ರಾಜ್ ಬಿ ಶೆಟ್ಟಿ - ಅಪರ್ಣಾ ಬಾಲಮುರಳಿ ಅಭಿನಯದ 'ರುಧಿರಂ' ಚಿತ್ರದ ಫಸ್ಟ್ ಲುಕ್ ಬಿಡುಗಡೆ!

ರುಧಿರಂ, ಜಿಶೋ ಮತ್ತು ಜೋಸೆಫ್ ಕಿರಣ್ ಜಾರ್ಜ್ ಸ್ಕ್ರಿಪ್ಟ್ ಬರೆದಿದ್ದು ವೈದ್ಯರ ಜೀವನದಲ್ಲಿ ನಡೆಯುವ ನಿಗೂಢ ಘಟನೆಗಳ ಬಗ್ಗೆ ವಿವರಿಸುತ್ತದೆ.
First look of 'Rudhiram'
ರುಧಿರಂ ಚಿತ್ರದ ಫಸ್ಟ್ ಲುಕ್
Updated on

ಜಿಶೋ ಲೋನ್ ಆಂಟೋನಿ ಚೊಚ್ಚಲ ನಿರ್ದೇಶನದ ರುಧಿರಂ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಬಾಲಮುರಳಿ ಅಭಿನಯಿಸಿದ್ದಾರೆ. ರುಧಿರಂ ಚಿತ್ರದ ಫಸ್ಟ್ ಲುಕ್ ಮಂಗಳವಾರ ಅನಾವರಣಗೊಂಡಿದೆ.

ಎದ್ದುಕಾಣುವ ಕೆಂಪು ಹಿನ್ನೆಲೆಯಲ್ಲಿ ಹೊಂದಿಸಲಾದ ಪೋಸ್ಟರ್, ಬಿಳಿ PPE ಕವರ್‌ನಲ್ಲಿ ಕುಳಿತಿರುವ ರಾಜ್‌ನನ್ನು ಚಿತ್ರಿಸುತ್ತದೆ, ಆದರೆ ಅಪರ್ಣಾ ಆತನ ಪಕ್ಕದಲ್ಲಿ ಬಂಡೆಯಂತೆ ಒರಟಾದ ಅವತಾರದಲ್ಲಿ ನಿಂತಿದ್ದಾರೆ. ರುಧಿರಂ, ಜಿಶೋ ಮತ್ತು ಜೋಸೆಫ್ ಕಿರಣ್ ಜಾರ್ಜ್ ಸ್ಕ್ರಿಪ್ಟ್ ಬರೆದಿದ್ದು ವೈದ್ಯರ ಜೀವನದಲ್ಲಿ ನಡೆಯುವ ನಿಗೂಢ ಘಟನೆಗಳ ಬಗ್ಗೆ ವಿವರಿಸುತ್ತದೆ. 2023 ರಲ್ಲಿ ಪ್ರಾರಂಭಿವಾದ ಈ ಚಿತ್ರವು ಆರಂಭದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ರಾಜ್ ಅವರ ಚೊಚ್ಚಲ ಚಿತ್ರ ಎಂದು ಪ್ಲಾನ್ ಮಾಡಲಾಗಿತ್ತು. ರಾಜ್ ಬಿ ಶೆಟ್ಟಿ ಟರ್ಬೋ ಮತ್ತು ಕೊಂಡಲ್‌ನಂತಹ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ನಮ್ಮೊಂದಿಗೆ ಮಾತನಾಡಿದ ಜಿಶೋ, ರುಧಿರಂ ಒಂದು ಸೇಡಿನ ಕಥೆಯಾಗಿದೆ, ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರಕ್ಕೆ ಸಾಜದ್ ಕಾಕ್ಕು ಅವರ ಛಾಯಾಗ್ರಹಣ, ಬವನ್ ಶ್ರೀಕುಮಾರ್ ಅವರ ಸಂಕಲನ ಮತ್ತು 4 ಮ್ಯೂಸಿಕ್ ಸಂಗೀತ ಸಂಯೋಜನೆಯಿದೆ. ಇದು ಮಲಯಾಳಂ ಜೊತೆಗೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಯಾಗಲಿದೆ. ರುಧಿರಂ ಅನ್ನು ರೈಸಿಂಗ್ ಸನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ವಿಎಸ್ ಲಾಲನ್ ನಿರ್ಮಿಸಿದ್ದಾರೆ, ಗೋಕುಲಂ ಗೋಪಾಲನ್ ಅವರ ಶ್ರೀ ಗೋಕುಲಂ ಮೂವೀಸ್ ವಿತರಣೆ ನಿರ್ವಹಿಸಲಿದೆ.

First look of 'Rudhiram'
'45' ಸಿನಿಮಾ ಟೀಸರ್ ಅನಾವರಣ: ಶಿವಣ್ಣ-ಉಪೇಂದ್ರ ಮುಂದೆ ರಾಜ್ ಬಿ ಶೆಟ್ಟಿ ಕರಾಟೆ ಪ್ರದರ್ಶನ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com