
ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. 18 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ ದಂಪತಿ ದೂರಾಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಇನ್ನು ಇಬ್ಬರ ನಿರ್ಧಾರಕ್ಕೆ ಕಾರಣ ಏನು ಎನ್ನುವ ಪ್ರಶ್ನೆಯೂ ಎದ್ದಿದೆ. ಧನುಷ್- ಐಶ್ವರ್ಯ ಡಿವೋರ್ಸ್ ಸಂಬಂಧ ಗಾಯಕಿ ಸುಚಿತ್ರಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.
ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ಬಗ್ಗೆ ತಮಿಳು ಸಂದರ್ಶನವೊಂದರಲ್ಲಿ ಆಕೆ ಮಾತನಾಡಿದ್ದಾರೆ. ಧನುಷ್ ಒಳ್ಳೆ ತಂದೆ, ಆದರೆ ಐಶ್ವರ್ಯ ರಜನಿಕಾಂತ್ ಒಳ್ಳೆ ತಾಯಿ ಅಲ್ಲ ಎಂದು ಸುಚಿತ್ರಾ ಹೇಳಿದ್ದಾರೆ. ಐಶ್ವರ್ಯ ರಜನಿಕಾಂತ್ ಜೀವನದಲ್ಲಿ ಏನು ಸಾಧಿಸಿದ್ದಾರೆ. ಜನರ ಸಿಂಪಥಿ ಎಲ್ಲಾ ಧನುಷ್ ಪರವಾಗಿಯೇ ಇದೆ. ಯಾಕಂದರೆ ಐಶ್ವರ್ಯ ಒಳ್ಳೆ ತಾಯಿ ಅಲ್ಲ, ಆದರೆ ಧನುಷ್ ಒಳ್ಳೆಯ ತಂದೆ. ಆಕೆ ತಾಯಿಯಾಗಿ ಏನು ಮಾಡಿದ್ದಾರೆ. ತನ್ನನ್ನು ತಾನು ಪ್ರಚಾರ ಮಾಡಿಕೊಂಡಿದ್ದಾರೆ. ಆಕೆ ಒಳ್ಳೆ ತಾಯಿ ಅಲ್ಲ ಎಂದು ಧನುಷ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅದು ನಮಗೆ ಗೊತ್ತುಎಂದು ಸುಚಿತ್ರಾ ಹೇಳಿದ್ದಾರೆ.
ಇಬ್ಬರು ತಾವು ಡೇಟಿಂಗ್ ಮಾಡುವವರ ಜೊತೆ ಪಾರ್ಟಿ, ಪಬ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರಿಂಕ್ಸ್ ಮಾಡಿದ್ದಾರೆ. ವೈವಾಹಿಕ ಜೀವನ ನಡೆಸುವುದು ಬೇರೆಯವರೊಟ್ಟಿಗೆ ಡೇಟ್ ಹೋಗುವುದು ಎಷ್ಟು ಸರಿ? ಆಳವಾದ ಸಮುದ್ರ ಹಾಗೂ ದೆವ್ವ ಇಬ್ಬರಲ್ಲಿ ದೆವ್ವನೇ ಉತ್ತಮ ಅಂದ್ರೆ, ಧನುಷ್ ವಾಸಿ" ಎಂದು ಸುಚಿತ್ರಾ ಹೇಳಿರುವುದು ವೈರಲ್ ಆಗ್ತಿದೆ. 'ಐಶ್ವರ್ಯಾ ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾಳೆ. ಆದರೆ ಮದುವೆಯ ಉದ್ದಕ್ಕೂ ಅವಳು ಅದನ್ನೇ ಮಾಡಿದ್ದಾಳೆ. ಆಕೆಗೊಂದು ನ್ಯಾಯ ಆತನಿಗೊಂದು ನ್ಯಾಯವೇ?' ಎಂದು ಸುಚಿತ್ರಾ ಪ್ರಶ್ನಿಸಿದ್ದಾರೆ. ಐಶ್ವರ್ಯ ಧನುಷ್ ಗೆ ಮೋಸ ಮಾಡಿದ್ದಾರೆ, ಧನುಷ್ ಐಶ್ವರ್ಯಗೆ ಮೋಸ ಮಾಡಿದ್ದಾರೆ. ಅವರು ವ್ಯವಸ್ಥಿತವಾಗಿ ಪರಸ್ಪರ ಮೋಸ ಮಾಡಿಕೊಂಡಿದ್ದ ದಂಪತಿಗಳು ಎಂದು ಸುಚಿತ್ರಾ ಹೇಳಿದ್ದಾರೆ.
Advertisement