Prabhas-Hombale Films ನಡುವೆ 3 ಹೊಸ ಸಿನಿಮಾಗೆ ಪಾಲುದಾರಿಕೆ; ವಿವರ ಹೀಗಿದೆ...

ಪ್ರಭಾಸ್ ಸಲಾರ್: ಪಾರ್ಟ್-1 Ceasefire ನಲ್ಲಿ ಹೊಂಬಾಳೆ ಫಿಲ್ಮ್ಸ್ ನ ಭಾಗವಾಗಿದ್ದರು. ಸಲಾರ್ ಭಾಗ 2 ಜೊತೆಗೆ ಇನ್ನೂ ಎರಡು ಯೋಜನೆಗಳನ್ನು ಒಳಗೊಂಡಿರುವ ಈ ಒಪ್ಪಂದ ಅತ್ಯಂತ ಮಹತ್ವದ ನಟ-ಸ್ಟುಡಿಯೋ ಸಹಯೋಗಗಳಲ್ಲಿ ಒಂದಾಗಿದೆ.
Prabhas-Hombale films
ಪ್ರಭಾಸ್- ಹೊಂಬಾಳೆ ಫಿಲ್ಮ್ಸ್ online desk
Updated on

ಬೆಂಗಳೂರು: ನಟ ಪ್ರಭಾಸ್ ಹೊಂಬಾಳೆ ಫಿಲ್ಮ್ಸ್ ನಡುವೆ 3 ಸಿನಿಮಾಗಳ ಪಾಲುದಾರಿಕೆಗೆ ಮುಂದಾಗಿದ್ದಾರೆ.

ಪ್ರಭಾಸ್ ಸಲಾರ್: ಪಾರ್ಟ್-1 Ceasefire ನಲ್ಲಿ ಹೊಂಬಾಳೆ ಫಿಲ್ಮ್ಸ್ ನ ಭಾಗವಾಗಿದ್ದರು. ಸಲಾರ್ ಭಾಗ 2 ಜೊತೆಗೆ ಇನ್ನೂ ಎರಡು ಯೋಜನೆಗಳನ್ನು ಒಳಗೊಂಡಿರುವ ಈ ಒಪ್ಪಂದ ಅತ್ಯಂತ ಮಹತ್ವದ ನಟ-ಸ್ಟುಡಿಯೋ ಸಹಯೋಗಗಳಲ್ಲಿ ಒಂದಾಗಿದೆ.

ಈ ಮಾಹಿತಿಯನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಘೋಷಿಸಿದ್ದು, ""𝐌𝐚𝐝𝐞 𝐢𝐧 𝐈𝐧𝐝𝐢𝐚 𝐚𝐧𝐝 𝐁𝐮𝐢𝐥𝐭 𝐭𝐨 𝐋𝐚𝐬𝐭! ಭಾರತೀಯ ಸಿನಿಮಾದ ಸಾರವನ್ನು ಜಗತ್ತಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಮೂರು-ಚಿತ್ರಗಳ ಪಾಲುದಾರಿಕೆಯಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಒಂದಾಗಲು ನಾವು ಹೆಮ್ಮೆಪಡುತ್ತೇವೆ ಎಂದು ತಿಳಿಸಿದೆ.

Prabhas-Hombale films
ನಟ ಪ್ರಭಾಸ್ ಹೊಸ ಚಿತ್ರಕ್ಕೆ Reels ಸ್ಟಾರ್ 'ಹಿರೋಯಿನ್'; Iman Esmail ಯಾರು ಗೊತ್ತಾ!

"ಇದು ಮರೆಯಲಾಗದ ಸಿನಿಮಾ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯ ಘೋಷಣೆಯಾಗಿದೆ. ವೇದಿಕೆ ಸಜ್ಜಾಗಿದೆ ಮತ್ತು ಮುಂದಿನ ಹಾದಿಯು ಅಪರಿಮಿತವಾಗಿದೆ. ಸಿದ್ಧರಾಗಿ, ಪ್ರಯಾಣವು #Salaar2 ನೊಂದಿಗೆ ಪ್ರಾರಂಭವಾಗುತ್ತದೆ..." ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆಗಿನ ಪ್ರಭಾಸ್ ಅವರ ಹೊಸ ಒಪ್ಪಂದದ ಅಡಿಯಲ್ಲಿ ಮೊದಲ ಪ್ರಾಜೆಕ್ಟ್ ಸಲಾರ್ ಭಾಗ 2 ಆಗಿರಲಿದೆ. ಚಲನಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಉಳಿದ 2 ಸಿನಿಮಾಗಳ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕುತೂಹಲವನ್ನು ಹಾಗೇ ಉಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com