ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ 'ಗುಮ್ಟಿ' ಎಷ್ಟೋ ಜನರಿಗೆ ತಿಳಿಯದ ಕರಾವಳಿ ಭಾಗದ ಕುಡುಬಿ ಸಮುದಾಯದ ಸಂಪ್ರದಾಯವನ್ನು ಪರಿಚಯಿಸಲು ಸಜ್ಜಾಗಿದೆ. ಸಾಂಪ್ರದಾಯಿಕ ಸಂಗೀತ ವಾದ್ಯವಾದ 'ಗುಮ್ಟಿ' ಹೆಸರಿನ ಈ ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿತ್ತು. ಇದರಲ್ಲಿ ಸಮುದಾಯದ ವಿಶಿಷ್ಟ ಸಂಸ್ಕೃತಿಯ ಮಣ್ಣಿನ ಮಾಡಿಕೆಯಿಂದ ಮಾಡಿದ ವಾದ್ಯ ಜನರ ಮನ ಸೆಳೆದಿದೆ.
ಕರಾವಳಿ ಕರ್ನಾಟಕದ ಹಿನ್ನೆಲೆಯ ಗುಮ್ಟಿ ಕೇವಲ ಪ್ರಾಚೀನ ವಾದ್ಯವಲ್ಲ; ಇದು ಕುಡುಬಿ ಜನರ ಪದ್ಧತಿಗಳು, ಮೌಲ್ಯಗಳು ಮತ್ತು ಜೀವನ ವಿಧಾನವಾಗಿದೆ. ಅವರ ಜಾನಪದ ಕಲೆ ಮತ್ತು ಆಧುನಿಕ ಒತ್ತಡಗಳ ನಡುವೆ ತಮ್ಮ ಸಂಸ್ಕೃತಿ ಉಳಿಸುವಲ್ಲಿ ಅವರು ಎದುರಿಸುತ್ತಿರುವ ಸವಾಲುಗಳನ್ನು ಈ ಚಿತ್ರ ತೋರಿಸುತ್ತದೆ. ಗುಮ್ಟಿ ತಲೆಮಾರುಗಳಿಂದ ಬೆಳೆದು ಬಂದ ಪುರಾತನ ಸಂಗೀತ ವಾದ್ಯವಾಗಿದೆ. ಇದು ಸಮುದಾಯ ಮತ್ತು ಅದರ ಪರಂಪರೆಯ ನಡುವಿನ ಸಂಪರ್ಕವನ್ನು ಪ್ರತಿನಿಧಿಸುತ್ತದೆ ಎಂದು ಚಿತ್ರ ತಂಡ ಹೇಳಿದೆ.
ಚಿತ್ರದ ನಿರ್ದೇಶನ ಜೊತೆಗೆ ನಾಯಕನಾಗಿಯೂ ನಟಿಸಿರುವ ಸಂದೇಶ್ ಶೆಟ್ಟಿ ಆಜ್ರಿ, ‘ಕುಡುಬಿ ಜನರ ಜೀವನ, ಜಾನಪದ ಸಂಗೀತ, ಕುಟುಂಬ, ಸಮುದಾಯದ ಮಹತ್ವ ಮತ್ತು ಆಧುನಿಕತೆಯೊಂದಿಗೆ ಘರ್ಷಣೆಯ ಭಾವನಾತ್ಮಕ ಸಂಘರ್ಷವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಕಥೆಯೊಂದಿಗೆ ವೈಯಕ್ತಿಕ ಸಂಪರ್ಕವನ್ನು ಹೊಂದಿರುವ ನಿರ್ಮಾಪಕ ವಿಕಾಸ್ ಎಸ್ ಶೆಟ್ಟಿ, ಈ ಚಿತ್ರ ಕುಡುಬಿ ಸಮುದಾಯ ಮತ್ತು ಅವರ ಹೇಳಲಾಗದ ಕಥೆಗೆ ಗೌರವವಾಗಿದೆ. ಅದನ್ನು ಅಧಿಕೃತವಾಗಿ ಹೇಳಲು ಪ್ರಯತ್ನಿಸಿದ್ದೇವೆ. ಇದು ಪ್ರೇಕ್ಷಕರೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಉದ್ವಿಗ್ನತೆ ಚಿತ್ರದ ಪ್ರಮುಖ ವಿಷಯವಾಗಿದೆ. ಏಕೆಂದರೆ ಕುಡುಬಿ ಸಮುದಾಯ ಬದಲಾವಣೆಗೆ ಹೊಂದಿಕೊಳ್ಳುವಾಗ ತಮ್ಮ ಪರಂಪರೆಯನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದೆ. "ಇದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಸಂಸ್ಕೃತಿಯನ್ನು ಉಳಿಸುವ ಸಾರ್ವತ್ರಿಕ ಕಥೆಯಾಗಿದೆ ಎಂದು ಸಂದೇಶ್ ಶೆಟ್ಟಿ ಹೇಳಿದರು.
ವೈಷ್ಣವಿ ನಾಡಿಗ್ ನಾಯಕಿಯಾಗಿದ್ದು, ಅನೀಶ್ ಡಿಸೋಜಾ ಅವರ ಅತ್ಯಾಕರ್ಷಕ ಛಾಯಾಗ್ರಹಣವಿದೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದ್ದು, ನಾವು ಎಲ್ಲಿಂದ ಬಂದಿದ್ದೇವೆ ಮತ್ತು ನಾವು ಯಾವುದಕ್ಕಾಗಿ ನಿಲ್ಲುತ್ತೇವೆ ಎಂಬುದನ್ನು ನೆನಪಿಸಿಕೊಳ್ಳುವ ಕಥೆಯಾಗಿದೆ ಎಂದು ನಿರ್ಮಾಪಕ ವಿಕಾಸ್ ಶೆಟ್ಟಿ ಹೇಳಿದರು.
Advertisement