ಒಟಿಟಿ ವೇದಿಕೆಗಳಲ್ಲಿ ಕನ್ನಡ ವೆಬ್ ಸರಣಿ ಪ್ರಸಾರಕ್ಕೆ ನಿರ್ಲಕ್ಷ್ಯ; 'ಏಕಂ'ಗಾಗಿ ಹೊಸ ಸಾಹಸಕ್ಕೆ ಮುಂದಾದ ರಕ್ಷಿತ್ ಶೆಟ್ಟಿ!

'ಪ್ರೇಕ್ಷಕರಿಗೆ ನಾವು ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲೆಂದೆ ಹೊಸ ವೇದಿಕೆಯನ್ನು ನಿರ್ಮಿಸಿದ್ದೇವೆ. ಈಗ ಸಿನಿಮಾ ಟಿಕೆಟ್ ದರದಲ್ಲಿ 'ಏಕಂ' ಅನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಸುಮಂತ್ ಭಟ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಏಕಂ ವೆಬ್ ಸರಣಿ ಸ್ಟಿಲ್
ಏಕಂ ವೆಬ್ ಸರಣಿ ಸ್ಟಿಲ್
Updated on

ರಕ್ಷಿತ್ ಶೆಟ್ಟಿಯವರ ಪರಮ್ವಹ್ ಸ್ಟುಡಿಯೋಸ್‌ನ ಚೊಚ್ಚಲ ವೆಬ್ ಸರಣಿಯಾದ 'ಏಕಂ' ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಜುಲೈ 13 ರಂದು ತೆರೆಕಾಣಲಿದೆ. ಕನ್ನಡ ಸಿನಿಮಾಗಳಿಗೆ ಒಟಿಟಿ ವೇದಿಕೆಗಳಲ್ಲಿ ಸೂಕ್ತ ಸ್ತಾನಮಾನ ಸಿಗುತ್ತಿಲ್ಲ ಎನ್ನುತ್ತಿರುವ ಹೊತ್ತಿನಲ್ಲೇ ಕನ್ನಡ ವೆಬ್ ಸರಣಿಗೂ ಅದೇ ಸಂಕಷ್ಟ ಎದುರಾಗಿದೆ. ಹೀಗಾಗಿಯೇ ಪರಮ್ವಹ್ ಸ್ಟುಡಿಯೋಸ್‌ ತನ್ನ ಪ್ಲಾಟ್‌ಫಾರ್ಮ್‌ www.ekamtheseries.com ನಲ್ಲಿಯೇ ಏಕಂ ವೆಬ್ ಸರಣಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. 149 ರೂ. ನೀಡಿ ಏಕಂ ಅನ್ನು ವೀಕ್ಷಿಸಬಹುದಾಗಿದೆ.

'ಪ್ರೇಕ್ಷಕರಿಗೆ ನಾವು ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲೆಂದೆ ಹೊಸ ವೇದಿಕೆಯನ್ನು ನಿರ್ಮಿಸಿದ್ದೇವೆ. ಈಗ ಸಿನಿಮಾ ಟಿಕೆಟ್ ದರದಲ್ಲಿ 'ಏಕಂ' ಅನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಸುಮಂತ್ ಭಟ್ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ನೆಲದಲ್ಲಿ ಬೇರೂರಿರುವ ಕಥೆಗಳನ್ನು ಹೇಳುವುದು ಮತ್ತು ಅವುಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವುದು ಗುರಿಯಾಗಿದೆ ಎಂದಿದೆ ತಂಡ.

2021ರಲ್ಲಿ ವೆಬ್ ಸರಣಿಯನ್ನು ಪೂರ್ಣಗೊಳಿಸಿದರೂ, ಯಾವುದೇ ಮುಖ್ಯವಾಹಿನಿಯ OTT ವೇದಿಕೆಯು ಕನ್ನಡ ಸರಣಿಯನ್ನು ಸ್ಟ್ರೀಮ್ ಮಾಡಲು ಸಿದ್ಧರಿಲ್ಲ. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷ ಕಳೆದರು ಏಕಂ ಅನ್ನು ಹೊರತರಲು ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತು. ಎಲ್ಲೆಡೆ ನಿರಾಸೆ ಉಂಟಾಯಿತು. ಯಾವುದೇ ಕೃತಿಯ ಅರ್ಹತೆಯನ್ನು ನಿರ್ಧರಿಸುವ ಅವಕಾಶ ಮತ್ತು ಹಕ್ಕು ಪ್ರೇಕ್ಷಕರಿಗೆ ಇರಬೇಕು. ಅದಕ್ಕಾಗಿಯೇ ಏಕಂ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ ಎಂದು ಎಂದು ರಕ್ಷಿತ್ ಶೆಟ್ಟಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಏಕಂ ಅನೇಕ ಭೌಗೋಳಿಕತೆಗಳು, ಸಂಸ್ಕೃತಿಗಳು, ಜನರು ಮತ್ತು ಜೀವಿತಾವಧಿಯಲ್ಲಿ ವ್ಯಾಪಿಸಿದೆ. ಇಂದಿನ ಧ್ರುವೀಕೃತ ಜಗತ್ತಿನಲ್ಲಿ, ಈ ಸರಣಿಯು ನಮ್ಮ ಹಂಚಿಕೊಂಡ ಅನುಭವಗಳನ್ನು ಮತ್ತು ಮಾನವರಾಗಿರುವ ಸಾಮಾನ್ಯ ಗುಣವನ್ನು ನಮಗೆ ನೆನಪಿಸುವ ಗುರಿಯನ್ನು ಹೊಂದಿದೆ. ಇದರ ಮೊದಲ ಸೀಸನ್ ಕರ್ನಾಟಕದ ಕರಾವಳಿಯ ಜನರ ಏಳು ಕಥೆಗಳನ್ನು ಪ್ರಸ್ತುತಪಡಿಸುತ್ತದೆ. ಈ ಕಥೆಗಳು ಕೇಶವ ಮಾಮ, ದೇವದತ್ತನ್, ಮಂಜುಳಾ ಮತ್ತು ಖುಷಿಯ ಕಥೆಗಳಂತೆ ದಿಗ್ಭ್ರಮೆ, ಗುರುತಿನ ಬಿಕ್ಕಟ್ಟುಗಳು, ಯೂಫೋರಿಯಾ, ನೋವು, ಸಂತೋಷ ಮತ್ತು ಸ್ವಾತಂತ್ರ್ಯದ ಸಾರ್ವತ್ರಿಕ ವಿಷಯಗಳನ್ನು ಅನ್ವೇಷಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com