
ಲವ್ ಮಾಕ್‌ಟೇಲ್ ಖ್ಯಾತಿಯ ನಟ ಕೃಷ್ಣ ಇತ್ತೀಚೆಗೆ ಸುಕೇಶ್ ನಾಯಕ್ ಅವರ ಮುಂಬರುವ ಬಹುಭಾಷಾ ಐತಿಹಾಸಿಕ ಹಲಗಲಿ ಸಿನಿಮಾದಲ್ಲಿ ಧೈರ್ಯಶಾಲಿ ಯೋಧನ ಪಾತ್ರಕ್ಕಾಗಿ ಸುಮಾರು ಆರು ತಿಂಗಳ ಕಾಲ ಕಠಿಣ ತರಬೇತಿಯನ್ನು ಪಡೆದಿದ್ದರು.
1857 ರ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾದ ದೊಡ್ಡ ಕ್ಯಾನ್ವಾಸ್ ಚಲನಚಿತ್ರ, ಹಲಗಲಿಯ ಚಿತ್ರೀಕರಣವು ಫೆಬ್ರವರಿಯಲ್ಲಿ ಪ್ರಾರಂಭವಾಯಿತು, ಮೈಸೂರಿನ ಲಲಿತ್ ಮಹಲ್ ಅರಮನೆಯಲ್ಲಿ ಶೂಟಿಂಗ್ ಆರಂಭವಾಗಿತ್ತು. ಮಾರ್ಚ್‌ನಲ್ಲಿ ಕೃಷ್ಣ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು, ಆದರೆ ಸದ್ಯಕ್ಕೆ ಹರಡುತ್ತಿರುವ ಹಾಟ್ ನ್ಯೂಸ್ ಎಂದರೇ ಕೃಷ್ಣ ಇನ್ನು ಮುಂದೆ ಹಲಗಲಿ ಚಿತ್ರದಲ್ಲಿ ನಟಿಸುವುದಿಲ್ಲ ಎಂಬುದು.
ಹಲಗಲಿಯಿಂದ ಕೃಷ್ಣ ಹೊರ ನಡೆದಿರುವುದನ್ನು ನಿರ್ದೇಶಕ ಸುಕೇಶ್ ಖಚಿತಪಡಿಸಿದ್ದಾರೆ. ಸೃಜನಶೀಲ ಭಿನ್ನಾಭಿಪ್ರಾಯಗಳು ನಿರ್ಧಾರಕ್ಕೆ ಕಾರಣವಾಗಿರಬಹುಗದು ಎಂದು ಹೇಳುತ್ತಾರೆ. "ಇದೊಂದು ಐತಿಹಾಸಿಕ ಚಿತ್ರವಾದ್ದರಿಂದ, ಕೃಷ್ಣ ಅವರಲ್ಲಿ ಎರಡು ವರ್ಷ ಈ ಚಿತ್ರಕ್ಕೆ ತಮ್ಮ ಸಮಯ ಮೀಸಲಿಡುವಂತೆ ಕೋರಿದ್ದರು. ಹಲಗಲಿ ಹೊರತು ಪಡಿಸಿ ಬೇರೆ ಚಿತ್ರದ ಬಗ್ಗೆ ಆಲೋಚನೆ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ ಇದಾದ ಕೆಲವೇ ದಿನದಲ್ಲಿ ಡಾರ್ಲಿಂಗ್ ಕೃಷ್ಣ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು ಅವರ ಪಕ್ಕ ಕಾಣಿಸಿಕೊಂಡರು. ಫಾದರ್ ಚಿತ್ರವನ್ನ ಒಪ್ಪಿಕೊಂಡರು. ನಾವು ಬ್ರಿಟಿಷರ ಅವಧಿಯಲ್ಲಿ ನಡೆದ ಎಪಿಸೋಡ್‌ಗಳನ್ನು ಒಳಗೊಂಡ ಒಂದೆರಡು ಶೆಡ್ಯೂಲ್‌ಗಳನ್ನು ಪೂರ್ಣಗೊಳಿಸಿದ್ದು, ಕೃಷ್ಣ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಡಾರ್ಲಿಂಗ್ ಕೃಷ್ಣ ಅವರ ಈ ನಡೆಯಿಂದ ಸಹಜವಾಗಿಯೇ ಹಲಗಲಿ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್ ಮತ್ತು ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಅವರಿಗೆ ಬೇಸರ ಆಗಿದೆ. ಇದೊಂದು ದೊಡ್ಡ ಬಜೆಟ್ ನ ಸಿನಿಮಾವಾಗಿದ್ದು, ಹಲಗಲಿ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸುವ ನಾಯಕ ಬೇಕಾಗಿದ್ದಾರೆ. ಹೀಗಾಗಿಯೇ ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರು ಸದ್ಯಕ್ಕೆ ತಮ್ಮ ಐತಿಹಾಸಿಕ ಚಿತ್ರಕ್ಕೆ ಬೇರೆ ನಾಯಕರನ್ನ ಹುಡುಕುತ್ತಿದ್ದಾರೆ. ಹೊಸ ನಾಯಕನ ಆಯ್ಕೆಯಾದ ನಂತರ ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದ್ದಾರೆ.
ಹಲವರ ಜೊತೆ ಮಾತು-ಕಥೆ ಮಾಡಿದ್ದಾರೆ. ಅಂದ್ಹಾಗೇ ಡಾರ್ಲಿಂಗ್ ಕೃಷ್ಣ ಒಂದೆರಡು ದಿನದ ಚಿತ್ರೀಕರಣದಲ್ಲಿ ಹಿಂದೆ ಭಾಗಿಯಾಗಿದ್ದರು. ಮೊದಲ ದಿನದ ಶೂಟಿಂಗ್‌ನಲ್ಲಿ 200ಕ್ಕೂ ಹೆಚ್ಚು ಅಮೆರಿಕ ಹಾಗೂ ರಷ್ಯನ್ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು.
ದುಹಾರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಕಲ್ಯಾಣ್ ಚಕ್ರವರ್ತಿ ನಿರ್ಮಿಸಿದ, ನಿರ್ಮಾಪಕರು ಹಲಗಲಿಯನ್ನು ಆರಂಭದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಮಾಡಲು ಯೋಜಿಸುತ್ತಿದ್ದಾರೆ ಮತ್ತು ನಂತರ ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಹಲಗಲಿ ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೋರೆ ಅವರ ಸಾಹಸ ನೃತ್ಯ ನಿರ್ದೇಶನವಿದೆ. ಡಾರ್ಲಿಂಗ್ ಕೃಷ್ಣ ಅವರ ಜಾಗಕ್ಕೆ ಯಾರು ಬರ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.
Advertisement