ಮಾತಿನ ಬರದಲ್ಲಿ ಆಡಿದ್ದು, ನನ್ನನ್ನು ಕ್ಷಮಿಸಿಬಿಡಿ: ನಟ ಜಗ್ಗೇಶ್ ಕ್ಷಮೆ ಕೇಳಿದ್ದು ಯಾರಿಗೆ?

ನಟ ಜಗ್ಗೇಶ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ಜನರನ್ನು ರಂಜಿಸಿದ್ದಾರೆ. ಚಿತ್ರರಂಗದಲ್ಲಿ ಮೂರು ದಶಗಳಿಗೂ ಹೆಚ್ಚು ಕಾಲ ಹಾಸ್ಯದ ಮೂಲಕ ಮನರಂಜಿಸಿದ ಅದ್ಭುತ ನಟರಲ್ಲಿ ಒಬ್ಬರಾಗಿದ್ದಾರೆ.
ವರ್ತೂರ್ ಸಂತೋಷ್-ಜಗ್ಗೇಶ್
ವರ್ತೂರ್ ಸಂತೋಷ್-ಜಗ್ಗೇಶ್
Updated on

ಬೆಂಗಳೂರು: ನಟ ಜಗ್ಗೇಶ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ಜನರನ್ನು ರಂಜಿಸಿದ್ದಾರೆ. ಚಿತ್ರರಂಗದಲ್ಲಿ ಮೂರು ದಶಗಳಿಗೂ ಹೆಚ್ಚು ಕಾಲ ಹಾಸ್ಯದ ಮೂಲಕ ಮನರಂಜಿಸಿದ ಅದ್ಭುತ ನಟರಲ್ಲಿ ಒಬ್ಬರಾಗಿದ್ದಾರೆ.

ಪ್ರತಿಬಾರಿಯಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಆಚರಿಸಿಕೊಂಡರು. ಇದೇ ವೇಳೆ ಲೈವ್ ವಿಡಿಯೋ ಮಾಡಿದ ಅವರು, ನನ್ನ ಏಳು ಬೀಳುಗಳಿಗೆ, ನನ್ನ ಯಶಸ್ಸಿಗೆ ರಾಯರ ಆಶೀರ್ವಾದ ಕಾರಣ. ಇದೇ ವೇಳೆ ಜನರಲ್ಲಿ ಕ್ಷಮೆಯಾಚಿಸಿದರು.

ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಪ್ರಭಾವಿಯಾಗಿದೆ. ತುಂಬ ದಿನಗಳಿಂದ ಒಂದು ವಿಷಯವನ್ನು ಎಲ್ಲರ ಬಳಿ ಹೇಳಿಕೊಳ್ಳಬೇಕು ಅನಿಸಿತ್ತು. ಅದನ್ನು ಇಂದು ರಾಯರ ಮುಂದೆ ಕುಳಿತು ಕೇಳಿಕೊಳ್ಳುತ್ತಿದ್ದೇನೆ. ಮೈಕ್ ಹಿಡಿದು ಮಾತನಾಡುವಾಗ ಮಾತಿನ ಭರದಲ್ಲಿ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ. ನಾನು ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು ಕ್ಷಮಿಸಿ ಎಂದು ಹೇಳಿದ್ದಾರೆ. ಅದನ್ನು ನಿಮ್ಮನ್ನು ನಿಂದಸಬೇಕು ಎಂದು ಆಡಿದ ಮಾತುಗಳಲ್ಲ ಎಂದು ಹೇಳಿದ್ದಾರೆ.

ವರ್ತೂರ್ ಸಂತೋಷ್-ಜಗ್ಗೇಶ್
ತಮ್ಮ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ನಟ ಜಗ್ಗೇಶ್!

ಈ ಹಿಂದೆ ರಂಗನಾಯಕ ಚಿತ್ರದ ಪ್ರಚಾರದ ವೇಳೆ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಕಿತ್ತೋದ್​ ನನ್​ ಮಗ ಎಂಬ ಪದ ಬಳಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಜಗ್ಗೇಶ್ ವರ್ತೂರು ಸಂತೋಷ್ ಹೆಸರು ಹೇಳದೆ ಕ್ಷಮೆ ಕೇಳಿದ್ದಾರೆ.

ಇದೇ ವೇಳೆ ರಂಗನಾಯಕ ಚಿತ್ರದ ಬಗ್ಗೆ ಮಾತಾಡಿದ ಜಗ್ಗೇಶ್​, ನನ್ನು ಇತ್ತೀಚಿನ ಚಿತ್ರ ನಿಮಗೆ ಬೇಸರ ತರಿಸಿದೆ. ಹೀಗಾಗಿ ನೀವು ನನ್ನ ಮೇಲೆ ಬೇಸರ ಮಾಡಿಕೊಳ್ಳಬೇಡಿ. ಅದು ನನ್ನ ಸಿನಿಮಾ ಅಲ್ಲ, ನಿರ್ದೇಶಕನನ್ನು ನಂಬಿ ಹೋಗಿದ್ದೆ. ಅದು ಈ ರೀತಿ ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com