ಬೆಂಗಳೂರು: ಶ್ರೀಮುರುಳಿ, ರುಕ್ಮಿಣಿ ವಸಂತ್ ನಟನೆಯ ಕನ್ನಡ ಸಿನಿಮಾ ಬಘೀರ ಚಿತ್ರ ಒಟಿಟಿ ರಿಲೀಸ್ ಫಿಕ್ಸ್ ಆಗಿದೆ.
ನವೆಂಬರ್ 21ರಂದು ಚಿತ್ರ ಓಟಿಟಿ ವೇದಿಕೆಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.
ಪ್ರಶಾಂತ್ ನೀಲ್ ಬಘೀರ ಸಿನಿಮಾಗೆ ಕಥೆ ಬರೆದಿದ್ದು, ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬಘೀರ ಸಿನಿಮಾವನ್ನು ನಿರ್ಮಾಣ ಮಾಡಿದೆ.
ಥಿಯೇಟರ್ ಗಳಲ್ಲಿ ಬಘೀರಾ ಸಿನಿಮಾ ಅ.31 ರಂದು ಬಿಡುಗಡೆಯಾಗಿತ್ತು. ಒಟಿಟಿ ವೇದಿಕೆಗಳಲ್ಲಿ ಬಘೀರ ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಭಾಷೆಯಗಳಲ್ಲಿ ಲಭ್ಯವಿರಲಿದ್ದು, ಇಂಗ್ಲೀಷ್ ಸಬ್ ಟೈಟಲ್ ಗಳಿರಲಿವೆ.
ಎಜೆ ಶೆಟ್ಟಿ ಸಿನಿಮೆಟಾಗ್ರಫಿ ಬಘೀರಾ ಸಿನಿಮಾಗೆ ಇದ್ದು, ಅಂಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ.
ಬಘೀರ ಸಿನಿಮಾ ಜಾಗತಿಕ ಡಿಜಿಟಲ್ ವೇದಿಕೆಗಳಲ್ಲಿ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದ ಮೊದಲ ಕನ್ನಡ ಸಿನಿಮಾ ಆಗಿದ್ದು, ಕನ್ನಡದ ಡಿಜಿಟಲ್ ಸ್ಪೇಸ್ ನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿರುವ ಸಿನಿಮಾ ಆಗಿದೆ.
Advertisement