ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಚಿತ್ರದಲ್ಲಿ ಅತುಲ್ ಕುಲಕರ್ಣಿ ನಟನೆ

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಹುಮುಖ ಹಾಗೂ ಬಹುಭಾಷಾ ನಟ ಅತುಲ್ ಕುಲಕರ್ಣಿಯವರು ನಟಿಸುತ್ತಿದ್ದಾರೆ. ಅತುಲ್ ಅವರು ಈಗಾಗಲೇ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Atul Kulkarni
ಅತುಲ್ ಕುಲಕರ್ಣಿ
Updated on

ಸ್ಯಾಂಡಲ್‌ವುಡ್‌ನ ಯುವರಾಜ್ ಕುಮಾರ್ ಅಭಿನಯದ 2ನೇ ಚಿತ್ರ 'ಎಕ್ಕ' ಸಿನಿಮಾದ ಚಿತ್ರೀಕರಣ ನವೆಂಬರ್ 28ರಿಂದ ಪ್ರಾರಂಭವಾಗುತ್ತಿದ್ದು, ಚಿತ್ರದಲ್ಲಿ ಅತುಲ್ ಕುಲಕರ್ಣಿ ಅವರು ನಟಿಸುತ್ತಿದ್ದಾರೆಂದು ತಿಳಿದುಬಂದಿದೆ.

ಎಕ್ಕ ಚಿತ್ರ ಬೆಂಗಳೂರಿನ ಕರಾಳ ಮತ್ತು ಭೂಗತ ಜಗತ್ತಿನ ಕಥೆಯನ್ನು ಒಳಗೊಂಡಿದ್ದು, ಈ ಅಪಾಯಕಾರಿ ಜಗತ್ತಿನಲ್ಲಿ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿಯ ಕಥೆ ವಿವರಿಸಲಿದೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರ ಪೋಸ್ಟರ್ ನ್ನು ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.

ಈ ನಡುವೆ ಚಿತ್ರೀಕರಣಕ್ಕೆ ಆರಂಭಕ್ಕೆ ಸಿದ್ಧತ ನಡೆಸಿರುವ ಚಿತ್ರ ತಂಡ, ಚಿತ್ರದ ಕುರಿತು ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಹುಮುಖ ಹಾಗೂ ಬಹುಭಾಷಾ ನಟ ಅತುಲ್ ಕುಲಕರ್ಣಿಯವರು ನಟಿಸುತ್ತಿದ್ದಾರೆಂದು ತಿಳಿದುಬಂದಿದೆ. ಅತುಲ್ ಅವರು ಈಗಾಗಲೇ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮರಾಠಿ, ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ.

Atul Kulkarni
ಇನ್ನು 'ಯುವ' ಪರ್ವ ಆರಂಭ: ಅದ್ಧೂರಿ ಕಾರ್ಯಕ್ರಮದ ಮೂಲಕ ಚಿತ್ರರಂಗಕ್ಕೆ ಯುವ ರಾಜ್ ಕುಮಾರ್ ಭರ್ಜರಿ ಎಂಟ್ರಿ!

ಭೂಮಿಗೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅತುಲ್, ಕೊನೆಯ ಬಾರಿಗೆ ಮನಸ್ಮಿತಾ (2022) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದೀಗ ಎಕ್ಕ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಉತ್ತರಕಾಂಡ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಎಕ್ಕ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದು, ವಿಕ್ರಮ್ ಹತ್ವಾರ್ ಹಾಗೂ ರೋಹಿತ್ ಪದಕಿ ಜೊತೆಗೂಡಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಪಿಆರ್‌ಕೆ ಪ್ರೊಡಕ್ಷನ್ಸ್ (ಅಶ್ವಿನಿ ಪುನೀತ್ ರಾಜ್‌ಕುಮಾರ್), ಜಯಣ್ಣ ಫಿಲ್ಮ್ಸ್ (ಜಯಣ್ಣ ಮತ್ತು ಭೋಗೇಂದ್ರ), ಮತ್ತು ಕೆಆರ್‌ಜಿ ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್) ಮೂರು ಚಿತ್ರ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ. ಸತ್ಯ ಹೆಗಡೆ ಛಾಯಾಗ್ರಹಣ ಇರಲಿದೆ. ಚಿತ್ರವು 2025ರ ಮಧ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com