
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಇವರು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್‌ಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದರು ವಿನೋದ್ ರಾಜ್. ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಸದ್ಯ ಆಪರೇಷನ್‌ಗೆ ಒಳಗಾಗಿದ್ದಾರೆ ವಿನೋದರಾಜ್. ಇನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲ ತಿಳಿಸಿದೆ.
ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು. ಸ್ಯಾಂಡಲ್ವುಡ್ ನಟ ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್ ರಾಜ್ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು.
Advertisement