ಅವಿವಾ ಸೀಮಂತದ ಫೋಟೋ (ಸಂಗ್ರಹ ಚಿತ್ರ)
ಸಿನಿಮಾ ಸುದ್ದಿ
ಜ್ಯೂನಿಯರ್ ಅಂಬರೀಷ್ ಎಂಟ್ರಿ!: ಅವಿವಾ ಬಿದ್ದಪ್ಪ-ಅಭಿಷೇಕ್ ದಂಪತಿಗೆ ಗಂಡು ಮಗು ಜನನ!
ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಅವಿವಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗನನ್ನು ಸುಮಲತಾ ಅವರು ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ.
ಬೆಂಗಳೂರು: ನಟ ಅಭಿಷೇಕ್ ಅಂಬರೀಶ್-ಅವಿವಾ ದಂಪತಿಗೆ ಗಂಡು ಮಗು ಜನನವಾಗಿದ್ದು, ಈ ವಿಚಾರ ಅಂಬರೀಶ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಅವಿವಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮೊಮ್ಮಗನನ್ನು ಸುಮಲತಾ ಅವರು ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ. ತಾಯಿ ಅವೀವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ಅಭಿಷೇಕ್ ಮತ್ತು ಅವಿವಾ ಅವರ ವಿವಾಹ ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದು, ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ. ಜ್ಯೂನಿಯರ್ ಅಂಬರೀಷ್ ಅವರ ಎಂಟ್ರಿ ಇದೀಗ ಎರಡೂ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ

