ಕೋಮು ಉದ್ವಿಗ್ನತೆ ಆತಂಕ: 'ಹಮಾರೆ ಬಾರಹ್' ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧ!

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ 'ಹಮಾರೆ ಬಾರಹ್' ಚಲನಚಿತ್ರದ ಬಿಡುಗಡೆ ಅಥವಾ ಪ್ರಸಾರವನ್ನು ನಿಷೇಧಿಸಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on

ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಎರಡು ವಾರಗಳವರೆಗೆ ಅಥವಾ ಮುಂದಿನ ಸೂಚನೆ ಬರುವವರೆಗೆ 'ಹಮಾರೆ ಬಾರಹ್' ಚಲನಚಿತ್ರದ ಬಿಡುಗಡೆ ಅಥವಾ ಪ್ರಸಾರವನ್ನು ನಿಷೇಧಿಸಿದೆ.

'ಹಮಾರೆ ಬಾರಹ್' ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಹಲವಾರು ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ನಿಯೋಗಗಳ ಮನವಿಗಳನ್ನು ಪರಿಗಣಿಸಿದ ನಂತರ ಮತ್ತು ಚಿತ್ರದ ಟ್ರೇಲರ್ ವೀಕ್ಷಿಸಿದ ನಂತರ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಚಲನಚಿತ್ರವು ಜೂನ್ 7, 2024 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಅಧಿಕ ಜನಸಂಖ್ಯೆಯ ವಿಷಯವನ್ನು ಪರಿಶೋಧಿಸುವ ಹಮಾರೆ ಬಾರಹ್ತನ್ನ ದಿಟ್ಟ ನಿರೂಪಣೆಗಾಗಿ ಗಮನ ಸೆಳೆದಿದೆ. ಇದರಲ್ಲಿ ಅನು ಕಪೂರ್, ಮನೋಜ್ ಜೋಶಿ ಮತ್ತು ಪರಿತೋಷ್ ತ್ರಿಪಾಠಿ ನಟಿಸಿದ್ದಾರೆ.

ತಡೆಯಾಜ್ಞೆಯು ಚಿತ್ರದ ನಿರ್ಮಾಣ ಮತ್ತು ವಿತರಣೆಯಲ್ಲಿ ಗಣನೀಯವಾಗಿ ಬಂಡವಾಳ ಹೂಡಿರುವ ನಿರ್ಮಾಪಕರಲ್ಲಿ ತೀವ್ರ ಕಳವಳವನ್ನು ಮೂಡಿಸಿತ್ತು. ಚಿತ್ರದ ಬಿಡುಗಡೆಯನ್ನು ಪ್ರಶ್ನಿಸಿ ನಿರ್ದಿಷ್ಟ ಧಾರ್ಮಿಕ ಸಮುದಾಯದ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯ ನಂತರ ಈ ಕಾನೂನು ಅಡಚಣೆ ಉಂಟಾಗಿದೆ.

ಬಿರೇಂದರ್ ಭಗತ್, ರವಿ ಎಸ್ ಗುಪ್ತಾ, ಸಂಜಯ್ ನಾಗ್ಪಾಲ್ ಮತ್ತು ಶಿಯೋ ಬಾಲಕ್ ಸಿಂಗ್ ಜಂಟಿಯಾಗಿ ನಿರ್ಮಿಸಿರುವ ಚಿತ್ರವನ್ನು ಕಮಲ್ ಚಂದ್ರ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com