
ಬೆಂಗಳೂರು: ನಟ ದರ್ಶನ್ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬುದ್ಧಿವಂತಿಕೆಯ ಉತ್ತರ ಕೊಟ್ಟಿದ್ದಾರೆ. ತಮ್ಮ ವಿರುದ್ಧ ದರ್ಶನ್ ಮಾತಾಡಿದ ಸಂದರ್ಭವನ್ನು ನೆನಪಿಸಿಕೊಂಡು ಉತ್ತರ ಕೊಟ್ಟಿದ್ದಾರೆ.
ಕನ್ನಡದ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪಬ್ಲಿಕ್ ಲೈಫ್‌ಗೆ ಬಂದ್ಮೇಲೆ ಕಾಲು ಎಳೆಯೋರು ಇರಬೇಕು. ಬೆನ್ನು ತಟ್ಟೋರು ಇರಬೇಕು. ನಮ್ಮ ಬೆರಳು ಇನ್ನೊಬ್ಬರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತೆ. ಹಾಗೇ ನಮ್ಮ ಬೆರಳು ನಮ್ಮ ಕಣ್ಣಿಗೆ ಚುಚ್ಚಿದರೂ ನಮಗೆ ನೋವಾಗುತ್ತದೆ ಅಷ್ಟೇ ನಾನು ಹೇಳೋದು" ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆ ಬಗ್ಗೆ ಜನಗಳಿಗೆ ನಂಬಿಕೆ ಬಂದಿದೆ. ದೊಡ್ಡವರಿಗೂ, ಸಣ್ಣವರಿಗೆ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೆ, ಲ್ಯಾಂಬೋರ್ಗಿನಿಯಲ್ಲಿ ಹೋಗುವವರಿಗೆ ಒಂದೇ ನ್ಯಾಯ ಇರಬೇಕು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.
ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಎ2 ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಅನ್ನೋದು ತುಂಬಾನೇ ಅವಶ್ಯಕವಾಗುತ್ತದೆ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೆ ಒಂದೊಂದು ಕಲ್ಲು ಅನ್ನೋ ಗುಂಪಿಗೆ ಸೇರಿದ ವ್ಯಕ್ತಿ ನಾನಲ್ಲ, ಎಂದಿದ್ದಾರೆ ಉಮಾಪತಿ ಶ್ರೀನಿವಾಸ್.
ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು’ ಎಂದಿದ್ದಾರೆ ಉಮಾಪತಿ ಶ್ರೀನಿವಾಸ್. ದರ್ಶನ್ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ.
ಇವತ್ತು ನಾನು ಹಾಕಿದ ಪೋಸ್ಟ್ ಯಾರಿಗೋ ಒಬ್ಬ ವ್ಯಕ್ತಿಗಾಗಿ ಹಾಕಿಲ್ಲ. ತಾಳ್ಮೆಯಿಂದ ಕಾದರೆ ಏನಾಗುತ್ತೆ? ಅನ್ನೋದಕ್ಕೆ ಈ ಪೋಸ್ಟ್ ಹಾಕಿದ್ದೆ. ಯಾವುದೋ ಒಬ್ಬ ವ್ಯಕ್ತಿಗೆ ಮುಟ್ಟಬೇಕು. ಒಬ್ಬ ವ್ಯಕ್ತಿ ಹಳ್ಳಕ್ಕೆ ಬಿದ್ದಿದ್ದಾನೆ. ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ,
ಇನ್ನೂ ಯಾವಾಗಲೂ ಲ್ಯಾಂಬೋರ್ಗಿನಿ ಲ್ಯಾಂಬೋರ್ಗಿನಿ ಅಂತಾ ಹೇಳ್ತಾರೆ, ಆ ಲ್ಯಾಂಬೋರ್ಗಿನಿ ಬುಕ್ ಮಾಡೋಕೆ ಅಡ್ವಾನ್ಸ್ ಕೊಟ್ಟವನೇ ನಾನು, ಹಾಗಂತ ನಾನು ಪುಕ್ಸಟ್ಟೆ ಕೊಟ್ಟಿಲ್ಲ, ಅವರು ಮಾಡುವ ಕೆಲಸಕ್ಕಾಗಿ ಕೊಟ್ಟಿದ್ದೇನೆ, ನಾನು ದುಡಿದು ಹಣ ಸಂಪಾದನೆ ಮಾಡಿ ಆಮೇಲೆ ಸಿನಿಮಾಗಾಗಿ ದುಡ್ಡು ನೀಡಿದ್ದೇನೆ ಎಂದು ಸ್ಪಷ್ಚಪಡಿಸಿದ್ದಾರೆ.
Advertisement