, ಧ್ರುವ ಸರ್ಜಾ ಮತ್ತು ಆನಂದ್
Updated on

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ 'ಕೆಡಿ- ದಿ ಡೆವಿಲ್' ಆಕ್ಷನ್-ಪ್ಯಾಕ್ಡ್ ಕಮರ್ಷಿಯಲ್ ಎಂಟರ್‌ಟೈನರ್ ಇದೀಗ ಹೊಸ ದಾಖಲೆಯೊಂದನ್ನು ಬರೆದಿದೆ. ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಪಾಲಾಗಿದ್ದು, ದಾಖಲೆ ಬೆಲೆಗೆ ಮಾರಾಟವಾಗಿದೆ. ಆನಂದ್ ಆಡಿಯೋ 17.70 ಕೋಟಿ ರೂ. ಗಳಿಗೆ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಇದು ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್‌ನ ವ್ಯವಹಾರ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥ ಸುಪ್ರಿತ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜಿಸಿರುವ ಕೆಡಿ ಸಿನಿಮಾದಲ್ಲಿ ಆರು ಹಾಡುಗಳಿವೆ. ಆರಂಭಿಕ ಮೆಲೋಡಿಗಳು ಮೈಸೂರಿನಲ್ಲಿ ಹುಟ್ಟಿದ್ದರೂ, ಬುಡಾಪೆಸ್ಟ್‌ನಲ್ಲಿ ಸುಮಾರು 256 ಸಂಗೀತಗಾರರು ಒಗ್ಗೂಡಿ ಚಿತ್ರಕ್ಕೆ ಸಂಗೀತ ರಚಿಸಿದ್ದಾರೆ. ಈ ಸಾಧನೆಯು ಶಾರುಖ್ ಖಾನ್ ಅವರ 'ಪಠಾನ್' ನಿರ್ಮಿಸಿದ 180 ಸಂಗೀತಗಾರರ ದಾಖಲೆಯನ್ನು ಮೀರಿಸಿದೆ. ಇದಲ್ಲದೆ, ಶಿವಮಣಿ ಅವರಲ್ಲದೆ ಜಾಕಿರ್ ಹುಸೇನ್ ಅವರ ಸಹೋದರ ತೌಫಿಕ್ ಖುರೇಷಿ ಜೊತೆಗೆ ರಿದಮ್‌ನಲ್ಲಿ 60 ಸಂಗೀತಗಾರರು ಕೆಲಸ ಮಾಡಿದ್ದಾರೆ.

ನಿರ್ದೇಶಕ ಪ್ರೇಮ್ ಮಾತನಾಡಿ, 'ಸಂಗೀತವು ಪ್ರೇಕ್ಷಕರಿಗೆ ಆಹ್ವಾನವಾಗಿದೆ. ಇದು ಸಂಪೂರ್ಣ ಸಿನಿಮೀಯ ಅನುಭವಕ್ಕೆ ಟೋನ್ ಅನ್ನು ಹೊಂದಿಸುತ್ತದೆ. ಬುಡಾಪೆಸ್ಟ್‌ನಲ್ಲಿ ತಮ್ಮ ಹಿಂದಿನ ನಿರ್ದೇಶನದ 'ಏಕ್ ಲವ್ ಯಾ' ಗಾಗಿ ಸಂಗೀತವನ್ನು ಸಂಯೋಜಿಸಿದ್ದ ಪ್ರೇಮ್, ನಗರವು ಸಂಗೀತ ಸಂಯೋಜನೆಗಳಿಗೆ ವಿಶಿಷ್ಟವಾದ ಚಾರ್ಮ್ ಅನ್ನು ಹೊಂದಿದೆ. ಬುಡಾಪೆಸ್ಟ್ ಭವ್ಯವಾದ ವ್ಯವಸ್ಥೆಗಳಿಗೆ ಪರಿಪೂರ್ಣ ಸೆಟಪ್ ಅನ್ನು ಹೊಂದಿದೆ' ಎಂದು ಅವರು ಹೇಳಿದರು,

