'ಮಹಾವತಾರ ನರಸಿಂಹ' ದಂತಹ ಕಥೆಯನ್ನು ಜನರಿಗೆ ತೋರಿಸಬೇಕು: ವಿಜಯ್ ಕಿರಗಂದೂರು

ಚಿತ್ರದ ಗಮನ ಸೆಳೆಯುವ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡುವುದರೊಂದಿಗೆ ಹೊಂಬಾಳೆ ಸಂಸ್ಥೆ ಘೋಷಣೆ ಮಾಡಿದೆ, ಹೊಸ ಯೋಜನೆಗೆ ವೇದಿಕೆ ಸಿದ್ಧವಾಗಿದ್ದು, ಕುತೂಹಲಕಾರಿ ಶೀರ್ಷಿಕೆಯನ್ನು ನೀಡಲಾಗಿದೆ.
'ಮಹಾವತಾರ ನರಸಿಂಹ' ದಂತಹ ಕಥೆಯನ್ನು ಜನರಿಗೆ ತೋರಿಸಬೇಕು: ವಿಜಯ್ ಕಿರಗಂದೂರು
Updated on

ಹೊಂಬಾಳೆ ಫಿಲ್ಮ್ಸ್, ಕೆಜಿಎಫ್, ಕಾಂತಾರ, ಮತ್ತು ಸಲಾರ್: ಭಾಗ 1 ರಂತಹ ಮೆಗಾ ಬ್ಲಾಗ್ ಬ್ಲಸ್ಟರ್ ಚಿತ್ರಗಳನ್ನು ನಿರ್ಮಾಣ ಮಾಡಿದ ಸಂಸ್ಥೆ, ಈಗ ಮಹಾವತಾರ್ ನರಸಿಂಹ ಎಂಬ ಪೌರಾಣಿಕ ಚಲನಚಿತ್ರವನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಈ ಅನಿಮೇಟೆಡ್ ಚಿತ್ರದ ಮೂಲಕ ಭಿನ್ನ ಕಥೆಯನ್ನು ತೋರಿಸುವ ವಿಶಿಷ್ಟ ಸಾಹಸಕ್ಕೆ ಮುಂದಾಗಿದೆ.

ಚಿತ್ರದ ಗಮನ ಸೆಳೆಯುವ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡುವುದರೊಂದಿಗೆ ಹೊಂಬಾಳೆ ಸಂಸ್ಥೆ ಘೋಷಣೆ ಮಾಡಿದೆ, ಹೊಸ ಯೋಜನೆಗೆ ವೇದಿಕೆ ಸಿದ್ಧವಾಗಿದ್ದು, ಕುತೂಹಲಕಾರಿ ಶೀರ್ಷಿಕೆಯನ್ನು ನೀಡಲಾಗಿದೆ, "ನಂಬಿಕೆಗೆ ಸವಾಲು ಬಂದಾಗ, ಅವನು ಕಾಣಿಸಿಕೊಳ್ಳುತ್ತಾನೆ. ಅಂಧಕಾರ ಮತ್ತು ಅವ್ಯವಸ್ಥೆಯಿಂದ ಛಿದ್ರವಾಗಿರುವ ಜಗತ್ತಿನಲ್ಲಿ... ದಂತಕಥೆಯ ಗೋಚರಿಸುವಿಕೆಗೆ ಸಾಕ್ಷಿ-ಅರ್ಧ ಮನುಷ್ಯ, ಅರ್ಧ ಸಿಂಹ ಅವತಾರ: ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರ.

ಮಹಾವತಾರ ನರಸಿಂಹ ಮಹಾವತಾರ ಸರಣಿಯ ಮೊದಲ ಕಥೆಯಾಗಿದ್ದು, ಹೊಂಬಾಳೆ ಫಿಲ್ಮ್ಸ್‌ನಿಂದ ರೋಮಾಂಚನಕಾರಿ ಹೊಸ ಪೌರಾಣಿಕ ಕಥೆಯ ಪ್ರಾರಂಭವನ್ನು ಗುರುತಿಸುತ್ತದೆ. ಈ ಮಹತ್ವಾಕಾಂಕ್ಷೆಯ ಅನಿಮೇಷನ್ ಚಿತ್ರವು ಭಾರತೀಯ ದಂತಕಥೆಗಳನ್ನು ಪರದೆಯ ಮೇಲೆ ಹೇಗೆ ಜೀವಂತಗೊಳಿಸುತ್ತದೆ ಎಂಬುದನ್ನು ಮರುರೂಪಿಸುವ ಕಥೆಗಳ ಸಂಗ್ರಹದ ಪ್ರಾರಂಭವಾಗಿದೆ.

ಕ್ಲೀಮ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಮಹಾವತಾರ ನರಸಿಂಹ ಚಿತ್ರವನ್ನು ಶಿಲ್ಪಾ ಧವನ್, ಕುಶಾಲ್ ದೇಸಾಯಿ ಮತ್ತು ಚೈತನ್ಯ ದೇಸಾಯಿ ನಿರ್ಮಿಸಿದ್ದಾರೆ. ಅಶ್ವಿನ್ ಕುಮಾರ್ ನಿರ್ದೇಶಿಸಿದ ಮತ್ತು ಬರೆದಿರುವ ಈ ಚಿತ್ರವು ಸಂಯೋಜಕ ಸ್ಯಾಮ್ ಸಿಎಸ್ ರಚಿಸಿದ್ದಾರೆ. ಇದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಮಹಾಯುದ್ಧ ಎಂದು ತೋರಿಸಲಾಗುತ್ತಿದೆ.

