ನಟ ಮೋಹನ್ ಲಾಲ್
ನಟ ಮೋಹನ್ ಲಾಲ್

'ಎಂದೆಂದು ನಿನ್ನನು ಮರೆತು...' ಹಾಡು ಹಾಡಲು ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಪ್ರಯತ್ನ; ವಿಡಿಯೋ ವೈರಲ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಅವರು ಅಣ್ಣಾವ್ರ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು..’ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಅವರು ಅಣ್ಣಾವ್ರ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು..’ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಡಾ. ರಾಜ್‌ಕುಮಾರ್ ಜೊತೆ ಮೋಹನ್ ಲಾಲ್ ಅವರಿಗೆ ಒಳ್ಳೆಯ ಬಾಂಧವ್ಯವಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಹೊಸ ವೀಡಿಯೋ ವೈರಲ್ ಆಗಿದೆ

ನಟ ಮೋಹನ್ ಲಾಲ್
ಜೋಗಿ ಪ್ರೇಮ್- ಧ್ರುವ ಸರ್ಜಾ ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್?

ಮೋಹನ್‌ ಲಾಲ್ ಅವರು ಮಲಯಾಳಂನಲ್ಲಿ ಜನಪ್ರಿಯ ನಟರಾಗಿದ್ದು, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡದಲ್ಲೂ ಅಭಿಮಾನಿಗಳು ಇದ್ದಾರೆ. ಅಪ್ಪು ಜೊತೆ ಮೈತ್ರಿ ಸಿನಿಮಾದಲ್ಲಿ ಮೋಹನ್ ಲಾಲ್ ಕನ್ನಡದಲ್ಲಿ ನಟಿಸಿದ್ದರು.

50 ವರ್ಷಗಳ ಹಿಂದೆ ತೆರೆಕಂಡ ದೊರೆ ಭಗವಾನ್ ನಿರ್ದೇಶನದ ಎರಡು ಕನಸು ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಮಂಜುಳಾ ಜೋಡಿಯಾಗಿದ್ದರು.

X

Advertisement

X
Kannada Prabha
www.kannadaprabha.com