ಉಡುಪಿ: ಕಾಂತಾರ ಚಿತ್ರತಂಡ ತೆರಳುತ್ತಿದ್ದ ಬಸ್ ಅಪಘಾತ; ಹಲವು ಕಲಾವಿದರಿಗೆ ಗಂಭೀರ ಗಾಯ

ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾದ ಬಸ್​ನಲ್ಲಿ ಹಲವರು ಇದ್ದರು. ಆ ಪೈಕಿ 6 ಜನರಿಗೆ ಗಂಭೀರವಾಗಿ ಪೆಟ್ಟಾಗಿದೆ.
Kantara cinema still
ಕಾಂತಾರ ಸಿನಿಮಾ ಸ್ಟಿಲ್
Updated on

ಉಡುಪಿ: ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್​ 1’ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಬಸ್​ ಅಪಘಾತ ಆಗಿದೆ. ಶೂಟಿಂಗ್ ಸಲುವಾಗಿ ಜ್ಯೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್​ ಪಲ್ಟಿ ಆಗಿದೆ.

ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾದ ಬಸ್​ನಲ್ಲಿ ಹಲವರು ಇದ್ದರು. ಆ ಪೈಕಿ 6 ಜನರಿಗೆ ಗಂಭೀರವಾಗಿ ಪೆಟ್ಟಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಾಂತಾರಾ ಚಿತ್ರದ ಶೂಟಿಂಗ್, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿನ ಪ್ರಾಂತ್ಯಗಳಲ್ಲಿ ಭರದಿಂದ ಶೂಟಿಂಗ್ ನಡೆಸಿತ್ತು. ಇತ್ತೀಚೆಗೆ ಕೊಲ್ಲೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಚಿತ್ರತಂಡ ಅಲ್ಲಿನ ಮುದೂರಿನ ಬಳಿ ಕೆಲವು ದೃಶ್ಯಗಳ ಶೂಟಿಂಗ್ ನಡೆಸಿತ್ತು. ಆನಂತರದಲ್ಲಿ, ಕೊಲ್ಲೂರಿನ ಮಾರ್ಗವಾಗಿ ಬೇರೆಡೆಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಿನಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 20 ಜೂನಿಯರ್ ಕಲಾವಿದರು ಸಾಗುತ್ತಿದ್ದ ಈ ಬಸ್ ಜಡ್ಕಳ್ ಬಳಿ ಸಾಗುತ್ತಿದ್ದಾಗ ತಗ್ಗೊಂದನ್ನು ಇಳಿದು ಹತ್ತುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸುದೈವವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Kantara cinema still
ಕಾಂತಾರ: ಚಾಪ್ಟರ್ 1 ಬಿಡುಗಡೆ ದಿನಾಂಕ ಘೋಷಣೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com