ಚಿತ್ರದ ಫಸ್ಟ್-ಲುಕ್ ಟೀಸರ್ ಪ್ರೇಕ್ಷಕರಿಗೆ ಭಗವಾನ್ ವಿಷ್ಣುವಿನ ಪೌರಾಣಿಕ ಪುರುಷ-ಸಿಂಹ ಅವತಾರ ಭಗವಾನ್ ನರಸಿಂಹನ ಒಂದು ನೋಟವನ್ನು ನೀಡುತ್ತದೆ. ಹಿಂದೂ ಪುರಾಣಗಳಲ್ಲಿ ವಿವರಿಸಿದಂತೆ, ಜಗತ್ತನ್ನು ಗೊಂದಲದಲ್ಲಿ ಮುಳುಗಿಸಿದ ಕ್ರೂರ ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಸೋಲಿಸಲು ವಿಷ್ಣುವು ಅರ್ಧ ಮನುಷ್ಯ, ಅರ್ಧ ಸಿಂಹದ ರೂಪದಲ್ಲಿ ಅವತಾರ ತಾಳಿದನು. ಟೀಸರ್ ಈ ಅಪ್ರತಿಮ ಪಾತ್ರದ ಒಂದು ನೋಟವನ್ನು ನೀಡುತ್ತದೆ, ದೈವಿಕ ಮತ್ತು ಉಗ್ರ ಸ್ವರೂಪವನ್ನು ಎತ್ತಿ ತೋರಿಸುತ್ತದೆ.

ಹೊಂಬಾಳೆ ಫಿಲಂಸ್‌ನ ಹಿಂದಿನ ದಾರ್ಶನಿಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಯೋಜನೆಯ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ: “ಮಹಾವತಾರ ನರಸಿಂಹನ ಭಾಗವಾಗಲು ನಮಗೆ ನಿಜವಾಗಿಯೂ ಗೌರವ ಎನಿಸುತ್ತದೆ. ಈ ಅನಿಮೇಟೆಡ್ ಚಲನಚಿತ್ರವನ್ನು ದೊಡ್ಡ ಹೃದಯ, ನಂಬಿಕೆ ಮತ್ತು ನಾವು ಪ್ರೀತಿಸುವ ಮೌಲ್ಯಗಳಿಗೆ ಆಳವಾದ ಗೌರವದಿಂದ ರಚಿಸಲಾಗಿದೆ.

'ಮಹಾವತಾರ ನರಸಿಂಹ' ದಂತಹ ಕಥೆಯನ್ನು ಜನರಿಗೆ ತೋರಿಸಬೇಕು: ವಿಜಯ್ ಕಿರಗಂದೂರು
Prabhas-Hombale Films ನಡುವೆ 3 ಹೊಸ ಸಿನಿಮಾಗೆ ಪಾಲುದಾರಿಕೆ; ವಿವರ ಹೀಗಿದೆ...

ಇದು ಜನತೆಗೆ ಹೇಳಲು ಅರ್ಹವಾದ ಪ್ರಮುಖ ಕಥೆ ಎಂದು ನಾವು ನಂಬುತ್ತೇವೆ. ಹಿಂದೂ ಧರ್ಮಗ್ರಂಥಗಳು ಆಕರ್ಷಕ ಮತ್ತು ಶಕ್ತಿಯುತ ನಿರೂಪಣೆಗಳಿಂದ ತುಂಬಿವೆ ಮತ್ತು ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹನ ಕಥೆಯನ್ನು ಇಂದಿನ ಪ್ರೇಕ್ಷಕರಿಗೆ ಅನುರಣಿಸುವ ರೀತಿಯಲ್ಲಿ ದೊಡ್ಡ ಪರದೆಯ ಮೇಲೆ ತರಲು ನಾವು ಹೆಮ್ಮೆಪಡುತ್ತೇವೆ. ಈ ಕಥೆಗಳು ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಹೊಸ ಬೆಳಕಿನಲ್ಲಿ ಅನುಭವಿಸಬೇಕೆಂದು ನಾವು ಬಯಸುತ್ತೇವೆ.

ಮಹಾವತಾರ ನರಸಿಂಹವು 3D ಯಲ್ಲಿ ಬಿಡುಗಡೆಯಾಗಲಿದೆ, ಚಿತ್ರವು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಮಹಾಕಾವ್ಯ ಪೌರಾಣಿಕ ಕಥೆಯನ್ನು ಭಾರತ ಮತ್ತು ಅದರಾಚೆಗಿನ ವೀಕ್ಷಕರು ಆನಂದಿಸಬಹುದು ಎಂಬ ಭರವಸೆ ನಮಗಿದೆ ಎನ್ನುತ್ತಾರೆ ವಿಜಯ್ ಕಿರಗಂದೂರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com