ಕಾಲೇಜ್ ಕುಮಾರ್' ಸಿನಿಮಾ ಮಾಡಿ ಫೇಮಸ್ ಆಗಿದ್ದ ವಿಕ್ಕಿ ವರುಣ್ ಹಾಗೂ ಹರಿ ಸಂತೋಷ್ ಅವರು ಮತ್ತೊಂದು ಚಿತ್ರಕ್ಕೆ ಕೈಜೋಡಿಸಿದ್ದಾರೆ.
ಚಿತ್ರಕ್ಕೆ ಡಿಸ್ಕೋ ಎಂಬ ಶೀರ್ಷಿಕೆ ನೀಡಲಾಗಿದ್ದು, ಚಿತ್ರ ತಂಡ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ. ಚಿತ್ರಕ್ಕೆ ಪ್ರಶಾಂತ್ ಕಲ್ಲೂರು ಬಂಡವಾಳ ಹೂಡಿದ್ದು, ಪೆನ್-ಎನ್ ಪೇಪರ್ ಸ್ಟುಡಿಯೋಸ್, ಸ್ಕ್ರೀನ್ 1 ನೇ ಸ್ಟುಡಿಯೋಸ್ ಮತ್ತು ಕಲ್ಲೂರ್ ಸಿನಿಮಾಸ್ ಸಿನಿಮಾ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.
ವಿಕ್ಕಿ ವರುಣ್ ಚಿತ್ರಕ್ಕೆ ಕಥೆ ಬರೆದಿದ್ದು, ಹರಿ ಸಂತೋಷ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರವು ನಿಜ ಜೀವನದ ಘಟನೆಯನ್ನು ಆಧರಿಸಿದ್ದು, ಚಿತ್ರದಲ್ಲಿ ಸಾಮಾನ್ಯ ಸಿನಿಮಾ ನಿರ್ಮಾಣದ ಮಾದರಿಯನ್ನು ಅನುಸರಿಸುವುದಿಲ್ಲ ಹರಿ ಸಂತೋಷ್ ಅವರು ಹೇಳಿದ್ದಾರೆ.
ಕಾಲೇಜ್ ಕುಮಾರ್ ನಂತರ ನಿರ್ದೇಶಕ ಸಂತೋಷ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ನನ್ನ ಜೀವನದ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ ಇದು ಉತ್ತಮ ಭಾವನೆ. ಪಾತ್ರವು ಹಾಸ್ಯ ಹಾಗೂ ಭಾವನಗಳೊಂದಿಗೆ ಸಂಯೋಜನೆಗೊಂಡಿದ್ದು, ನನ್ನ ಸುತ್ತಮುತ್ತಲಿನ ಜನರು ನನ್ನನ್ನು ಡಿಸ್ಕೋ ಎಂದು ಕರೆಯುತ್ತಾರೆ. ಅದೇ ಹೆಸರನ್ನೇ ಚಿತ್ರಕ್ಕೂ ಇಡಲಾಗಿದೆ ಎಂದು ನಟ ವಿಕ್ಕಿ ಹೇಳಿದ್ದಾರೆ.
ಅಲೆಮಾರಿ ಚಿತ್ರದಿಂದ ಖ್ಯಾತಿ ಗಳಿಸಿರುವ ಹರಿ ಸಂತೋಷ್ ಅವರು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ನಟಿಸಿರುವ ಬೈ 2 ಲವ್ ಚಿತ್ರನ್ನೂ ನಿರ್ದೇಶಿಸಿದ್ದಾರೆ.
ತನುಜ್ ವಿರ್ವಾನಿ, ತ್ರಿಧಾ ಚೌಧರಿ ಮತ್ತು ಸಪ್ನಾ ಪಬ್ಬಿ ನಟಿಸಿರುವ ತಮ್ಮ ಚೊಚ್ಚಲ ಹಿಂದಿ ಚಲನಚಿತ್ರ ಬೆಸಬರಿಯಾ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದಾರೆ. ಬೇಸಬರಿಯಾ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮತ್ತೊಂದೆಡೆ, ಡಿಸ್ಕೋ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.
Advertisement