'ನಗರದ ಸ್ವರಮೇಳದ ವೈಭವವು ಸಂಗೀತಕ್ಕೆ ಸಾಟಿಯಿಲ್ಲದ ಶ್ರೀಮಂತಿಕೆಯನ್ನು ಸೇರಿಸುತ್ತದೆ. ಸಂಗೀತಕ್ಕೆ ಅಂತರರಾಷ್ಟ್ರೀಯ ಪರಿಮಳವನ್ನು ಸೇರಿಸುವ ಮೂಲಕ, ವಿದೇಶಿ ಸಂಗೀತಗಾರರನ್ನು ಸಹ ಶ್ಲೋಕಾಗಳಿಗೆ ತಮ್ಮ ಧ್ವನಿಯನ್ನು ನೀಡಲು ಕರೆತರಲಾಯಿತು. ಇದು ಚಿತ್ರದ ಶ್ರವಣೇಂದ್ರಿಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಅವರು ಉಲ್ಲೇಖಿಸುತ್ತಾರೆ.

ಶ್ಯಾಮ್, ಸುಪ್ರೀತ್, ಪ್ರೇಮ್, ಅರ್ಜುನ್ ಜನ್ಯ, ಧ್ರುವ ಸರ್ಜಾ ಮತ್ತು ಆನಂದ್
ಧ್ರುವಸರ್ಜಾ- ಪ್ರೇಮ್ ಜೋಡಿಯ 'KD ದಿ ಡೇವಿಲ್' ಕಿಂಗ್ ಡಮ್ ಗೆ ಮಾದಕ ಚೆಲುವೆ ನೋರಾ ಫತೇಹಿ ಎಂಟ್ರಿ?

ಸಂಗೀತ ಸಂಯೋಜಕ ಅರ್ಜುನ್ ಜನ್ಯ, ಇದು ಅವರ ಅತ್ಯುತ್ತಮ ಕೆಲಸ ಎಂದು ಬಣ್ಣಿಸಿದರು. ಆನಂದ್ ಆಡಿಯೋದ ಶ್ಯಾಮ್ ಸಂಗೀತದ ಗುಣಮಟ್ಟವನ್ನು ಶ್ಲಾಘಿಸಿದರು. 'KD' ಚಿತ್ರದ ಸಂಗೀತವು ಖಚಿತವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ' ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಧ್ರುವ ಸರ್ಜಾ, ತಮ್ಮ ಚೊಚ್ಚಲ ಚಿತ್ರ ಅದ್ಧೂರಿಯನ್ನು 4 ಕೋಟಿ ರೂ. ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. 'ಇಂದು, 'ಕೆಡಿ' ಸಿನಿಮಾದ ಆಡಿಯೋ ಹಕ್ಕುಗಳು ಅದರ ನಾಲ್ಕು ಪಟ್ಟು ಹೆಚ್ಚು ಹಣ ಗಳಿಸಿದೆ. ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಮತ್ತು ಆನಂದ್ ಆಡಿಯೋ ಸಂಸ್ಥೆಗೆ ಕೃತಜ್ಞತೆಗಳು ಎಂದರು.

ಈಮಧ್ಯೆ, 'ಕೆಡಿ' ಚಿತ್ರವು ಡಿಸೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ. 150 ದಿನಗಳ ಚಿತ್ರೀಕರಣ ಮುಗಿಸಿರುವ 'ಕೆಡಿ' ಚಿತ್ರದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಕೆಲವು ಪ್ಯಾಚ್‌ವರ್ಕ್ ಮತ್ತು ಕೆಲವು ಹಾಡುಗಳ ಸೀಕ್ವೆನ್ಸ್‌ಗಳ ಚಿತ್ರೀಕರಣ ಬಾಕಿ ಉಳಿದಿದೆ. ವೆಂಕಟ್ ಕೋಣಂಕಿ ನಾರಾಯಣ ನಿರ್ಮಿಸಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಜೊತೆಗೆ ವಿ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಅವರ ಸಿನಿಮಾಟೋಗ್ರಫಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com