ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ 130ಕ್ಕೂ ದಿನಗಳ ಜೈಲು ವಾಸದ ಬಳಿಕ ಇದೀಗ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಇನ್ನು ಕೆಲ ನಿರ್ಮಾಪಕರು ದರ್ಶನ್ ಅಭಿನಯದ ಕರಿಯಾ, ನನ್ನ ಪ್ರೀತಿಯ ರಾಮು, ನವಗ್ರಹ ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ರೀ ರಿಲೀಸ್ ಮಾಡಲಾಗಿದೆ. ಆದರೆ ಚಿತ್ರಮಂದಿರಗಳು ಖಾಲಿ ಖಾಲಿಯಾಗಿದ್ದು ದರ್ಶನ್ ಕ್ರೇಜ್ ಕಡಿಮೆ ಆಯ್ತ ಎಂಬ ಅನುಮಾನ ಮೂಡಿಸಿವೆ.
ಹೊಸ ಸಿನಿಮಾಗಳನ್ನು ಬೆಳಗ್ಗೆ 10ಕ್ಕೆ ರಿಲೀಸ್ ಮಾಡಲಾಗುತ್ತದೆ. ಆದರೆ ದರ್ಶನ್ ಸಿನಿಮಾವನ್ನು ಮುಂಜಾನೆ 6ಕ್ಕೆ ಶೋ ಇಟ್ಟಿದ್ದರು. ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ನೂರು ಜನ ಕೂಡ ಇರಲಿಲ್ಲ. ಚಿತ್ರಮಂದಿರ ಖಾಲಿ ಖಾಲಿ ಆಗಿತ್ತು. ಇದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಸಿನಿಮಾಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಇಷ್ಟು ಬೇಗ ದರ್ಶನ್ ಕ್ರೇಜ್ ಕಡಿಮೆ ಆಯ್ತಾ ಎನ್ನುವ ಅನುಮಾನ ಮೂಡಿದೆ.
ಎರಡು ವಾರಗಳ ಹಿಂದೆ ನವಗ್ರಹ ಚಿತ್ರ ರೀ-ರಿಲೀಸ್ ಆಗಿತ್ತು. ಆ ಚಿತ್ರ ಒಂದು ವಾರದಲ್ಲೇ ಒಂದು ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ರಾಯಣ್ಣನ ಕಲೆಕ್ಷನ್ ಮೊದಲ ಶೋನಲ್ಲಿ 10 ಸಾವಿರ ರುಪಾಯಿ ದಾಟಿಲ್ಲ. ಹೀಗಾಗಿ ಚಿತ್ರದ ರಿಲೀಸ್ ಬಗ್ಗೆ ಪ್ರಚಾರ ಮಾಡದೇ ಬಿಡುಗಡೆ ಮಾಡಿ ದರ್ಶನ್ ಗೆ ಅವಮಾನ ಮಾಡಿದ್ದಾರೆ ಎಂಬುದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
Advertisement