ಲಂಡನ್‌ನಲ್ಲಿ 'ಲವ್ ಲಿ' ಚಿತ್ರೀಕರಣ ಪೂರ್ಣಗೊಳಿಸಿದ ವಸಿಷ್ಠ ಸಿಂಹ

ನಟ ವಸಿಷ್ಠ ಎನ್ ಸಿಂಹ ಅವರ ಮುಂಬರುವ ಚಿತ್ರ, ನಿರ್ಮಾಣದ ಕೊನೆಯ ಹಂತದಲ್ಲಿರುವ 'ಲವ್ ಲಿ' ಅಂತಿಮವಾಗಿ ಲಂಡನ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.
ವಸಿಷ್ಠ ಸಿಂಹ
ವಸಿಷ್ಠ ಸಿಂಹ
Updated on

ನಟ ವಸಿಷ್ಠ ಎನ್ ಸಿಂಹ ಅವರ ಮುಂಬರುವ ಚಿತ್ರ, ನಿರ್ಮಾಣದ ಕೊನೆಯ ಹಂತದಲ್ಲಿರುವ 'ಲವ್ ಲಿ' ಅಂತಿಮವಾಗಿ ಲಂಡನ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಚಿತ್ರ ತಂಡ ಈ ಹಿಂದೆ ಸಿಲಿಕಾನ್ ಸಿಟಿ ಮತ್ತು ಮಲ್ಪೆ ಸೇರಿದಂತೆ ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರೀಕರಣದ ಹೆಚ್ಚಿನ ಭಾಗವು ಲಂಡನ್‌ನ ಸುಂದರವಾದ ಸ್ಥಳಗಳಲ್ಲಿ ನಡೆದಿದೆ.

ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದು, ಅವರು ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯ ಭಾಗವಾಗಿದ್ದರು.

ವಸಿಷ್ಠ ಸಿಂಹ ಅವರ ಪ್ರಕಾರ, 'ಲವ್ ಲಿ' ಒಂದು ದಶಕದ ಹಿಂದೆ ನಡೆದ ನೈಜ ಘಟನೆಗಳನ್ನು ಆಧರಿಸಿದ ಕಮರ್ಷಿಯಲ್ ರೊಮ್ಯಾಂಟಿಕ್ ಪ್ರೇಮಕಥೆಯಾಗಿದೆ. “ಇದು ಯುವಕನ ಜೀವನದ ಬಗ್ಗೆ ಮತ್ತು ಪ್ರೀತಿಯಲ್ಲಿ ಬಿದ್ದ ನಂತರ ಅದು ಹೇಗೆ ಬದಲಾಗುತ್ತದೆ ಎಂಬುದೇ ಈ ಸಿನಿಮಾ. ನಾವು ಒಂದು ಘಟನೆಯಿಂದ ಸ್ಫೂರ್ತಿ ಪಡೆದಿದ್ದೇವೆ ಮತ್ತು ಅದನ್ನು ಸಿನಿಮೀಯ ರೀತಿಯಲ್ಲಿ ಪ್ರಸ್ತುತಪಡಿಸಿದ್ದೇವೆ. ಒಬ್ಬ ನಟನಾಗಿ, ನಾನು ಈ ಯೋಜನೆಯನ್ನು ಆಸಕ್ತಿದಾಯಕವಾಗಿ ಕಂಡುಕೊಂಡಿದ್ದೇನೆ. ಇದು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ” ಎಂದಿದ್ದಾರೆ.

ವಸಿಷ್ಠ ಸಿಂಹ
'Love... ಲಿ' ಸಿನಿಮಾದ ಸ್ಕ್ರಿಪ್ಟ್‌ ಕೇಳಿದ ತಕ್ಷಣವೇ ನಾನು ಪ್ರೀತಿಯಲ್ಲಿ ಬಿದ್ದೆ: ವಸಿಷ್ಠ ಸಿಂಹ

ಈ ಸಿನಿಮಾದಲ್ಲಿ ಹಲವು ಆಯಾಮಗಳಲ್ಲಿ ವರಿಷ್ಠ ಸಿಂಹ ಕಾಣಿಸಿಕೊಳ್ಳುತ್ತಾರೆ. ನಿರ್ಮಾಪಕರ ಸಹಕಾರದಿಂದ ಸಿನಿಮಾ ಇಷ್ಟು ಚೆನ್ನಾಗಿ ಬಂದಿದೆ. ಸಾಂಗ್ ನಂತೆ ಸಿನಿಮಾ ಕೂಡ ಕಲರ್ ಫುಲ್ ಆಗಿದೆ. ಇದು ವಸಿಷ್ಠ ಅವರ ವೃತ್ತಿಜೀವನದ ದೊಡ್ಡ ಬಜೆಟ್‌ ಚಿತ್ರವಾಗಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಕೇಶವ್ ಅವರು ತಿಳಿಸಿದ್ದಾರೆ.

ಜೂನ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದು, ಮೇ 13 ರಂದು ಎರಡನೇ ಹಾಡನ್ನು ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ. ಕುತೂಹಲಕಾರಿಯಾಗಿ, ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಸಂಯೋಜಿಸಿದ ಈ ಹಾಡು, ಪ್ರಜ್ವಲ್ ಸಾಹಿತ್ಯ ಬರೆದ ಸಾಹಿತ್ಯದೊಂದಿಗೆ, ಗಾಯಕರೂ ಆಗಿರುವ ವಸಿಷ್ಠ ಸಿಂಹ ಅವರು ಈ ಟ್ರ್ಯಾಕ್‌ಗೆ ತಮ್ಮ ಧ್ವನಿ ನೀಡಿದ್ದಾರೆ.

ದೂರದರ್ಶನದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಖ್ಯಾತಿಯ ನಟಿ ಸುಬ್ಬಲಕ್ಷ್ಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲ ಕಲಾವಿದೆ ವಂಶಿಕಾ, ನಟರಾದ ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭರಾಜ್ ಮತ್ತು ಅಚ್ಯುತ್ ಕುಮಾರ್ ಸಹ ತಾರಾ ಬಳಗದ ಭಾಗವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com